HEALTH TIPS

No title

           40ನೇ ಸಂಸ್ಕೃತ ಅಧ್ಯಾಪಕ ಫೆಡರೇಶನ್ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ
                ಗಮನ ಸೆಳೆದ ರ್ಯಾಲಿ
   ಕಾಸರಗೋಡು: ಕೇರಳ ಸಂಸ್ಕೃತ ಅಧ್ಯಾಪಕ ಫೆಡರೇಶನ್(ಕೆಎಸ್ಟಿಎಫ್) 40ನೇ ರಾಜ್ಯ ಸಮ್ಮೇಳನ ಗುರುವಾರ ಕಾಸರಗೊಡು ನಗರಸಭಾ ಸಭಾಂಗಣದಲ್ಲಿ ವಿದ್ಯಕ್ತವಾಗಿ ಆರಂಭಗೊಂಡಿದ್ದು, ಫೆ.24ರ ವರೆಗೆ ವಿವಿಧ ಕಾರ್ಯಚಟುವಟಿಕೆಗಳೊಂದಿಗೆ ನಡೆಯಲಿದೆ.
    ಸಮಾರಂಭದ ಸಭಾ ಕಾರ್ಯಕ್ರಮವನ್ನು ಬೆಳಿಗ್ಗೆ ದೀಪ ಬೆಳಗಿಸಿ ಉದ್ಘಾಟಿಸಿದ ಉದುಮ ಶಾಸಕ ಕೆ.ಕುಂಞಿರಾಮನ್ ಮಾತನಾಡಿ, ಶ್ರೀಮಂತ ಸಾಹಿತ್ಯ, ಸಾಂಸ್ಕೃತಿಕ ಹಿನ್ನೆಲೆಯ ಸಂಸ್ಕೃತ ಭಾಷೆಯ ಅಧ್ಯಯನಕ್ಕೆ ರಾಜ್ಯ ಸರಕಾರ ಇತರ ರಾಜ್ಯಗಳಿಗಿಂತ ಹೆಚ್ಚಿನ ಪ್ರಧಾನ್ಯತೆ ನೀಡುತ್ತಿದೆ. ರಾಜ್ಯದಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ನೀಡುವಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು. ಸಂಸ್ಕೃತ ಶಿಕ್ಷಣ ವ್ಯವಸ್ಥೆಯ ಸವಾಲುಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಸಮ್ಮೇಳನ ಯಶಸ್ವಿಯಾಗಿ ಹೊರಹೊಮ್ಮಲಿ. ವರ್ತಮಾನದ ಸಮಸ್ಯೆಗಳಿಗೆ ಪರಿಹಾರವೊದಗಿಸುವಲ್ಲಿ ಈ ಸಮ್ಮೇಳನ ಯಶಸ್ವಿಯಾಗಲಿ ಎಂದು ತಿಳಿಸಿದರು.
   ಸಂಸ್ಕೃತ ಅಧ್ಯಾಪಕ ಫೆಡರೇಶನ್ ರಾಜ್ಯಾಧ್ಯಕ್ಷ ವೇಣು ಚೆವ್ವಲ್ಲೂರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಕೃತ ಅಧ್ಯಾಪಕ ಸಂಘಟನೆಯು ಯಾವುದೇ ರಾಜಕೀಯ, ಸಂಘಟನೆಗಳಲ್ಲಿ ಗುರುತಿಸಲ್ಪಡದೆ ಎಲ್ಲಾ ಸಂಸ್ಕೃತ ಶಿಕ್ಷಕರ ಏಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಸಂಸ್ಕೃತ ಶಿಕ್ಷಣಕ್ಕೆ ಸರಕಾರ ಆದ್ಯತೆ ನೀಡುತ್ತಿದ್ದರೂ, ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗತ್ಯ ಪ್ರಮಾಣದ ಸಂಸ್ಕೃತ ಶಿಕ್ಷಕರಿಲ್ಲದೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಮೂರು ಲಕ್ಷಕ್ಕಿಂತಲೂ ಅಧಿಕ ಎಳೆಯ ವಿದ್ಯಾಥರ್ಿಗಳು ರಾಜ್ಯಾದ್ಯಂತ ಕಿರಿಯ ಶ್ರೇಣಿಯಲ್ಲೇ ಸಂಸ್ಕೃತ ಶಿಕ್ಷಣದತ್ತ ಆಸಕ್ತರಾಗಿರುವಾಗ ಇದು ವ್ಯವಸ್ಥೆಯನ್ನು ಬಾಧಿಸುತ್ತಿದೆ. ಈ ಬಗ್ಗೆ ಸರಕಾರ ಅಗತ್ಯ ಕ್ರಮಕೈಗೊಳ್ಳಲೇ ಬೇಕೆಂದು ಆಗ್ರಹಿಸಿದರು.
   ಸಮಾರಂಭದಲ್ಲಿ ಸಮ್ಮೇಳನದ ಅಂಗವಾಗಿ ಹೊರತಂದಿರುವ ಸ್ಮರಣ ಸಂಚಿಕೆಯನ್ನು ಕಾಲಡಿ ವಿವಿಯ ಪಯ್ಯನ್ನೂರು ವಿಭಾಗೀಯ ಘಟಕದ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಇ.ಶ್ರೀಧರನ್ ಬಿಡುಗಡೆಗೊಳಿಸಿ ಮಾತನಾಡಿ, ಭಾಷೆ ಮನುಷ್ಯರ ಭಾವನಾತ್ಮಕತೆಯ ಸಂಕೇತವಾಗಿದ್ದು, ಮಾನವ ಸೃಷ್ಟಿಯ ಆದಿಯಿಂದ ಇಂದಿನವರೆಗೆ ಜಗತ್ತನ್ನು ಬೆಸೆದಿರುವುದು ಇದೇ ಭಾವನಾತ್ಮಕತೆಯಾದ ಭಾಷೆಯಿಂದಾಗಿದೆ ಎಂದು ತಿಳಿಸಿದರು. ಪ್ರಸ್ತುತ ಜಗತ್ತು ವ್ಯಾವಹಾರಿಕತೆಯತ್ತ ಮುಖಮಾಡಿರುವುದರಿಂದ ಭಾವನಾತ್ಮಕತೆ ಅರ್ಥ ಕಳಕೊಳ್ಳುವ ಭೀತಿಯಲ್ಲಿದ್ದು, ತತ್ಪರಿಣಾಮವಾಗಿ ಭಾಷೆಗಳ ಮೇಲೆ ಇದು ಪ್ರಭಾವ ಬೀರುವುದು. ಇತರ ಭಾಷೆಗಳ ಮಾತೃ ಸ್ವರೂಪಿಯಾದ ಸಂಸ್ಕೃತದ ಹಿಂದುಳಿಯುವಿಕೆ ಇತರ ಭಾಷೆಗಳನ್ನೂ ಅಧಃಪತನಕ್ಕೆ ತಳ್ಳುವುದು. ಈ ಕಾರಣದಿಂದ ಸಂಸ್ಕೃತ ಶಿಕ್ಷಣಕ್ಕೆ ಕ್ರಿಯಾತ್ಮಕವಾದ ಯೋಜನೆಗಳಿಗೆ ಕೈಜೋಡಿಸಬೇಕಿದ್ದು, ಅಂತಹ ಯತ್ನಗಳಲ್ಲಿ ವ್ಯಸ್ತರಾದ ಸಂಸ್ಕೃತ ಶಿಕ್ಷಕರ ಕನಿಷ್ಠ ಬೇಡಿಕೆಗಳಿಗೆ ಸರಕಾರ, ಸಂಬಂಧಪಟ್ಟವರು ಕಾಲಾಕಾಲಕ್ಕೆ ಸ್ಪಂಧಿಸಬೇಕು ಎಂದು ತಿಳಿಸಿದರು.
     ಸಮ್ಮೇಳನ ಪ್ರಚಾರ ಸಮಿತಿ ಅಧ್ಯಕ್ಷ ಕುಂಞಿಕೃಷ್ಣನ್ ಮುಟ್ಟತ್ ಸ್ಮರಣ ಸಂಚಿಕೆ ಸ್ವೀಕರಿಸಿದರು. ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಅಭಿಲಾಷ್ ಎಂ, ರಾಜ್ಯ ಘಟಕದ ಸದಸ್ಯ ಕೆ.ರಾಘವನ್, ರಾಜ್ಯ ಉಪಾಧ್ಯಕ್ಷೆ ಸರೋಜಿನಿ ಕೆ, ಜಿಲ್ಲಾ ಕಾರ್ಯದಶರ್ಿ ಸುನಿಲ್ ಕುಮಾರ್, ಎನ್ಟಿಯು ಅಧ್ಯಾಪಕ ಸಂಘದ ಜಿಲ್ಲಾ ಕಾರ್ಯದಶರ್ಿ ಪ್ರಭಾಕರನ್ ನಾಯರ್, ಕೆಎಟಿಎಫ್ ಸಂಘಟನೆಯ ರಾಜ್ಯ ಕಾರ್ಯದಶರ್ಿ ಮೂಸಕುಟ್ಟಿ ವಿ, ಕೆಎಸ್ಟಿಯು ಸಂಘಟನೆಯ ಜಿಲ್ಲಾ ಕಾರ್ಯದಶರ್ಿ ಅಬ್ದುಲ್ ಗಫೂರ್ ದೇಳಿ, ಕೆಯುಟಿಎ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅಸೀಸ್ ಟಿ, ಕೆಎಎಂಎ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಿರ್ಸಾಹಿದ್ ಯು, ಕೇರಳ ರಾಜ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ರಾಜ್ಯಾಧ್ಯಕ್ಷ ರವೀಂದ್ರನಾಥ ಕೆ.ಆರ್, ಕೇಶವ ನಂಬೂದಿರಿ, ರಾಜ್ಯ ಘಟಕದ ಸದಸ್ಯ ವಿಷ್ಣು ವಯನಾಡು, ಸುನಿಲ್ ಅಂಗಡಿಕಾಲ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರ್ಯಸಿದರು.
   ಸಂಸ್ಕೃತ ಅಧ್ಯಾಪಕ ರಾಜ್ಯ ಸಮ್ಮೇಳನ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಮಧು ಕೆ.ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದಶರ್ಿ ಹರಿಕುಮಾರ್ ಇ.ಎ ವಂದಿಸಿದರು. 
  ಸಮ್ಮೇಳನದ ಅಂಗವಾಗಿ ಬೆಳಿಗ್ಗೆ 7.30ಕ್ಕೆ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲು ಪರಿಸರದಿಂದ ಸಮ್ಮೇಳನ ನಗರಕ್ಕೆ ಸಮ್ಮೇಳನ ಜ್ಯೋತಿ (ದೀಪಶಿಖಾ) ರ್ಯಾಲಿ ನಡೆಯಿತು. ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಸಮ್ಮೇಳನ ನಾಯಕರಿಗೆ ದೀವಟಿಗೆ ಹಸ್ತಾಂತರಿಸಿ ರ್ಯಾಲಿಗೆ ಚಾಲನೆ ನೀಡಿದರು. 9ಕ್ಕೆ ಸಮ್ಮೇಳನ ನಡೆಯುವ ನಗರಸಭಾ ಸಭಾಂಗಣದಲಲಿ ರ್ಯಾಲಿಗೆ ಸ್ವಾಗತ ನೀಡಲಾಯಿತು.  ಸಂಘಟನೆಯ ರಾಜ್ಯಾಧ್ಯಕ್ಷ ವೇಣು ಚೆವ್ವಲ್ಲೂರು ಧ್ವಜಾರೋಹಣಗೈದರು.
       ಬಳಿಕ ಪ್ರತಿನಿಧಿ ಸಮ್ಮೇಳನವು ವಿ.ಪದ್ಮನಾಭನ್ ಅಧ್ಯಕ್ಷತೆಯಲ್ಲಿ ನಡೆಯಿತು.  ಮಾಜೀ ರಾಜ್ಯಾಧ್ಯಕ್ಷ ಪ್ರದೀಪ್ ಕುಮಾರ್ ಕೆ. ಉದ್ಘಾಟಿಸಿದರು. ನ್ಯಾಯವಾದಿ ಸುರೇಂದ್ರನ್ ಕಡಯಕೋಟೆ, ವಿ.ವಿಜಯನ್ ಮಟ್ಟನ್ನೂರ್, ಮಧುಸೂದನನ್ ವಿ.ಎಲ್, ಟಿ.ಕೆ.ಸಂತೋಷ್ ಕುಮಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬಳಿಕ ವಿವಿಧ ಚಚರ್ೆಗಳು, ಗೋಷ್ಠಿಗಳು ನಡೆಯಿತು.  ಸಂಸ್ಕೃತ ಶಿಕ್ಷಕರ ಸಾಧನೆ-ಸವಾಲುಗಳ ಬಗ್ಗೆ ವಿಷಯ ಮಂಡನೆ ನಡೆಯಿತು. ಸಂಜೆ 5.30 ಕ್ಕೆ ಸಾಂಸ್ಕೃತಿಕ ಸಮ್ಮೇಳನ ನಡೆಯಿತು. ಜಿಲ್ಲೆಯ ವಿವಿಧ ಶಾಲೆಗಳ ಸಂಸ್ಕೃತ ವಿದ್ಯಾಥರ್ಿಗಳು ಮತ್ತು ಶಿಕ್ಷಕರಿಂದ ಸಂಸ್ಕೃತ ಯಕ್ಷಗಾನ ಪ್ರದರ್ಶನಗೊಂಡಿತು.
    ಇಂದಿನ ಕಾರ್ಯಕ್ರಮ:
    ಫೆ.23 ರಂದು ಬೆಳಿಗ್ಗೆ 9 ಕ್ಕೆ ಸಂಸ್ಕೃತ ಶಿಕ್ಷಕಿಯರಿಂದ ಬೃಹತ್ ತಿರುವಾದಿರ ನೃತ್ಯ, 10ಕ್ಕೆ ವಿದ್ಯಾಭ್ಯಾಸ ಗೋಷ್ಠಿ ನಡೆಯಲಿದ್ದು, ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. ನಿವೃತ್ತ ಕೇಂದ್ರ ಸರಕಾರಿ ಕಾರ್ಯದಶರ್ಿ ವಿ.ವಿ.ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದರ್ಭ ಸಮ್ಮೇಳನ ಲಾಂಛನ ರಚಿಸಿದ ಧರ್ಮತ್ತಡ್ಕ ಶಾಲಾ ಶಿಕ್ಷಕ ಶಿವಪ್ರಸಾದ್ ರವರನ್ನು ಗೌರವಿಸಲಾಗುವುದು. 11.30 ರಿಂದ ನಡೆಯುವ ಸಂಸ್ಕೃತ ಸಮ್ಮೇಳನವನ್ನು ಕಾಲಡಿ ಶ್ರೀಶಂಕರಾಚಾರ್ಯ ವಿವಿಯ ಉಪಕುಲಪತಿ ಡಾ.ಧರ್ಮರಾಜ್ ಅಟಾಟ್ಟ್ ಉದ್ಘಾಟಿಸುವರು. ಚೆನ್ನೈ ಸಂಸ್ಕೃತ ಕಾಲೇಜು ಪ್ರಾಂಶುಪಾಲ ಟಿ.ವಿ.ಆರ್. ನಂಬೂದಿರಿ ಅಧ್ಯಕ್ಷತೆ ವಹಿಸುವರು. ಚಲನಚಿತ್ರ ನಿದರ್ೇಶಕ ಡಾ.ಜಿ. ಪ್ರಭ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಅಪರಾಹ್ನ ರಾಜ್ಯ ಸಮ್ಮೇಳನದ ಸಮಾರೋಪ ನಡೆಯಲಿದ್ದು, ಜಿ.ಪಂ. ಅಧ್ಯಕ್ಷ ಎಜಿಸಿ ಬಶೀರ್ ಅಧ್ಯಕ್ಷತೆ ವಹಿಸುವರು. ಶಾಸಕ ಎಂ.ರಾಜಗೋಪಾಲ್ ಉದ್ಘಾಟಿಸುವರು. ಈ ಸಂದರ್ಭ ನಿವೃತ್ತರಾಗುವ ಶಿಕ್ಷಕರನ್ನು ಬೀಳ್ಕೊಡಲಾಗುವುದು.
   



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries