ಭಾರತದಲ್ಲಿ ನಡೆಯಬೇಕಿದ್ದ 2021ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸ್ಥಳಾಂತರ ಸಾಧ್ಯತೆ!
ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ಭಾರಿ ಹಿನ್ನಡೆಯಾಗುವ ಸುದ್ದಿಯೊಂದು ಹೊರಬಿದ್ದಿದ್ದು, 2021ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬೇರೊಂದು ದೇಶಕ್ಕೆ ಸ್ಥಳಾಂತರವಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.
ವರದಿಯಲ್ಲಿರುವಂತೆ ಈ ಹಿಂದೆ ನಡೆದ ಐಸಿಸಿ ಸಭೆಯಲ್ಲಿ 2021ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತದಲ್ಲಿ ಆಯೋಜನೆ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಈಗಾಗಲೇ ಬಿಸಿಸಿಐ ಸರಣಿ ಆಯೋಜನೆ ಪೂರ್ವಭಾವಿ ಸಿದ್ಧತೆ ಆರಂಭಿಸಿರುವಂತೆಯೇ ಅತ್ತ ಐಸಿಸಿ ಇಡೀ ಟೂನರ್ಿಯನ್ನೇ ಭಾರತ ಹೊರತು ಪಡಿಸಿ ಬೇರೊಂದು ರಾಷ್ಟ್ರಕ್ಕೆ ವಗರ್ಾವಣೆ ಮಾಡಲು ಚಿಂತಿಸುತ್ತಿದೆಯಂತೆ. ಐಸಿಸಿಯ ಈ ನಿಧರ್ಾರಕ್ಕೆ ಕೇಂದ್ರ ಸಕರ್ಾರದ ತೆರಿಗೆ ನೀತಿ ಕಾರಣವಾಗಿದ್ದು, ಕ್ರಿಕೆಟ್ ಟೂನರ್ಿಗೆ ಕೇಂದ್ರ ಸಕರ್ಾರ ತೆರಿಗೆ ವಿನಾಯಿತಿ ನೀಡಬೇಕು ಎಂದು ಐಸಿಸಿ ಕೇಳಿಕೊಂಡಿದೆ. ಐಸಿಸಿ ಮನವಿಗೆ ಕೇಂದ್ರ ಸಕರ್ಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಐಸಿಸಿ ಟೂನರ್ಿಯನ್ನು ಬೇರೊಂದು ರಾಷ್ಟ್ರಕ್ಕೆ ವಗರ್ಾಯಿಸುವ ಚಿಂತನೆಯಲ್ಲಿ ತೊಡಗಿದೆ.
ಇತ್ತ ಬಿಸಿಸಿಐ ಕೂಡ ಟೂನರ್ಿಯನ್ನು ಭಾರತದಲ್ಲೇ ಆಯೋಜನೆ ಮಾಡಲು ಅವಿರತ ಶ್ರಮ ಪಡುತ್ತಿದ್ದು, ಐಸಿಸಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎನ್ನಲಾಗಿದೆ. ಅಂತೆಯೇ ಕೇಂದ್ರ ಸಕರ್ಾರದ ಮೇಲೂ ಸತತ ಒತ್ತಡ ಹೇರುತ್ತಿದ್ದು, ತೆರಿಗೆ ವಿನಾಯಿತಿಗೆ ಮನವಿ ಮಾಡಿದೆ.
ರೇಸ್ ನಲ್ಲಿ ಆಫ್ಘಾನಿಸ್ತಾನ, ಐಲರ್ೆಂಡ್:
ಇನ್ನು ಒಂದು ವೇಳೆ ಕೇಂದ್ರ ಸಕರ್ಾರ ತೆರಿಗೆ ವಿನಾಯಿತಿ ನೀಡದೇ ಹೋದಲ್ಲಿ ಚಾಂಪಿಯನ್ಸ್ ಟ್ರೋಫಿ ಭಾರತದಿಂದ ಹೊರಗೆ ಹೋಗಲಿದೆ. ಹೀಗೆ ಆಗಿದ್ದೇ ಆದರೆ ಐಸಿಸಿ ಮುಂದಿನ ನಿಧರ್ಾರ ಬಹುಶಃ ಆಫ್ಘಾನಿಸ್ತಾನ ಮತ್ತು ಐಲರ್ೆಂಡ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇತ್ತೀಚೆಗಷ್ಟೇ ಅಂದರೆ 2017ರ ಜೂನ್ ತಿಂಗಳಲ್ಲಿ ಐಸಿಸಿ ಈ ಎರಡೂ ದೇಶಗಳಿಗೆ ಪೂರ್ಣ ಪ್ರಮಾಣದ ಕ್ರೆಕೆಟ್ ಆಡುವ ದೇಶದ ಸ್ಥಾನಮಾನ ನೀಡಿತ್ತು. ಹೀಗಾಗಿ ಈ ದೇಶಗಳಲ್ಲಿ ಐಸಿಸಿ ತನ್ನ ಟೂನರ್ಿ ಆಯೋಜನೆ ಮಾಡುವ ಮೂಲಕ ಕ್ರಿಕೆಟ್ ಉತ್ತೇಜನಕ್ಕೆ ಒತ್ತು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಂದು ವೇಳೆ 2021ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂನರ್ಿ ಭಾರತದಿಂದ ಹೊರಗೆ ಹೋಗಿದ್ದೇ ಆದರೆ ಅದು ಬಿಸಿಸಿಐಗೆ ಆಗುವ ದೊಡ್ಡ ಅಪಮಾನವಾಗಲಿದ್ದು, ಈ ಹಿಂದೆ ಟೂನರ್ಿ ಆಯೋಜಿಸುವ ಸಂಬಂಧ ಬಿಸಿಸಿಐ ತನ್ನ ಪ್ರಭಾವ ಬಳಕೆ ಮಾಡಿ ಟೂನರ್ಿಯನ್ನು ತನ್ನಲ್ಲಿ ಆಯೋಜಿಸುವಂತೆ ಮಾಡಿತ್ತು. ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳು ಮುಂಚೂಣಿಯಲ್ಲಿದ್ದರೂ, ಬಿಸಿಸಿಐ 2021ರ ಟೂನರ್ಿಯನ್ನು ತಾನೇ ಆಯೋಜಿಸುವ ಕುರಿತು ಸದಸ್ಯರ ಮನವೊಲಿಕೆ ಮಾಡಿತ್ತು.