HEALTH TIPS

No title

                ವಕರ್ಾಡಿಯಲ್ಲಿ ವೆಲಂಕಣಿ ಮಹೋತ್ಸವ
    ಮಂಜೇಶ್ವರ: ವಕರ್ಾಡಿ  ಆರೋಗ್ಯಮಾತೆ (ವೆಲಂಕಣಿ) ಪುಣ್ಯಕ್ಷೇತ್ರದ 27ನೇ ವರ್ಷದ ವಾಷರ್ಿಕ ಮಹೋತ್ಸವವು ಭಾನುವಾರದಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. 3000 ಕ್ಕೂ ಹೆಚ್ಚು ವೆಲ್ಲಂಕಣಿ ಮಾತಾ ಭಕ್ತಾದಿಗಳು ಈ ಸಂಭ್ರಮದಲ್ಲಿ ಭಾಗಿಗಳಾಗಿ ಮಾತೆಯ ಕೃಪೆಗೆ ಪಾತ್ರರಾದರು.
   ಬೆಳಗ್ಗೆ ದಾನಿಗಳಿಗೆ ಮೊಂಬತ್ತಿ ವಿತರಣೆಯ ನಮನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾಸರಗೋಡು ಜಿಲ್ಲೆಯ ಮೂಲ ನಿವಾಸಿಗಳಲ್ಲಿ ಮೊದಲ ಕ್ಯಾಥೋಲಿಕ ಧರ್ಮಗುರುಗಳಾದ ಹಿರಿಯರಾದ ವಂದನೀಯ ಸ್ವಾಮಿ ಬೆಂಜಮಿನ್ ಡಿ`ಸೋಜಾ ಅವರು ದಾನಿಗಳಿಗೆ ಮೊಂಬತ್ತಿ ವಿತರಿಸಿದರು. ಬಳಿಕ ನಡೆದ ಬಲಿಪೂಜೆಯ ನೇತೃತ್ವವನ್ನು ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ನಿದರ್ೆಶಕರಾದ ವಂದನೀಯ ಸ್ವಾಮಿ ಬೆಂಜಮಿನ್ ಪಿಂಟೊ ಅವರು ವಹಿಸಿದ್ದರು. ಮಂಗಳೂರು ಜೆಪ್ಪು ಸಂತ ಜೋಸೆಫ್ ಗುರುಕುಲದ ಆಧ್ಯಾತ್ಮಿಕ ನಿದರ್ೆಶಕರಾದ ವಂದನೀಯ ಸ್ವಾಮಿ ಬೊನಿಫಾಸ್ ಪಿಂಟೊ ಅವರು ಅಂದಿನ ವಿಶೇಷ ಪ್ರವಚನಗೈದರು. ಜಪಸರ ಪ್ರಾರ್ಥನೆಯ ಮುಕಾಂತರ ಕೌಟುಂಬಿಕ ಆನ್ಯೋನ್ನತೆ ಹಾಗೂ ಏಕತೆಯ ಸಂದೇಶವನ್ನು ಅವರು ತುಂಬಿದ ಸಭೆಯಲ್ಲಿ ನೀಡಿದರು. ವಿವಿಧ ಧರ್ಮಕೇಂದ್ರಗಳಿಂದ ಬಂದಿದ್ದ ಒಂಬತ್ತು ಧರ್ಮಗುರುಗಳು ಪ್ರತ್ಯೇಕ ಪ್ರಾರ್ಥನೆಯೊಂದಿಗೆ ರೋಗಿಗಳಿಗೆ ಆಶೀವರ್ಾದವನ್ನು ನೀಡಿದರು. ಸ್ಥಳೀಯ ಧರ್ಮಗುರುಗಳು ಭಕ್ತಾದಿಗಳು ವೆಲ್ಲಂಕಣಿ ಮಾತೆಗೆ ಆಪರ್ಿಸಿದ ಸ್ತುತಿ, ಆಶೋತ್ತರಗಳು ಹಾಗೂ ಪ್ರಾರ್ಥನೆಗಳನ್ನು ಘೋಷಿಸಿದರು. ಪೂಜಾದಿಗಳ ಮುಕ್ತಾಯದ ನಂತರ ನೆರೆದ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
   ಈ ಪ್ರಯುಕ್ತ ಸಂಜೆ ವಕರ್ಾಡಿ ಚಚರ್್ ವಠಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು. ಶಾಲಾ ವಿದ್ಯಾಥರ್ಿಗಳು ಹಾಗು ವಿವಿಧ ಹವ್ಯಾಸಿ ಸ್ಥಳೀಯ ಪಂಗಡಗಳಿಂದ ವಿವಿದ ವಿನೋದಾವಳಿಗಳು ಪ್ರಸ್ತುತಿಗೊಂಡವು. ಬಲೆ ತೆಲಿಪಾಲೆ ಖ್ಯಾತಿಯ ವೃತ್ತಿಪರ ಕಲಾತಂಡ `ತೆಲಿಕೆದ ತೆನಾಲಿ ಕಾರ್ಕಳ' ಇವರಿಂದ ಎರಡು ಗಂಟೆಗಳ  ನಿರಂತರ `ತೆಲಿಕೆದ ಬರ್ಸ' ಹಾಸ್ಯ ಕಾರ್ಯಕ್ರಮ ನಡೆಯಿತು. ವಕರ್ಾಡಿಯಲ್ಲಿ ಈ ಹಿಂದೆ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದು ಈಗ ದೇಲಂತಬೆಟ್ಟು ಧರ್ಮಗುರುಗಳಾಗಿರುವ ವಂದನೀಯ ಸ್ವಾಮಿ ಪೀಟರ್ ಸೆರಾವೊ ಮುಖ್ಯ ಅಥಿತಿಗಳಾಗಿ ಎಲ್ಲರೂ ಒಂದಾಗಿ ಬಾಳಲು ಕರೆ ನೀಡಿದರು. ಸ್ಥಳೀಯ ಧರ್ಮಗುರುಗಳಾದ ವಂದನೀಯ ಸ್ವಾಮಿ ಫ್ರಾನ್ಸಿಸ್ ರೊಡ್ರಿಗಸ್ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಕ್ಯಾಥೊಲಿಕ್ ಸಭಾ ವಕರ್ಾಡಿ ಘಟಕಾಧ್ಯಕ್ಷ  ರೋಬಿನ್ ಡಿ'ಸೋಜಾ ಸ್ವಾಗತಿಸಿ, ಕ್ಯಾಥೊಲಿಕ್ ಸಭಾ ಕಾರ್ಯದಶರ್ಿ ಐವನ್ ಡಿ'ಸೋಜಾ ವಾಷರ್ಿಕ ವರದಿಯನ್ನು ವಾಚಿಸಿದರು. ರೋಶನ್ ಡಿ' ಸೋಜಾ ವಂದಿಸಿದರು. ಸ್ಮಿತಾ ಡಿ'ಸೋಜಾ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರಿನ ಕಾಪುಚಿನ್ ಯಾಜಕರಾದ ವಂದನೀಯ ಸ್ವಾಮಿ ಫ್ರೆಡ್ರಿಕ್ ರೊಡ್ರಿಗಸ್, ಬೋಳ ಧರ್ಮಗುರುಗಳಾದ ವಂದನೀಯ ಸ್ವಾಮಿ ಮೈಕಲ್ ಡಿ'ಸೋಜಾ, ಬ್ರದರ್ ಪ್ರೇಮ್ಜಿತ್ ಮಾಟರ್ಿಸ್, ಕೊನ್ವೆಂಟ್ಗಳ ಮುಖ್ಯಸ್ತರಾದ ಸಿಸ್ಟರ್ ಜೆರೋಜಾ ಫೆನರ್ಾಂಡಿಸ್ ಮತ್ತು ಸಿಸ್ಟರ್ ಸಿಂತಿಯಾ ಸಿಕ್ವ್ವೆರಾ, ಚಚರ್್ ಪಾಲನಾ ಸಮಿತಿಯ ಉಪಾಧ್ಯಕ್ಷ ರೋನಿ ಡಿ'ಸೋಜಾ, ಕಾರ್ಯದಶರ್ಿಗಳಾದ ಜಯಪ್ರಕಾಶ್ ಡಿ'ಸೋಜಾ ಮತ್ತು ಇತರರು ಉಪಸ್ಥಿತರಿದ್ದರು. ವಂದನೀಯ ಸ್ವಾಮಿ ಲೋರೆನ್ಸ್ ಮಾಟರ್ಿಸ್ ರವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಈ ಪುಣ್ಯಕ್ಷೇತ್ರವನ್ನು 1992 ಮಾಚರ್್ 1 ರಂದು ಆರಂಭಿಸಲಾಗಿತ್ತು. ವೆಲಂಕಣಿಯಿಂದಲೇ ತರಿಸಿದ ಮಾತೆಯ ವಿಗ್ರಹವನ್ನು `ವ್ಯ ಮೆರವಣಿಗೆಯಲ್ಲಿ ತಂದು ಚಚರ್್ನಲ್ಲಿ ಸ್ಥಾಪಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಪ್ರತಿ ಶನಿವಾರ ಬಲಿ ಪೂಜೆಯೊಂದಿಗೆ ಜಪಸರ ಪ್ರಾರ್ಥನೆ ನಡೆಯುತ್ತಾ ಬಂದಿದೆ.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries