HEALTH TIPS

No title

ಕುತೂಹಲ ಮೂಡಿಸಿದ ದಶಾವದಾನದೊಂದಿಗೆ ಕೊಂಡೆವೂರಿನಲ್ಲಿ ಪ್ರತಿಷ್ಠಾ ವರ್ಧಂತಿ ಹಾಗೂ ನಕ್ಷತ್ರೇಷ್ಟಿಯಾಗದ ಎರಡನೇ ದಿನ ಇಷ್ಟಿ ಯಶಸ್ವಿ
    ಉಪ್ಪಳ: ಕೊಂಡೆವೂರಿನ ಶ್ರಿ ನಿತ್ಯಾನಂದ ಯೋಗಾಶ್ರಮದಲ್ಲಿ  ಪ್ರತಿಷ್ಠಾ ವರ್ಧಂತ್ಯುತ್ಸವ ವು ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ,   ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣರವರ ಆಚಾರ್ಯತ್ವದಲ್ಲಿ ಹಾಗೂ 2019ರಲ್ಲಿ ನಡೆಯಲಿರುವ 'ಅತಿರಾತ್ರ ಸೋಮಯಾಗ' ದ ಪೂರ್ವಭಾವಿಯಾದ ನಕ್ಷತ್ರೇಷ್ಟಿ ಯು ಶ್ರೌತ ವಿದ್ವಾಂಸರಾದ ಶ್ರೀಕ್ಷೇತ್ರ ಗೋಕರ್ಣದ ವೇದಮೂತರ್ಿ ಗಣೇಶ ವಾಸುದೇವ ಜೋಗಳೇಕರ್ರವರ ನೇತೃತ್ವದಲ್ಲಿ ಮತ್ತು ಆಯತಾಗ್ನಿ ಚಂದ್ರಶೇಖರ ಶಮರ್ಾರವರ ಉಪಸ್ಥಿತಿಯಲ್ಲಿ  ನಡೆಯುತ್ತಿದ್ದು, ಶುಕ್ರವಾರ ಬೆಳಿಗ್ಗೆ 6 ರಿಂದ 8.30ರ ವರೆಗೆ ನಿತ್ಯಾನಂದ ಗುರುಗಳಿಗೆ ನವಕ ಕಲಶಾಭಿಷೇಕ, ಗಾಯತ್ರೀ ದೇವಿಗೆ 49 ಕಲಶಾಭಿಷೇಕ, ಅಧಿವಾಸ ಹೋಮ ಮತ್ತು ಗಾಯತ್ರೀ ಯಾಗಗಳು ನಡೆಯಿತು. ಬೆಳಿಗ್ಗೆ ಕೃತ್ತಿಕಾದಿಂದ ವಿಶಾಖಾವರೆಗಿನ ನಕ್ಷತ್ರಗಳ 'ಇಷ್ಟಿ'ಯು ನಕ್ಷತ್ರೇಷ್ಟಿ ಮಂಟಪದಲ್ಲಿ ನಡೆಯಿತು.
ಅಪರಾಹ್ನ 3 ರಿಂದ ಗಾಯತ್ರೀ ಮಂಟಪದಲ್ಲಿ ದಶಾವದಾನಿ ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಇವರು ಅಷ್ಟಾವದಾನ (ಎಂಟು ದಿಕ್ಕಿನಿಂದ ನೂರೆಂಟು ಪ್ರಶ್ನೆ) ನಡೆಸಿಕೊಟ್ಟರು. ಪೃಚ್ಛಕರಾಗಿ, ನಿಷೇಧಾಕ್ಷರಿ- ವಿದ್ವಾನ್ ಮಹೇಶ್ ಭಟ್(ಅಷ್ಟಾವದಾನಿಗಳು), ದತ್ತಪದಿ-ವಿದ್ವಾನ್ ವಿನಾಯಕ ಭಟ್ ಓಡ್ಸೆಮನೆ, ಸಮಸ್ಯಾಪೂರ್ಣ-(ಕನ್ನಡ) ಅಮೃತೇಶ ಆಚಾರ್ಯ, ಸಮಸ್ಯಾಪೂರ್ಣ (ಸಂಸ್ಕೃತ)-ವಿದ್ವಾನ್ ರಾಧೇಶ್ ಆಚಾರ್ಯ, ಆಶುಕವಿತೆ- ಬ್ರಹ್ಮಶ್ರೀ ಕಮಲಾದೇವೀಪ್ರಸಾದ ಆಸ್ರಣ್ಣ, ಉದ್ದಿಷ್ಟಾಕ್ಷರಿ -ರವೀಂದ್ರ ಭಟ್ ಅತ್ತೂರ, ಸಂಖ್ಯಾಬಂಧ - ಬ್ರಹ್ಮಶ್ರೀ ಸದಾನಂದ ಆಸ್ರಣ್ಣ, ಅಪ್ರಸ್ತುತ ಪ್ರಸಂಗ- ವಾದಿರಾಜ ಕಲ್ಲೂರಾಯ, ಯಕ್ಷಗಾನ ಆಶುಕವಿತೆ- ಹರೀಶ್ ಬಳಂತಿಮೊಗರು ರವರುಗಳು ಭಾಗವಹಿಸಿದರು. ಸಂಜೆ 7.00 ಗಂಟೆಗೆ 'ಸವಿಜೀವನಂ ನೃತ್ಯ ಕಲಾಕ್ಷೇತ್ರ' ಕೊಂಡೆವೂರು, ಇವರು  ನಾಟ್ಯ ವೈಭವ -2018 ಪ್ರಸ್ತುತಪಡಿಸಿದರು.
 






Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries