HEALTH TIPS

No title

                ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕಾ ಶಿಬಿರ ರಂಗ - ಪ್ರಸಂಗ ಅಥರ್ಾಂತರಂಗ - 5
      ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಆಶ್ರಯದಲ್ಲಿ ಉಡುಪಿ ಬಡಗು ಪೇಟೆಯ ಶ್ರೀ ವಿದ್ಯಾದಾಯಿನಿ ಯಕ್ಷಗಾನ ಸಭಾ ಸಹಯೋಗದೊಂದಿಗೆ ಫೆ.25 ರಂದು ಬೆಳಗ್ಗೆ 10 ರಿಂದ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣ ಧ್ವನ್ಯಾ ಲೋಕದಲ್ಲಿ ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕಾ ಶಿಬಿರ ರಂಗ - ಪ್ರಸಂಗ `ಅಥರ್ಾಂತರಂಗ-5' ನಡೆಯಲಿದೆ.
  ಬಡಗುಪೇಟೆ ಶ್ರೀ ವಿದ್ಯಾದಾಯಿನಿ ಯಕ್ಷಗಾನ ಸಭಾ ಗೌರವಾಧ್ಯಕ್ಷ ರಾಮಚಂದ್ರ ಪಾಂಗಣ್ಣಾಯ ಉದ್ಘಾಟಿಸುವರು. ಹಿರಿಯ ಸಾಹಿತಿ ವಿ.ಈಶ್ವರಯ್ಯ ಅಧ್ಯಕ್ಷತೆ ವಹಿಸುವರು. ರಾಧಾಕೃಷ್ಣ ಕಲ್ಚಾರ್ ನಿದರ್ೇಶನ ನೀಡಲಿದ್ದಾರೆ. ಜಾನಪದ ಸಂಶೋಧಕ ಕೆ.ಎಲ್.ಕುಂಡತ್ತಾಯ, ಮಣಿಪಾಲ ಎಂ.ಐ.ಟಿ. ಉಪನ್ಯಾಸಕ ಪ್ರೊ.ಎಸ್.ವಿ.ಉದಯ ಕುಮಾರ್ ಶೆಟ್ಟಿ, ಹವ್ಯಾಸಿ ಅರ್ಥಧಾರಿ ಮೋಹನ ತೋನ್ಸೆ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಅಣ್ಣಯ್ಯ ಪಾಲನ್, ಕಿಶೋರ್ ಕುಮಾರ್ ಕಳತ್ತೂರು, ಸಚ್ಚಿದಾನಂದ ನಾಯಕ್ ಬೆಲ್ಪತ್ರೆ, ನಾ.ಕಾರಂತ ಪೆರಾಜೆ, ಯೋಗೀಶ್ ರಾವ್ ಚಿಗುರುಪಾದೆ  ಉಪಸ್ಥಿತರಿರುವರು.
ರಾಗ - ಭಾವ - ಲಯ - ವೈಖರಿ, ಅನಿಸಿಕೆ - ಅವಲೋಕನ, ತಾಳಮದ್ದಳೆ  ನಡೆಯಲಿದೆ.
  ಭಾಗವತರಾಗಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ರಮೇಶ್ ಭಟ್ ಪುತ್ತೂರು, ಚೆಂಡೆ ಮದ್ದಳೆಯಲ್ಲಿ ರಾಮಚಂದ್ರ ಪಾಂಗಣ್ಣಾಯ, ಮುರಾರಿ ಕಡಂಬಳಿತ್ತಾಯ, ಉದಯ ಕಂಬಾರು, ಸುಬ್ರಹ್ಮಣ್ಯ ಚಿತ್ರಾಪುರ, ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗರು, ಬೆಳ್ತಂಗಡಿ ಕರುಣಾಕರ ಶೆಟ್ಟಿ, ನಾರಾಯಣ ಹೆಗಡೆ ಪಾಲ್ಗೊಳ್ಳುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries