HEALTH TIPS

No title

           ರಂಜಿಸಿದ ಸವಾಕ್ ಸಾಂಸ್ಕೃತಿಕ ಸಂಜೆ
  ಕುಂಬಳೆ: ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಕೇರಳ(ಸವಾಕ್) ಸಂಘಟನೆಯ ಆಶ್ರಯದಲ್ಲಿ ಭಾನುವಾರ ಸಂಜೆ ಕಾಸರಗೊಡು ನಗರಸಭಾ ಸಭಾಂಗಣದಲ್ಲಿ  ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಿತು.
   ಸಮಾರಂಭವನ್ನು ಸವಾಕ್ ಜಿಲ್ಲಾ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಉದ್ಘಾಟಿಸಿದರು. ಬಳಿಕ ಸಂಘಟನೆಯ ಸದಸ್ಯರಿಂದ ವೈವಿಧ್ಯಮಯ ನೃತ್ಯ, ಹಾಡುಗಾರಿಕೆ ಮೊದಲಾದವುಗಳ ಪ್ರದರ್ಶನ ನಡೆಯಿತು.ಈ ಸಂದರ್ಭ ಜ.20 ರಂದು ಕಾಸರಗೊಡಿನಲ್ಲಿ ನಡೆದ ಸವಾಕ್ ಜಿಲ್ಲಾ ಕುಟುಂಬ ಸಂಗಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಘೋಷಯಾತ್ರೆಯ ಸ್ತಬ್ದಚಿತ್ರದಲ್ಲಿ ಅತ್ಯಪೂರ್ವ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಕಾಸರಗೊಡು ನಗರಸಭಾ ವ್ಯಾಪ್ತಿಯ ತಂಡ ಪ್ರಥಮ, ಕಾಂಞಿಂಗಾಡ್ ನಗರ ಸಭಾ ವ್ಯಾಪ್ತಿಯ ತಂಡ ದ್ವಿತೀಯ ಹಾಗೂ ಕಾರಡ್ಕ ಬ್ಲಾಕ್ ತೃತೀಯ ಬಹುಮಾನ ಪಡೆಯಿತು. ಜೊತೆಗೆ ಜಿಲ್ಲಾ ಸಮ್ಮೇಳನದ ಗೌರವ ಪ್ರವೇಶ ಚೀಟಿಯ ವಿಶೇಷ ಬಹುಮಾನಗಳನ್ನೂ ಈ ಸಂದರ್ಭ ವಿತರಿಸಲಾಯಿತು. ಹಿರಿಯ ವಯಲಿನ್ ಕಲಾವಿದ ದೇವರಾಜ್ ರವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
  ಉದ್ಯಮಿ, ಕಲಾಪೋಷಕ ಸಿ.ಎಲ್. ಹಮೀದ್ ಬಹುಮಾನಗಳನ್ನು ವಿತರಿಸಿದರು. ಈ ಸಂದರ್ಭ ಅವರು ಮಾತನಾಡಿ, ಕಲಾವಿದರು, ಕಲಾ ಸಂಬಂಧಿ ಚಟುಟವಿಕೆಗಳಲ್ಲಿ ತೊಡಗಿಸಿಕೊಂಡವರ ಹಿತ ಸಂರಕ್ಷಣೆಗಾಗಿ ಕಾರ್ಯವೆಸಗುತ್ತಿರುವ ಸವಾಕ್, ಕಲಾವಿದರ ಬಲಿಷ್ಠತೆಗೆ ಸಹಾಯಕವಾಗಿ ಕಾರ್ಯವೆಸಗುತ್ತಿರುವುದು ಸ್ತುತ್ಯರ್ಹ. ಪ್ರತಿಯೊಬ್ಬ ಕಲಾವಿದರೂ, ಕಲಾ ನಿಪುಣರು ಒಗ್ಗಟ್ಟಿನಿಂದ ಸಂಘಟನೆಯನ್ನು ಇನ್ನಷ್ಟು ಬೆಳೆಸಿ ಇತರರಿಗೆ ಮಾದರಿಯಾಗಬೇಕಿದೆ ಎಂದು ತಿಳಿಸಿದರು.
   ಪತ್ರಕರ್ತ, ಸಾಹಿತಿ ರವೀಂದ್ರನ್ ಪಾಡಿ ಉಪಸ್ಥಿತರಿದ್ದು, ಬಹುಮಾನಿತರನ್ನು ಅಭಿನಂದಿಸಿದರು. ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ ಸಾಲ್ಯಾನ್, ಕಾರ್ಯದಶರ್ಿ ತುಳಸೀಧರನ್, ಉಮೇಶ್ ಮಾಸ್ಟರ್ ಫ್ಯೂಷನ್, ವಿ.ಜಿ.ಕಾಸರಗೋಡು, ಸುಸ್ಮಿತಾ, ಜಯಶ್ರೀ ಸುವರ್ಣ ಸಹಿತ ವಿವಿಧ ಬ್ಲಾಕ್ ಗಳ, ನಗರ ಸಭಾ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. 
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries