ಖಾಸಗಿ ಬಸ್ಸುಗಳಿಗೆ ಏಕರೂಪಿ ಕಲರ್ಕೋಡ್
ಕುಂಬಳೆ: ಕೇರಳ ಸಾರಿಗೆ ಇಲಾಖೆ ಅಧೀನದಲ್ಲಿ ಈ ಹಿಂದೆ ನಿಶ್ಚಯಿಸಿದಂತೆ ಖಾಸಗಿ ಬಸ್ಸುಗಳಿಗೆ ನೀಲಿ ಹಾಗೂ ಬಿಳಿ ಬಣ್ಣದ ಏಕರೂಪಿ ಕಲರ್ ಕೋಡ್ ಜ್ಯಾರಿಗೆ ಬಂದಿದ್ದು, ಖಾಸಗಿ ಬಸ್ಸುಗಳು ಹೊಸ ಅವತಾರದಲ್ಲಿ ರಸ್ತೆಗಿಳಿಯಲಿವೆ. ಪರವಾನಗಿ ನವೀಕರಣದ ವೇಳೆ ಖಾಸಗಿ ಬಸ್ಸುಗಳು ಕಲರ್ಕೋಡ್ ಅಧಿನಿಯಮವನ್ನು ಪಾಲಿಸಬೇಕಿದ್ದು, ಇಲ್ಲವಾದಲ್ಲಿ ಪರವಾನಗಿ ರದ್ದುಗೊಳ್ಳಲಿದೆ ಎಂದು ಸಾರಿಗೆ ಇಲಾಖೆ ಈ ಹಿಂದೆ ಸೂಚನೆ ನೀಡಿತ್ತು. ಜಿಲ್ಲೆಯಲ್ಲಿ ಪರವಾನಗಿ ನವೀಕರಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಖಾಸಗಿ ಸಿಟಿ ಬಸ್ಸುಗಳು ಸಹಿತ ಗ್ರಾಮಾಂತರ ಸಾರಿಗೆ ಬಸ್ಸುಗಳು ಹೊಸ ಬಣ್ಣದಲ್ಲಿ ಸಂಚಾರಕ್ಕೆ ಅಣಿಯಾಗುತ್ತಿವೆ.
ಕಾಞಂಗಾಡಿನಿಂದ ನಿಲೇಶ್ವರಕ್ಕೆ ಸಂಚರಿಸುವ ಹರಿಪ್ರಿಯಾ ಹೆಸರಿನ ಬಸ್ಸು ಹೊಸ ನಿಯಮದಂತೆ ಕಲರ್ಕೋಡ್ ಮೂಲಕ ತನ್ನ ಮೊದಲ ಸಂಚಾರವನ್ನು ಆರಂಭಿಸಿದೆ. ನೀಲಿ ಬಣ್ಣದಲ್ಲಿರುವ ಖಾಸಗಿ ಬಸ್ಸುಗಳ ಕೆಳ ಪಾಶ್ರ್ವದಲ್ಲಿ ಬಿಳಿ ಬಣ್ಣದ ಮೂರು ರೇಖೆಗಳು ಇರಲಿವೆ. ಫೆ.1 ರಿಂದ ಪರವಾನಗಿ ನವೀಕರಣ ಆರಂಭವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಖಾಸಗಿ ಬಸ್ಸುಗಳು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿವೆ. ಸಿಟಿ ಬಸ್ಸುಗಳಿಗೆ ಬಿಳಿ ಗೆರೆಗಳುಳ್ಳ ಹಸಿರು ಬಣ್ಣ, ಲಿಮಿಟೆಡ್ ಸ್ಟಾಪ್ ಬಸ್ಸುಗಳಿಗೆ ಬಿಳಿ ರೇಖೆಗಳುಳ್ಳ ಕೆಂಬಣ್ಣವನ್ನು ಹೊಂದಲಿವೆ ಎಂದು ಸಾರಿಗೆ ಇಲಾಖೆ ಅಧಿಕೃತರು ತಿಳಿಸಿದ್ದಾರೆ.ಕಲರ್ಕೋಡ್ ಆರಂಭವಾದ ಕಾರಣ ಬಸ್ಸುಗಳ ಹೊಸತನವನ್ನು ಬಹಳ ಕೌತುಕದಿಂದ ಪ್ರಯಾಣಿಕರು ವೀಕ್ಷಿಸುವ ದೃಷ್ಯ ಸಾಮಾನ್ಯವಾಗಿದೆ.