ಗಣಯಾಗ, ಅಗ್ನಿಹೋತ್ರಿಗಳ ಸ್ವಾಗತದೊಂದಿಗೆ 'ಪ್ರತಿಷ್ಠಾವರ್ಧಂತ್ಯುತ್ಸವ' ಮತ್ತು 'ನಕ್ಷತ್ರೇಷ್ಟಿ' ಆರಂಭ
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಜರಗುತ್ತಿರುವ ಶ್ರೀ ಗಾಯತ್ರೀ ದೇವಿಯ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಲೋಕಕಲ್ಯಾಣಾರ್ಥ ನಡೆಯುವ ನಕ್ಷತ್ರೇಷ್ಟಿ ಯು ಗುರುವಾರ ಬೆಳಿಗ್ಗೆ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ, ಬ್ರಹ್ಮಶ್ರೀ ಹರಿನಾರಾಯಣ ಮಯ್ಯರ ಪೌರೋಹಿತ್ವದಲ್ಲಿ ಗಣಪತಿ ಹವನದೊಂದಿಗೆ ಆರಂಭಗೊಂಡಿತು. ಜೊತೆಗೇ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಕಾರ್ಯಕ್ರಮಗಳು ನಡೆದವು. ಸಂಜೆ 4.00 ಗಂಟೆಗೆ ಅಗ್ನಿಹೋತ್ರಿ ದಂಪತಿಗಳನ್ನು ಮತ್ತು ಶ್ರೀ ಕ್ಷೇತ್ರ ಕಟೀಲಿನ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣರನ್ನು ಪೂರ್ಣಕುಂಭದೊಡನೆ ಬರಮಾಡಿಕೊಳ್ಳಲಾಯಿತು. ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವಸದಸ್ಯರು, ಭಕ್ತಾದಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಂಜೆ ಅಗ್ನಿಹೋತ್ರಿಗಳಿಂದ ಅರಣೀಮಥನ ನೆರವೇರುವುದರೊಂದಿಗೆ ನಕ್ಷತ್ರೇಷ್ಟಿಗೆ ಚಾಲನೆ ನೀಡಲಾಯಿತು. ಪರಮಪೂಜ್ಯ ಶ್ರೀಯೋಗಾನಂದ ಸರಸ್ವತೀ ಶ್ರೀಗಳು, ಕಟೀಲು ಶ್ರೀಕ್ಷೇತ್ರದ ಬ್ರಹ್ಮಶ್ರೀ ಹರಿನಾರಾಯಣ ಆಸ್ರಣ್ಣ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಕಾರ್ಯಕರ್ತರ ತಂಡ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡು ಕೆೆಲಸಕಾರ್ಯಗಳಲ್ಲಿ ನಿರತರಾಗಿದ್ದಾರೆ.