HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಬಿಜೆಪಿಯಿಂದ ಧರಣಿ ಸತ್ಯಾಗ್ರಹ 6 ರಂದು
    ಬದಿಯಡ್ಕ: ಕಾಸರಗೋಡು ಮಂಡಲ ಸಮಿತಿ ಆಶ್ರಯದಲ್ಲಿ ಪೆ.6ರಂದು ಬದಿಯಡ್ಕದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ. ಬೆಳಗ್ಗೆ 9ರಿಂದ ಸಂಜೆ 5ರ ತನಕ ಬದಿಯಡ್ಕ ಪೇಟೆಯಲ್ಲಿ ನಡೆಯಲಿರುವ ಧರಣಿ ಸತ್ಯಾಗ್ರಹದಲ್ಲಿ ಪಕ್ಷದ ಹಿರಿಯ ನೇತಾರರು ಭಾಗವಹಿಸಿ ಮಾತನಾಡುವರು. ರಾಜ್ಯ ಸರಕಾರ ಕಾಸರಗೋಡು ಜಿಲ್ಲೆಯನ್ನು ಅವಗಣಿಸುತ್ತಿದೆ ಎಂಬ ಆರೋಪಕ್ಕೆ ಜ್ವಲಂತ ಉದಾಹರಣೆಯಾಗಿದೆ ಈ ಮುಂಗಡ ಪತ್ರ. ಚೆರ್ಕಳ ಕಲ್ಲಡ್ಕ ರಸ್ತೆಗೆ ಹಣಮಂಜೂರು ಮಾಡಬಹುದೆಂಬ ಜನರ ನಿರೀಕ್ಷೆಯೂ ಹುಸಿಯಾಗಿದೆ. ಮಾತ್ರವಲ್ಲ ರಸ್ತೆಯ ದುರಸ್ತಿ ವಿಳಂಬ ಪ್ರತಿಭಟಿಸಿ ಬಸ್ ಕಾಮರ್ಿಕರು ಹೋರಾಟ ಆರಂಭಿಸಿದ್ದಾರೆ. ಇದು ರಾಜ್ಯದಲ್ಲೇ ಪ್ರಥಮ ಘಟನೆಯಾಗಿದೆ.
ಬದಿಯಡ್ಕ-ಏತಡ್ಕ-ಕಿನ್ನಿಂಗಾರು ರಸ್ತೆಗೂ ಮೋಕ್ಷವಿಲ್ಲ. ಈ ರಸ್ತೆಯ ದುರಸ್ತಿ ಆಗ್ರಹಿಸಿ ಕೆಲವು ಹೋರಾಟಗಳು ನಡೆದಿವೆ. ಆದರೂ ಅಧಿಕಾರಿಗಳು ಜನಪ್ರತಿನಿಧಿಗಳು ಮೌನವಹಿಸುತ್ತಿದ್ದಾರೆ. ಇದು ಖಂಡನೀಯವಾಗಿದೆ. ಕಾಸರಗೋಡು ಜಿಲ್ಲೆಯನ್ನು ಪ್ರತ್ಯೇಕವಾಗಿ ಕನ್ನಡ ವಲಯವಾದ ಕಾಸರಗೋಡು, ಮಂಜೇಶ್ವರ ತಾಲೂಕುಗಳನ್ನು ಸರಕಾರ ಅವಗಣಿಸುತ್ತಿದೆ. ಇದರ ವಿರುದ್ಧ ಜನಪ್ರತಿನಿಧಿಗಳು ಪ್ರತಿಭಟಿಸಬೇಕಾಗಿದೆ. ಜಿಲ್ಲೆಯ ಅಭಿಯಾನ ಎಂದೆನಿಸಿದ ತುಳು ಅಕಾಡೆಮಿ, ಯಕ್ಷಗಾನ ಅಕಾಡೆಮಿ ಎಂಬಿವುಗಳನ್ನು ಕೂಡಾ ಸರಕಾರ ಅವಗಣಿಸಿದೆ. ಮಂಗಳವಾರದ ಧರಣಿಯ ಬಳಿಕ ಮುಂದಿನ ದಿನಗಳಲ್ಲಿ ವೈದ್ಯಕೀಯ ಕಾಲೂಜು ನಿಮರ್ಾಣದ ಅವ್ಯವಸ್ಥೆಯ ಬಗೆಗೂ ಬಿಜೆಪಿ ಹಲವು ಹೋರಾಟಗಳನ್ನು ಹಮ್ಮಿಕೊಳ್ಳಲಿದೆ. ಜಿಲ್ಲೆಯ ಅಭಿಮಾನ ಎಂದೆನಿಸಿದ ವೈದ್ಯಕೀಯ ಕಾಲೇಜಿಗಾಗಿ ಪಕ್ಷವು ಮಂಡಲಮಟ್ಟದಲ್ಲಿ ಹೋರಾಟ ತೀವ್ರಗೊಳಿಸಲಿದೆ ಎಂದು ಮಂಡಲಾಧ್ಯಕ್ಷ ಸುಧಾಮ ಗೋಸಾಡ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries