HEALTH TIPS

No title

                       ಜಯರಾಮ ಪಾಟಾಳಿ ಪಡುಮಲೆಯವರಿಗೆ ಜಾನಪದ ಲೋಕ  ಪ್ರಶಸ್ತಿ ಪ್ರಧಾನ
    ಬದಿಯಡ್ಕ: ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಯ ಯಕ್ಷಗಾನ ಕಲೆ ವರ್ತಮಾನದಲ್ಲಿ ವ್ಯಾಪಕವಾಗಿ ಪ್ರಸಿದ್ದಿಗೆ ಬಂದಿರುವುದು ಅದರ ಕಲಾವಿದರು ಮತ್ತು ಕಲಾಪೋಷಕರ ಅಪರಿಮಿತ ಶ್ರಮದಿಂದ. ರಾಷ್ಟ್ರದ ಪ್ರಾಚೀನ ಸಂಸ್ಕೃತಿ  ಸಂವರ್ಧನೆಯಲ್ಲಿ ಮಹತ್ವಪೂರ್ಣವಾದ ಕೊಡುಗೆ ನೀಡುತ್ತಿರುವ ಯಕ್ಷಗಾನದ ಕಲಾವಿದರ ಸಾಮಥ್ರ್ಯ-ಶ್ರಮಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಾಗರಿಕ ಸಮಾಜದ ಕರ್ತವ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಂ ಶ್ರೀ ಕ್ಷೇತ್ರ ಆದಿಚುಂಚನಗಿಯ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳು ಆಶೀರ್ವಚನವಿತ್ತು ಹರಸಿದರು.
      ಕನರ್ಾಟಕ ಜಾನಪದ ಪರಿಷತ್ತು ಕೇಂದ್ರ ಘಟಕವು ರಾಮನಗರದಲ್ಲಿರುವ ಜಾನಪದ ಗ್ರಾಮದಲ್ಲಿ ಆಯೋಜಿಸಿದ್ದ ಪ್ರವಾಸಿ ಜಾನಪದ ಲೋಕೋತ್ಸವ ಸಮರಂಭದ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಬಣ್ಣದ ವೇಶಧಾರಿ ಜಯರಾಮ ಪಾಟಾಳಿ ಪಡುಮಲೆ ಯವರಿಗೆ ಪ್ರಸ್ತುತ ಸಾಲಿನ ಜಾನಪದ ಲೋಕ  ಪ್ರಶಸ್ತಿ ಪ್ರಧಾನಗೈದು ಶ್ರೀಗಳು ಮಾತನಾಡಿದರು.
   ಕಲೆ, ಕಲಾವಿದರನ್ನು ಗುರುತಿಸುವ ಸಮಾಜ ತನ್ನ ಜವಾಬ್ದಾರಿ ನಿರ್ವಹಣೆಯ ಮೂಲಕ ಸಂತೃಪ್ತಗೊಳ್ಳುವ ಜೊತೆಗೆ ಪ್ರಾಚೀನ ಕಲೆಗಳ ಪುನರುತ್ಥಾನಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ತಿಳಿಸಿದ ಶ್ರೀಗಳು, ಯುವ ತಲೆಮಾರು ಜಾನಪದ ಕಲೆಗಳನ್ನು ಬೆಳೆಸುವಲ್ಲಿ ಮುತುವಜರ್ಿಯಿಂದ ಮುಂದೆಬರಬೇಕೆಂದು ತಿಳಿಸಿದರು.
   ಶ್ರೀ ಕ್ಷೇತ್ರ ಆದಿಚುಂಚನಗಿಯ ಶಾಖಾ ಮಠಾಧೀಶ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಜಾನಪದ ಪರಿಷತ್ತಿನ ನಿದರ್ೇಶಕ ಏರ್ಯ ಲಕ್ಷ್ಮೀನಾರಾಯಣ ಆಳ್ವ,  ಡಾ.ವೈ.ಕೆ.ಪುಟ್ಟಸೋಮೇಗೌಡ, ಆದಿತ್ಯ ನಂಜರಾಜ್ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಆಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ, ಸೈಫುಲ್ಲಾ ತಂಙಳ್, ಝಡ್.ಎ.ಕಯ್ಯಾರ್,ಅಖೀಲೇಶ್ ನಗುಮುಗಂ, ವಸಂತ, ಫಾರುಕ್, ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
    ಕನರ್ಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ.ತಿಮ್ಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries