HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ರಸ್ತೆ ದುರವಸ್ಥೆ-ಕಾಮರ್ಿಕರ ಮುಷ್ಕರ 4ನೇ ದಿನ-ಸಂಬಂಧಪಟ್ಟವರ ನಿರ್ಲಕ್ಷ್ಯಕ್ಕೆದುರ ಆಕ್ರೋಶ
   ಪೆರ್ಲ : ಆಡಳಿತ ವರ್ಗದ ನಿರಾಸಕ್ತಿಯ ಕಾರಣ ಅತ್ಯಂತ ಶೋಚನೀಯಾವಸ್ಥೆಯ ಸಂಚಾರ ಸಂಕಷ್ಟಕರವಾಗಿರುವ ಚೆರ್ಕಳ-ಕಲ್ಲಡ್ಕ ಅಂತರ್ ರಾಜ್ಯ ಹೆದ್ದಾರಿಯನ್ನು ಡಾಮರೀಕರಣಗೊಳಿಸಿ ಸಂಚಾರ ಯೋಗ್ಯಗೊಳಿಸಬೇಕೆಂದು ಒತ್ತಾಯಿಸಿ ಅಧಿಕೃತರಿಗೆ ಬಿಸಿ ಮುಟ್ಟಿಸಲು ಖಾಸಗೀ ಬಸ್ ಕಾಮರ್ಿಕರು ನಡೆಸುತ್ತಿರುವ ಮುಷ್ಕರ ಗುರುವಾರ ನಾಲ್ಕನೇ ದಿನ ಪೂರೈಸಿದ್ದು, ಯಾವುದೇ ಖಾಸಗೀ ಬಸ್ ಸಂಚರಿಸದೆ ಯಶಸ್ವಿಯಾಗಿ ಮುಷ್ಕರ ಮುಂದುವರಿದಿದೆ.   ತೀರ ಹದಗೆಟ್ಟ ಅಧಿಕಾರಿ ಮತ್ತು ಕೇರಳ ಸರಕಾರದಿಂದ ನಿರ್ಲಕ್ಷಸಲ್ಪಟ್ಟ ಕಲ್ಲಡ್ಕ -ಚೆರ್ಕಳ ರಸ್ತೆಯ ಶೋಚನೀಯ ಸ್ಥಿತಿ ಖಾಸಗಿ ಬಸ್ ಕಾಮರ್ಿಕರ ಮುಷ್ಕರದ  ಬೆನ್ನಲ್ಲೆ ಪೆರ್ಲ ಅಡ್ಕಸ್ಥಳ ನಾಗರಿಕರು ,ಟ್ಯಾಕ್ಸಿ ಚಾಲಕರು, ಸಾರ್ವಜನಿಕರು ಮುಷ್ಕೆಕ್ಕೆ ಬೆಂಬಲ ಸೂಚಿಸಿದ್ದು ಇದು ಪ್ರತಿಭಟನೆಗೆ ಹೆಚ್ಚಿನ ಬಲ ನೀಡಿದೆ. ಜನಸಂಚಾರ ಪೂರ್ಣ ಸ್ತಬ್ಧಗೊಂಡಿತು. ಅಂಗಡಿಮುಂಗಟ್ಟುಗಳು ತೆರೆದಿದ್ದರೂ ವ್ಯಾಪಾರ ವಹಿವಾಟುಗಳು ಎಂದಿನಂತಿರಲಿಲ್ಲ, ಬೈಕ್ ಸವಾರರು ,ಹಾಲಿನ ವಾಹನವನ್ನು ತಡೆದು ಪ್ರತಿಭಟನಕಾರರು ತಮ್ಮ ನಿಲುವು ಖಾತರಿಪಡಿಸಿಕೊಂಡರು.
  ಸತತವಾಗಿ 13 ವರುಷಗಳಿಂದ ಡಾಮರೀಕರಣಗೊಳ್ಳದ ಈ ರಸ್ತೆಯನ್ನು ಮತ್ತೆ ಮತ್ತೆ ದುರಸ್ತಿಮಾಡುವುದೇ ಆಯಿತು. ಹೊಸಡಾಮರೀಕರಣ ನಡೆಸುವುದೇ ಇಲ್ಲ. ಅಲ್ಲದೆ ಈಗ ನೆಲ್ಲಿಕಟ್ಟಿಯಿಂದ ಉಕ್ಕಿನಡ್ಕದ ವರೆಗೆ ಮಾತ್ರ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದು,  ಪೆರ್ಲ ಚೆಕ್ ಪೋಸ್ಟ್ ಸನಿಹ , ಅಡ್ಕಸ್ಥಳದಲ್ಲಿ  ಬೃಹತ್  ಆಕಾರದ ಹೊಂಡಗಳಿದ್ದು ಮರುಡಾರೀಕರಣಗೊಳಿಸಲೇ ಬೇಕೆಂಬುದು ಸಾರ್ವಜನಿಕರ ನಿಲುವು.
   ಯಾವುದೇ ರಾಜಕೀಯ ಪಕ್ಷ ಬೇಧಭಾವಗಳಿಲ್ಲದೆ ಒಗ್ಗಟ್ಟಿನ ಪ್ರತಿಭಟನೆ ಪೆರ್ಲ ಪೇಟೆ ನಿಶ್ಯಭ್ಧತೆಯಿಂದ ಕೂಡಿರುವುದು ಕಂಡುಬಂತು. ಎಲ್ಲಾ ರಾಜಕೀಯ ಮುಖಂಡರು, ಕಾರ್ಯಕರ್ತರೊಂದಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ.ಯಾವುದೇ ಅಧಿಕಾರಿ ವರ್ಗದವರು ಪ್ರತಿಭಟನಕಾರರನ್ನು, ಸಾರ್ವಜನಿಕರನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಮಾರ್ಗ ಕಂಡುಕೊಳ್ಳುತ್ತೇವೆ ಎಂದು  ಭರವಸೆ ನೀಡದಿರುವುದು ಆಕ್ರೋಶಕ್ಕೆ ಕಾರಣವೂ ಆಗಿದೆ.  ಜಿಲ್ಲಾಧಿಕಾರಿ ಭೇಟಿ ನೀಡುವ ಬಗ್ಗೆ ಮಾತುಗಳು ಕೇಳಿಬಂದಿದ್ದರೂ ಭೇಟಿ ನೀಡದಿರುವುದು ಮತ್ತಷ್ಟು ರೊಚ್ಚಿಗೇಳುವ ಸೂಚನೆ ನೀಡಿದೆ.  ಕಾಸರಗೋಡಿನ ಪ್ರಜೆಗಳನ್ನು ಕೇರಳದಿಂದ ಹೊರತುಪಡಿಸಲಾಗಿದೆಯೇ..? ಕಾಸರಗೋಡು ಕೇರಳದ ಭಾಗವಾಗಿದ್ದರೂ ಕೂಡಾ ಯಾಕಿಷ್ಟು ವಿಳಂಬ ನೀತಿ, ಕಾಸರಗೋಡು ಕನ್ನಡದ ವಿಷಯದಲ್ಲೂ ,ಪ್ರಗತಿಯ ವಿಷಯದಲ್ಲೂ ಯಾರಿಗೂ ಬೇಡವಾದ ಪ್ರದೇಶವಾಗಿ ಉಳಿಯಿತೇ..!? ಯಾರಿಗೂ ಮತನೀಡುವುದು ಬೇಡ ನಾವು ನಮ್ಮ ಜಿಲ್ಲೆ ಯಾರಿಗೂ ಬೇಡವಾದರೆ ನಮ್ಮ ಮತದಿಂದ ಅಧಿಕಾರದಲ್ಲಿ ಮರೆಯುವುದೂ ಬೇಡ ಎನ್ನುವುದು ವಿದ್ಯಾವಂತ ಯುವಮನಸ್ಸುಗಳ ತೋಡಿಕೆಯ ಮಾತು.
   ಮಾಡೆಲ್ ಪರೀಕ್ಷೆಗಳು ಹೊರರಾಜ್ಯ ಸಹಿತ ಹಲವು ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿದ್ದು ಮುಷ್ಕರದ ಬಿಸಿ ವಿದ್ಯಾಥರ್ಿಗಳ ಭವಿಷಯದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.ಜನ ನಮಗೆ ಕಷ್ಟವಾದರೂ ಅಡ್ಡಿಯಿಲ್ಲ ರಸ್ತೆ ಸರಿಯಾದರೆ ಸಾಕೆನ್ನುವ ವಿಶಾಲ ಹೃದಯಿಗಳೆನ್ನುವುದು ಸತ್ಯ.
   ಪೆರ್ಲ ಪ್ರದೇಶದ ಗ್ರಾಮೀಣ ಒಳ ಪ್ರದೇಶಗಳ ಕಿರು ರಸ್ತೆಗಳನ್ನು ದಿಗ್ಭಂಧನ ಮಾಡಲಾಗಿದೆ. ಯಾವೊಂದು ವಾಹನಗಳೂ ಓಡಾಡಲು ಪ್ರತಿಭಟನಕಾರರು ಸಮ್ಮತಿಸಲಿಲ್ಲ.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries