HEALTH TIPS

No title

          ಗಡಿನಾಡನ್ನು ಸಂಪೂರ್ಣ ಮರೆತ ರಾಜ್ಯ ಮುಂಗಡಪತ್ರ-ಕಾಸರಗೋಡು ಪ್ಯಾಕೇಜ್ಗೆ 95 ಕೋಟಿ ರೂ., ಎಂಡೋಸಲಾನ್ ಪ್ಯಾಕೇಜ್ಗೆ 50 ಕೋಟಿ ರೂ., ಮಂಜೇಶ್ವರ ಬಂದರಿಗೆ 30 ಕೋಟಿ ರೂ.
    ಕಾಸರಗೋಡು: ಭಾರೀ ಆಥರ್ಿಕ ಮುಗ್ಗಟ್ಟು ಎದುರಿಸುತ್ತಿರುವ ಕೇರಳ ಸರಕಾರದ 2018-19 ನೇ ವಿತ್ತೀಯ ವರ್ಷದ ರಾಜ್ಯದ ಸಂಪೂರ್ಣ ಮುಂಗಡಪತ್ರವನ್ನು ಹಣಕಾಸು ಸಚಿವ ಡಾ.ಟಿ.ಎಂ.ಥೋಮಸ್ ಐಸಾಕ್ ಶುಕ್ರವಾರ ಬೆಳಗ್ಗೆ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದರು. ಎಂಡೋಸಲ್ಫಾನ್ ಪ್ಯಾಕೇಜ್ಗೆ 50 ಕೋಟಿ ರೂ. ಮತ್ತು ಮಂಜೇಶ್ವರ ಬಂದರು ನಿಮರ್ಾಣಕ್ಕೆ 30 ಕೋಟಿ ರೂ. ಕಾದಿರಿಸಲಾಗಿದೆ. ಕಾಸರಗೋಡು ಪ್ಯಾಕೇಜ್ಗೆ 95 ಕೋಟಿ ರೂ. ಘೋಷಿಸಲಾಗಿದೆ. ಕಾಸರಗೋಡು ಮೆಡಿಕಲ್ ಕಾಲೇಜಿಗೆ ಈ ಬಾರಿ ಹಣ ಕಾದಿರಿಸಿಲ್ಲ.
   2015 ರಲ್ಲಿ ಐಕ್ಯರಂಗ ಸರಕಾರ ಜಾರಿಗೊಳಿಸಲುದ್ದೇಶಿಸಿದ ಭೂತೆರಿಗೆಯನ್ನು ಅಂದು ವಿರೋಧಿಸಿದ್ದ ಎಡರಂಗ ಸರಕಾರ ಇದೀಗ ತನ್ನ ತೃತೀಯ ಮುಂಗಡಪತ್ರದಲ್ಲಿ ಭೂತೆರಿಗೆಯನ್ನು ಪ್ರಕಟಿಸಿದೆ. ಬಂದರು ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಮೀಸಲಿರಿಸಿದ್ದು ಇದರಂತೆ ಕಾಮಗಾರಿ ನಡೆಯುತ್ತಿರುವ ಮಂಜೇಶ್ವರ ಬಂದರು ಅಭಿವೃದ್ಧಿಗೆ 30 ಕೋಟಿ ರೂ. ಲಭಿಸಲಿದೆ. ಸಂಪೂರ್ಣ ಎಂಡೋಸಲ್ಫಾನ್ ಪ್ಯಾಕೇಜ್ಗಾಗಿ 50 ಕೋಟಿ ರೂ. ಮೀಸಲಿಟ್ಟ ಮುಂಗಡಪತ್ರದಲ್ಲಿ ಕುಟುಂಬಶ್ರೀಗೆ 200 ಕೋಟಿ ರೂ., ಬಂಜರು ಭೂಮಿಯನ್ನು ಕೃಷಿಯೋಗ್ಯವನ್ನಾಗಿ ಪರಿವತರ್ಿಸವುದಕ್ಕಾಗಿ ಭತ್ತ ಉತ್ಪಾದಕ ಸಮಿತಿ, ಸಂಘ ಸಂಸ್ಥೆಗಳಿಗೆ ನೀಡಲು ಕಾನೂನು ರೂಪಿಸುವುದಾಗಿ ಪ್ರಸ್ತಾಪಿಸಲಾಗಿದೆ. ಭತ್ತ ಕೃಷಿ ಮಾಡದೆ ಹಡಿಲು ಬಿಟ್ಟ ಭೂಮಾಲಕರ ವಿರುದ್ಧ ಕಾನೂನು ಕ್ರಮದ ಬಗ್ಗೆ ಸೂಚನೆಯನ್ನು ಮುಂಗಡಪತ್ರದಲ್ಲಿ ನೀಡಲಾಗಿದೆ. ರಾಜ್ಯದಲ್ಲಿ ಓಖಿ ಚಂಡಮಾರುತ ಸೃಷ್ಟಿಸಿದ ತೀವ್ರ ಅವಾಂತರ ಮತ್ತು ನಾಶನಷ್ಟದಿಂದಾಗಿ ತತ್ತರಗೊಂಡ ರಾಜ್ಯದ ಸಮುದ್ರ ಕರಾವಳಿ ಪ್ರದೇಶಗಳ ಸವರ್ಾಂಗೀಣ ಅಭಿವೃದ್ಧಿಗಾಗಿ ಮುಂಗಡಪಲ್ಲಿ 2000 ಕೋಟಿ ರೂ. ಮೀಸಲಿರಿಸಲಾಗಿದೆ.
   ರಾಜ್ಯದ ಬಂದರುಗಳ ಸಮಗ್ರ ಅಭಿವೃದ್ಧಿಗಾಗಿ 584 ಕೋಟಿ ರೂ. ಮತ್ತು ಮೀನುಗಾರಿಕಾ ವಲಯದ ಅಭಿವೃದ್ಧಿಗೆ 600 ಕೋಟಿ ರೂ.ವನ್ನು ಮೀಸಲಿರಿಸಲಾಗಿದೆ. ಸಮುದ್ರ ಕರಾವಳಿ ಪ್ರದೇಶಗಳ ಶಿಕ್ಷಣ ಸಂಸ್ಥೆಗಳ ನವೀಕರಣಗೊಳಿಸಲು ಒತ್ತು ನೀಡಲಾಗಿದೆ. ಜೊತೆಗೆ ಕರಾವಳಿ ಪ್ರದೇಶಗಳಲ್ಲಿ ಉಚಿತವಾಗಿ ವೈಫೈ ಸೌಕರ್ಯ ಏರ್ಪಡಿಸಲಾಗುವುದೆಂದು ಪ್ರಸ್ತಾಪಿಸಲಾಗಿದೆ. ಕಿಫ್ಬಿ ಮೂಲಕ 900 ಕೋಟಿ ರೂ. ಠೇವಣಿ ನಿರೀಕ್ಷಿಸಲಾಗಿದೆ. ರಾಜ್ಯದ ಆಥರ್ಿಕ ಸ್ಥಿತಿ ಅತ್ಯಂತ ದಯನೀಯವಾಗಿದೆ. ತೆರಿಗೆ ವತಿಯಿಂದ ಶೇ.20 ರಿಂದ ಶೇ. 25 ರ ತನಕ ಹೆಚ್ಚಳ ನಿರೀಕ್ಷಿಸಿದ್ದರೂ ಕೇವಲ ಶೇ.14 ರಷ್ಟು ಮಾತ್ರವೇ ಹೆಚ್ಚಳ ಉಂಟಾಗಿದೆ. ತೆರಿಗೆ ವತಿಯಿಂದ ರಾಜ್ಯಕ್ಕೆ ಕೇವಲ 86000 ಕೋಟಿ ರೂ. ಲಭಿಸಿದೆ. ಯೋಜನೆಗಳ ಮೊತ್ತದಲ್ಲಿ ಶೇ.22 ರಷ್ಟು ಮತ್ತು ಯೋಜನೇತರ ಮೊತ್ತದಲ್ಲಿ ಶೇ.24 ರಷ್ಟು ಹೆಚ್ಚಳ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಆಥರ್ಿಕ ಶಿಸ್ತು ಕ್ರಮ ಪಾಲಿಸಬೇಕಾದ ಅಗತ್ಯವೂ ಉಂಟಾಗಿದೆ ಎಂದು ಸಚಿವರು ಮುಂಗಡಪತ್ರದಲ್ಲಿ ಉಲ್ಲೇಖಿಸಿಸಿದ್ದಾರೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕಾಡರ್ಿಯೋಲಜಿ ವಿಭಾಗ ಏರ್ಪಡಿಸಲಾಗುವುದು. ಗ್ರಾಮ ಪಂಚಾಯತುಗಳಲ್ಲಿ ಕುಟುಂಬಶ್ರೀ ನೇತೃತ್ವದಲ್ಲಿ ಕೋಳಿ ಸಾಕಣಾ ಕೇಂದ್ರಗಳನ್ನು ಆರಂಭಿಸಲಾಗುವುದು. ಸರಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗಾಗಿ 33 ಕೋಟಿ ರೂ. ಮೀಸಲಿರಿಸಲಾಗಿದೆ.
ಸಾಮಾಜಿಕ ಕಲ್ಯಾಣ ಪಿಂಚಣಿ ಯೋಜನೆಯಲ್ಲಿ ಒಳಗೊಂಡಿರುವ ಅನರ್ಹರನ್ನು ಹೊರತುಪಡಿಸಲಾಗುವುದೆಂದು ಸಚಿವರು ಪ್ರಸ್ತಾಪಿಸಿದ್ದಾರೆ. ಅದರಂತೆ 1200 ಸ್ಕ್ವಾಯರ್ ಫೀಟ್ಗಿಂತ ಹೆಚ್ಚು ಮನೆ ಹೊಂದಿರುವವರು, ನಾಲ್ಕು ಚಕ್ರ ವಾಹನ ಹೊಂದಿರುವವರು, ಆದಾಯ ತೆರಿಗೆ ಪಾವತಿಸುವವರು, ಎರಡು ಎಕ್ರೆಗಿಂತ ಹೆಚ್ಚು ಆಸ್ತಿ ಹೊಂದಿರುವವರನ್ನು ಸಾಮೂಹಿಕ ಪಿಂಚಣಿ ಯೋಜನೆಯಿಂದ ಹೊರತು ಪಡಿಸಲಾಗುವುದು. ಸಾರ್ವಜನಿಕ ಶಿಕ್ಷಣಕ್ಕಾಗಿ 970 ಕೋಟಿ ರೂ. ಮತ್ತು ಮಹಿಳಾ ಸುರಕ್ಷತೆಗಾಗಿ 50 ಕೋಟಿ ರೂ., ಮಹಿಳಾ ಅಭಿವೃದ್ಧಿಗಾಗಿ 1267 ಕೋಟಿ ರೂ. ಮೀಸಲಿರಿಸಲಾಗಿದೆ.
    ಜಿಎಸ್ಟಿಯಿಂದ ರಾಜ್ಯಕ್ಕೆ ತೀವ್ರ ನಿರಾಸೆಯಾಗಿದೆ. ಜಿಎಸ್ಟಿಯ ಲಾಭ ಕೇವಲ ಕಾರ್ಪರೇಟ್ ಕಂಪೆನಿಗಳಿಗೆ ಮಾತ್ರವೇ ಲಭಿಸಿದೆ. ನೋಟು ಅಮಾನ್ಯದಿಂದ ರಾಜ್ಯದ ಆಥರ್ಿಕ ಸ್ಥಿತಿಯನ್ನು ಹದಗೆಡಿಸಿದೆ ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರವನ್ನು ಸಚಿವರು ಟೀಕಿಸಿದರು. ಆಹಾರ ಸಬ್ಸಿಡಿಗಾಗಿ 954 ಕೋಟಿ ರೂ. ಮೀಸಲಿಡಲಾಗಿದೆ. ಬೆಲೆ ಏರಿಕೆ ತಡೆಗಟ್ಟಲು ಸಾರ್ವಜನಿಕ ಮಾರುಕಟ್ಟೆಗಳ ಹಸ್ತಕ್ಷೇಪ ನಡೆಸಲು 260 ಕೋಟಿ ರೂ. ಮತ್ತು ಹಸಿವು ರಹಿತ ಕೇರಳ ಯೋಜನೆಯನ್ನು ಮುಂದುವರಿಸಲು 20 ಕೋಟಿ ರೂ. ಮೀಸಲಿಡಲಾಗಿದೆ. ಕೋಳಿ ಆಹಾರ ಫ್ಯಾಕ್ಟರಿಗಳಿಗೆ 20 ಕೋಟಿ ರೂ. ಮೀಸಲಿಡಲಾಗಿದೆ. ಎಲ್ಲರಿಗೂ ಸ್ವಂತ ಮನೆ ಎಂಬ ಲೈಫ್ ಭವನ ಯೋಜನೆಯಂತೆ ರಾಜ್ಯದಲ್ಲಿ ಸ್ವಂತವಾಗಿ ಮನೆ ಇಲ್ಲದ 14,21,000 ಕುಟುಂಬಗಳಿಗೆ ಮನೆ ನಿಮರ್ಿಸಿ ಕೊಡಲಾಗುವುದು. ಅದಕ್ಕಾಗಿ 2500 ಕೋಟಿ ರೂ. ಮೀಸಲಿಡಲಾಗಿದೆ. ಮಲಬಾರ್ ಆರ್ಸಿಸಿ ಕೇಂದ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಗುವುದು. ಸಾರ್ವಜನಿಕ ಆರೋಗ್ಯ ಸಂರಕ್ಷಣೆಗಾಗಿ 1685 ಕೋಟಿ ರೂ., ಅಪಘಾತದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವವರನ್ನು ಕಾನೂನು ಕ್ರಮದಿಂದ ಮುಕ್ತಗೊಳಿಸಲು ಅಗತ್ಯದ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ಖಾಸಗಿ ಆಸ್ಪತ್ರೆಗಳನ್ನು ಒಳಪಡಿಸಲಾಗುವುದು.
    ಆರೋಗ್ಯ ಕ್ಷೇತ್ರ :
* ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲೂ ಓಂಕೋಲಜಿ ವಿಭಾಗ
* ಮಲಬಾರ್ ಕ್ಯಾನ್ಸರ್ ಸೆಂಟರನ್ನು ಆರ್ಸಿಸಿ ಮಟ್ಟಕ್ಕೆ ಭಡ್ತಿ
* ಕೊಚ್ಚಿಯಲ್ಲಿ ನೂತನ ಕ್ಯಾನ್ಸರ್ ಸೆಂಟರ್ ಆರಂ`. ಈ ಮೂಲಕ ರಾಜ್ಯದ ಶೇ.80 ಕ್ಯಾನ್ಸರ್ ರೋಗಿಗಳಿಗೂ ಚಿಕಿತ್ಸೆ ನೀಡಲು ಸಾರ್ವಜನಿಕ ಸಂಸ್ಥೆಯಿಂದ ಸಾಧ್ಯವಾಗುವುದು.
* ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಸೌಕರ್ಯ
ಕರಾವಳಿ ಪ್ರದೇಶ ಅಭಿವೃದ್ಧಿ :
* ಕರಾವಳಿ ಪ್ರದೇಶಕ್ಕೆ 2000 ಕೋಟಿ ರೂ. ಪ್ಯಾಕೇಜ್
* ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ತತ್ಸಮಯ ತುತರ್ು ಸಂದೇಶ ರವಾನಿಸಲು ಸೌಕರ್ಯ
* ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ಸಮುದ್ರ ಕಿನಾರೆಯನ್ನು ಸಂಪಕರ್ಿಸಲು 100 ಕೋಟಿ ರೂ. ವೆಚ್ಚದಲ್ಲಿ ಸ್ಯಾಟಲೈಟ್
* ಸಮುದ್ರ ಕಿನಾರೆಯಿಂದ 50 ಮೀಟರ್ ವ್ಯಾಪ್ತಿಯೊಳಗೆ ವಾಸ್ತವ್ಯ ಹೂಡಿರುವವರನ್ನು ಸ್ಥಳಾಂತರಿಸಲು ಕ್ರಮ. ಇದಕ್ಕೆ 150 ಕೋಟಿ ರೂ. ಯೋಜನೆ
* ಸಮುದ್ರ ಕಿನಾರೆಯಲ್ಲಿ 250 ಕ್ಕೂ ಹೆಚ್ಚು ಮಕ್ಕಳು ಕಲಿಯುವ ಎಲ್ಲಾ ಶಾಲೆಗಳ ನವೀಕರಣ

   ಕೆಎಸ್ಆರ್ಟಿಸಿ ಆಥರ್ಿಕ ಮುಗ್ಗಟ್ಟು ಸರಕಾರ ವಹಿಸದು : ಕೆಎಸ್ಆರ್ಟಿಸಿ ಅನುಭವಿಸುತ್ತಿರುವ ಆಥರ್ಿಕ ಮುಗ್ಗಟ್ಟನ್ನು ಸರಕಾರ ವಹಿಸಿಕೊಳ್ಳದು. ಕೆಎಸ್ಆರ್ಟಿಸಿಯನ್ನು ಲಾಭದಾಯಕವಾಗಿ ಕೊಂಡೊಯ್ಯಲು ಮೂರು ವಿಭಾಗಗಳಾಗಿ ಮಾಡಲಾಗುವುದು. ಆದಾಯ ಮತ್ತು ವೆಚ್ಚದ ಅಂತರವನ್ನು ಕಡಿಮೆ ಮಾಡಲು 2018-19 ನೇ ವರ್ಷದಲ್ಲಿ ಕೆಎಸ್ಆರ್ಟಿಸಿಗೆ 1000 ಕೋಟಿ ರೂ. ಕಾದಿರಿಸಲಾಗಿದೆ. ವೇತನ ಮತ್ತು ಪಿಂಚಣಿಯನ್ನು ನೀಡಲು ಕೆಎಸ್ಆರ್ಟಿಸಿಗೆ ಸಾಧ್ಯವಾಗುವಂತೆ ಮಾಡಲಾಗುವುದು. 

* ತೆಂಗು ಅಭಿವೃದ್ಧಿಗೆ 50 ಕೋಟಿ ರೂ.
* ಹುರಿಹಗ್ಗ ವಲಯಕ್ಕೆ 150 ಕೋಟಿ ರೂ.
* ಮೃಗಸಂರಕ್ಷಣೆಗೆ 330 ಕೋಟಿ ರೂ.
* ಕ್ಷೀರಾಭಿವೃದ್ಧಿಗೆ 107 ಕೋಟಿ ರೂ.
* ಕೃಷಿ ಬೆಳೆ ಆರೋಗ್ಯ ಖಚಿತಪಡಿಸಲು 54 ಕೋಟಿ ರೂ.
* ಉತ್ತಮ ಗುಣಮಟ್ಟದ ಬೀಜ ಉತ್ಪಾದನೆಗೆ 21 ಕೋಟಿ ರೂ.
* ಮದ್ಯ ತೆರಿಗೆ ಹೆಚ್ಚಳ
* ಅನ್ಯ ರಾಜ್ಯಗಳ ಕಾಮರ್ಿಕರನ್ನು ಅತಿಥಿಗಳಾಗಿ ಪರಿಗಣನೆ
* ಕೇರಳ ಬ್ಯಾಂಕ್ ಸ್ಥಾಪನೆ
* ಅನಿವಾಸಿ ಭಾರತೀಯರಿಗೆ 80 ಕೋಟಿ ರೂ.
* ಪುನ್ನಪ್ರ ವಯಲಾರ್ ಸ್ಮಾರಕಕ್ಕೆ 10 ಕೋಟಿ ರೂ.
* ಎಕೆಜಿ ಹುಟ್ಟೂರು ಪೆರಳಶ್ಶೇರಿಯಲ್ಲಿ ಸ್ಮಾರಕ ನಿಮರ್ಿಸಲು 10 ಕೋಟಿ ರೂ.
* ಕಲೆ ಸಂಸ್ಕೃತಿ ಕ್ಷೇತ್ರಕ್ಕೆ 144 ಕೋಟಿ ರೂ.
* ಗೈಲ್ ಪೈಪ್ಲೈನ್ ಹಾದು ಹೋಗುವ ಎಲ್ಲಾ ಸ್ಥಳಗಳಲ್ಲಿ ಸಿಟಿ ಗ್ಯಾಸ್ ಮಾದರಿಯಲ್ಲಿ ಗ್ಯಾಸ್ ವಿತರಣೆ ಏರ್ಪಡಿಸಲಾಗುವುದು.
* ಅವಿವಾಹಿತ ತಾಯಂದಿರಿಗೆ 2000 ಕೋಟಿ ರೂ.
* ಮಹಿಳೆಯರ ಕ್ಷೇಮಕ್ಕಾಗಿ 1267 ಕೋಟಿ ರೂ.
* ಸಾರ್ವಜನಿಕ ವಿದ್ಯಾಭ್ಯಾಸಕ್ಕೆ 970 ಕೋಟಿ ರೂ.
* ಶಾಲೆಗಳ ಮೂಲ`ೂತ ಸೌಕರ್ಯ ಹೆಚ್ಚಿಸಲು 33 ಕೋಟಿ ರೂ.
* ಭೂಮಿಯ ನ್ಯಾಯಬೆಲೆ ಶೇ. 10 ಹೆಚ್ಚಳ
* ಸರಕಾರಿ ಸೇವೆಗಳ ಶುಲ್ಕ ಹೆಚ್ಚಳ

     ವೈದ್ಯಕೀಯ ಕಾಲೇಜು, ಅಕಾಡೆಮಿಗಳ ಮರೆತ ಸರಕಾರ:
   ಉಕ್ಕಿನಡ್ಕದಲ್ಲಿ ನಿಮಿಸಲುದ್ದೇಶಿಸಿ, ಆಮೆಗತಿಯಲ್ಲಿ ಕಾಮಗಾರಿ ಸಾಗುತ್ತಿರುವ ಕಾಸರಗೊಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಈ ಬಾರಿಯ ಮುಂಗಡಪತ್ರದಲ್ಲಿ ಯಾವುಧೆ ಪ್ರಸ್ತಾವನೆ ಇರಿಸದಿರುವುದು ಗಡಿನಾಡಿನ ಬಗ್ಗೆ ಸರಕಾರ ತೊರಿಸುವ ಮನೋಧರ್ಮದ ಸಂಕೇತವಾಗಿ ಗುರುತಿಸಬಹುದಾಗಿದೆ. ಜೊತೆಗೆ ಈ ನಿಷ್ಕ್ರೀಯವಾಗಿರುವ ಕೇರಳ ತುಳು ಅಕಡೆಮಿ, ಪಾತರ್ಿಸುಬ್ಬ ಕಲಾಕ್ಷೇತ್ರಗಳ ಪುನರುತ್ಥಾನದ ಬಗೆಗೂ ಚಕಾರವೆತ್ತದಿರುವುದು ಬಹುತೇಕ ಆ ಅಕಾಡೆಮಿಗಳ ಮೂಲೆಗುಂಪಾಗಿರುವುದರ ಸಂಕೇತವೆಂದು ಪರಿಭಾವಿಸಬಹುದಾಗಿದೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries