HEALTH TIPS

No title

        ರಸ್ತೆ ಉದ್ಘಾಟನೆಗಾಗಿ ಕಾದು ನಿಲ್ಲದೆ ಇಹಲೋಕ ತ್ಯಜಿಸಿದ ಎಂಡೋ ಸಂತ್ರಸ್ತೆ
   ಪೆರ್ಲ: ಎಂಡೋಸಲ್ಫಾನ್ ಬಾಹುಳ್ಯದಿಂದ ದುರಂತಕ್ಕೊಳಗಾಗಿ ಸಾವನ್ನಪ್ಪಿದ ಪಿಲಿಂಗಲ್ಲು ನೀಚರ್ಾಲು ಶೀನ ಮಡಿವಾಳ ಅವರ ಪುತ್ರಿ ಉಷಾ(40) ಇಹಲೋಕ ತ್ಯಜಿಸಿದ್ದಾರೆ. ಎಂಡೋ ಬಾಧೆಯ ಬಲಹೀನತೆಯಿಂದ ನಡೆದಾಡಲೂ ಅಶಕ್ತರಾಗಿದ್ದ ಉಷಾರವರು ಇತ್ತೀಚಿಗಷ್ಟೇ ಎಂಡೋಸಲ್ಫಾನ್ ಪಟ್ಟಿಯಲ್ಲಿ ಸೇರಲು ಅರ್ಹರಾಗಿದ್ದರೂ ಕೊನೆ ವರೆಗೂ ಪಟ್ಟಿಗೆ ಸೇರ್ಪಡೆಗೊಳ್ಳದಿದ್ದುದರಿಂದ ಸರಕಾರದ ವತಿಯಿಂದ ಆಥರ್ಿಕ ಸಹಾಯ ಲಭಿಸಿರಲಿಲ್ಲ. ಇವರ ತುತರ್ು ಚಿಕಿತ್ಸೆಗಾಗಿ ಕುಚರ್ಿ ಮೂಲಕ ಹಲವು ಕಿ.ಮೀ ಹೊತ್ತೊಯ್ಯಬೇಕಾದ ಹಲವಾರು ಉದಾಹರಣೆಗಳು ಪಿಲಿಂಗಲ್ಲು ನೀಚರ್ಾಲು ಭಾಗದಲ್ಲಿ ಈ ಹಿಂದೆ ನಡೆದಿದ್ದವು.
   ಸ್ವರ್ಗವನ್ನು ನರಕವಾಗಿಸಿದ ಎಮಡೋ-ಕಂಪೆನಿ ಗಳಿಸಿದ್ದು ಕೋಟಿ ಲಕ್ಷ ರೂ-ಸ್ಥಳೀಯರಿಗೆ ಇಲ್ಲ ನೆಲೆ: 
    ಕುಗ್ರಾಮವಾಗಿದ್ದ ಸ್ವರ್ಗ ಪರಿಸರ ಎಮಡೋ ದುಷ್ಪರಿಣಾಮದಿಂದ ನೂರಾರು ಜನರು ನಿರಂತರ ಜೀವ ವೈಕಲ್ಯಕ್ಕೊಳಗಾಗಿ ದುರಮತ ಅನುಭವಿಸುತ್ತಲೇ ಬಂದಿದ್ದಾರೆ. ಎಮಡೋ ಕಂಪೆನಿ, ಸರಕಾರ ಗೇರು ಬೀಜ, ವಿಷದ ಹೆಸರಲ್ಲಿ ಕೋಟಿಗಟ್ಟಲೆ ರೂ. ಗಳಿಸಿದ್ದರೂ,, ಇಲ್ಲಿಯ ನಾಗರಿಕರು ಅನುಭವಿಸುವ ಸಂಕಷ್ಟಕ್ಕೆ ಐದೌದು ವರ್ಷಗಳಿಗೆ ಬದಲಾಗಿ ಬರುವ ಸರಕಾರಗಳು ಒಂದೊಂದು ಕಾರಣ ನೀಡಿ ನೆರವನ್ನು ಕಡಿತಗೊಳಿಸುತ್ತಿದೆ.
   ಸೂಕ್ತ ರಸ್ತೆ ಸಂಪರ್ಕ ಇಲ್ಲದೆ ನರಕಯಾತನೆ ಪಡುತ್ತಿದ್ದ ಉಷಾರವರಿಗೆ ವರ್ಷದ ಹಿಂದೆ ಅಜಿತ್ ಸ್ವರ್ಗ ನೇತೃತ್ವದ ಸುದರ್ಶನ ತಂಡ ರಸ್ತೆ ಸಂಪರ್ಕ ನೀಡುವ ಮೂಲಕ ಸಹಾಯ ಹಸ್ತ ಚಾಚಿತ್ತು.ಸುಮಾರು ಹನ್ನೆರಡು ಮನೆಗಳಿರುವ ಪಿಲಿಂಗಲ್ಲು ನೀಚರ್ಾಲು ಎಂಬ ಕುಗ್ರಾಮದಲ್ಲಿ ಎಂಡೋ ಬಾಧಿತ ಕುಟುಂಬಗಳಿದ್ದು ರಸ್ತೆ ಸಂಪರ್ಕ ಇಲ್ಲದೆ ವರ್ಷಗಳಿಂದ ಪರಿತಪಿಸುವಂತಾಗಿತ್ತು. ಸ್ವರ್ಗ-ಕನ್ಯಾರಮೂಲೆ ಮೂಲಕ ಗ್ರಾಮಾಭಿವೃದ್ಧಿ ಸಮಿತಿ ಸುದರ್ಶನ ತಂಡವು ರಸ್ತೆ ನಿಮರ್ಾಣವನ್ನು ಕೈಗೆತ್ತಿಕೊಂಡು ಪೂರೈಸಿದ ಪ್ರಥಮ ವರ್ಷದಲ್ಲಿ ರಸ್ತೆ ಸಂಪರ್ಕದಿಂದ ಬಹಳ ಸಂತಸಪಟ್ಟಿದ್ದ ಉಷಾರವರು ಬುಧವಾರದಂದು ಅಸುನೀಗಿದ್ದಾರೆ.ಫಲಾನುಭವಿಗಳಿಂದ ಸಂಗ್ರಹವಾದ ಹಣದೊಂದಿಗೆ ಸುದರ್ಶನ ನಿಮರ್ಿತ ಸ್ವರ್ಗ-ಮಲೆತ್ತಡ್ಕ ರಸ್ತೆಯು ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಅವರಿಂದ ಉದ್ಘಾಟನೆಗೊಂಡಿದ್ದರೂ, ಅದಕ್ಕಿಂತ ತುಸು ಹಿಂದೆ ನಿಮರ್ಿತವಾದ ಕನ್ಯಾರುಮೂಲೆ-ಪಿಲಿಂಗಲ್ಲು ರಸ್ತೆ ಉದ್ಘಾಟನೆಗಾಗಿ ಕಾದು ನಿಂತಿದೆ.
ಎಂಡೋ ದುರಂತಕ್ಕೊಳಗಾಗಿ ಅಸಹಾಯಕ ಸ್ಥಿತಿಯಲ್ಲಿ ತಾಯಿ ಮನೆ ನೀಚರ್ಾಲು ಪಿಲಿಂಗಲ್ಲುವಿನಲ್ಲೇ ವಾಸವಾಗಿದ್ದ ಉಷಾ ಅವರು ಇತ್ತೀಚೆಗಷ್ಟೇ ಬೆಳ್ತಂಗಡಿ ಸಮೀಪದ ಉಜಿರೆ ಕಲ್ಮಂಜದ ಪತಿ ಕೂಲಿ ಕಾಮರ್ಿಕ ನಾರಾಯಣರವರ ಮನೆಗೆ ತೆರಳಿದ್ದರು.ರೋಗ ಉಲ್ಬಣಿಸಿದ ಕಾರಣ ಬುಧವಾರ  ಬೆಳಗ್ಗೆ ನಾಲ್ಕು ಗಂಟೆ ವೇಳೆಗೆ ಅಸುನೀಗಿದ್ದಾರೆ. ಜೀವನೊಪಾಯಕ್ಕೆ ಉಷಾರ ತಾಯಿ ಬೀಡಿಕಟ್ಟುತ್ತಿದ್ದು, ಅದರಿಂದ ಸಿಗುವ ಅಲ್ಪ ಹಣದಿಂದ ಮನೆಯ ಖಚರ್ು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದರು.ಉಷಾರ ಏಕೈಕ ಸಹೋದರ ರಾಧಾಕೃಷ್ಣ ಇಪ್ಪತ್ತು ವರ್ಷಗಳ ಹಿಂದೆ ಬಾವಿ ನಿಮರ್ಾಣದ ವೇಳೆ ಭಾರೀ ಪ್ರಮಾಣದ ಮಣ್ಣು ಜರಿದು ಬಿದ್ದ ಪರಿಣಾಮ ಮೃತಪಟ್ಟಿದ್ದರು.
   ಉಷಾ ತಾಯಿ ಲಕ್ಷ್ಮೀ, ಪತಿ ನಾರಾಯಣ, ಪುತ್ರಿ ಭಾರತಿ, ಮುತ್ರ ಶಶಾಂಕ್ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries