HEALTH TIPS

No title

           ವಿಫಲಗೊಂಡ ಚಚರ್ೆ-ಖಾಸಗೀ ಬಸ್ ಮುಷ್ಕರ ನಾಲ್ಕನೇ ದಿನಕ್ಕೆ
  ಕೋಳಿಕ್ಕೋಡ್: ಖಾಸಗೀ ಬಸ್ ಮುಷ್ಕರಕ್ಕೆ ಸಂಬಂಧಿಸಿ ಖಾಸಗೀ ಬಸ್ ಮಾಲಕರ ಸಂಯುಕ್ತ ಸಂಘಟನೆ ರಾಜ್ಯ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಜೊತೆ ಭಾನುವಾರ ನಡೆಸಿದ ಮಾತುಕತೆ ವಿಫಲಗೊಂಡಿದ್ದು, ಸೋಮವಾರ ನಾಲ್ಕನೇ ದಿನಕ್ಕೆ ಕಾಲಿರಿಸಿದ ಮುಷ್ಕರ ಜನಸಾಮಾನ್ಯರ ಸಂಚಾರ ಸಂಕಷ್ಟಕ್ಕೆ ಕಾರಣವಾಗಿ ಭೀತಿಯ ವಾತಾವರಣಕ್ಕೆಡೆಯಾಗಿದೆ. ವಿದ್ಯಾಥರ್ಿಗಳ ರೀಯಾಯಿತಿ ದರ ಸಹಿತ ಬಸ್ ಮಾಲಕರ ಸಂಘಟನೆ ಬೇಡಿಕೆಯೊಡ್ಡಿದ ಮನವಿಯನ್ನು ಸರಕಾರ ಅಂಗೀಕರಿಸದ್ದರಿಂದ ಮುಷ್ಕರ ಮುಂದುವರಿಯಲಿದೆ.
   ಬೇಡಕೆಗಳ ಪೈಕಿ ಪ್ರಧಾನ ಬೇಡಿಕೆಗಳಿಗೆ ಸರಕಾರ ಯಾವುದೇ ತೀಮರ್ಾನಕ್ಕೆ ನಿರಾಕರಿಸಿತೆಂದು ಕೋಳಿಕ್ಕೋಡ್ ಅತಿಥಿ ಗೃಹದಲ್ಲಿ ಭಾನುವಾರ ನಡೆದ ಚಚರ್ೆಯ ಬಳಿಕ ಬಸ್ ಮಾಲಕರ ಸಂಯುಕ್ತ ಸಂಘಟನೆಯ ಪದಾಧಿಕಾರಿಗಳು ಮಾಧ್ಯಮಗಳೊಂದಿಗೆ ತಿಳಿಸಿದರು. ಆದುದರಿಂದ ಖಾಸಗೀ ಬಸ್ ಗಳ ಅನಿಧರ್ಿಷ್ಟಾವಧಿ ಮುಷ್ಕರ ಮುಂದುವರಿಯಲಿದೆ. ವಿದ್ಯಾಥರ್ಿಗಳ ರೀಯಾಯಿತಿ ದರವನ್ನು ಹೆಚ್ಚಿಸುವ ತೀಮರ್ಾನ ಕೈಗೊಳ್ಳದ ಹೊರತು ಮುಷ್ಕರದಿಂದ ಹಿಂದೆ ಸರಿಯುವ ಮಾತೇ ಇಲ್ಲವೆಂದು ಅವರು ತಿಳಿಸಿದರು.
   ಈ ಮಧ್ಯೆ ಬಸ್ ಮಾಲಕರು ಸರಕಾರದೊಂದಿಗೆ ಶಾಮೀಲಾಗಿ ವಂಚಿಸುವ ಹುನ್ನಾರ ನಡೆಸುತ್ತಿದೆಯೆಂದು ಆರೋಪಿಸಿ ಬಸ್ ಮಾಲಕರ ಸಂಘದ ಒಂದು ವಿಭಾಗ ಸಚಿವರೊಂದಿಗೆ ಸಭೆ ನಡೆಯುತ್ತಿರುವ ವೇಳೆಯಲ್ಲಿ ಅತಿಥಿ ಗೃಹದ ಹೊರಗೆ ಗಲಭೆ ಎಬ್ಬಿಸಲು ಪ್ರಯತ್ನಿಸಿದ್ದು ಈ ವೇಳೆ ಸಂಘಷರ್ಾವಸ್ಥೆ ಸೃಷ್ಟಿಸಿತು. ಬಳಿಕ ಪೋಲೀಸರು ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದರು.
    ಪ್ರಯಾಣಿಕರ ಕನಿಷ್ಠ ದರವನ್ನು ಸರಕಾರವು ಈಗಿನ 7 ರಿಂದ  ಎಂಟು ರೂ.ಗಳಿಗೆ  ಏರಿಕೆ ಮಾಡಲು ನಿದರ್ೇಶಿಸಿದ್ದನ್ನು ವಿರೋಧಿಸಿ, ಅದು 10 ರೂ.ಗಳಾಗಿ ಹೆಚ್ಚಿಸಬೇಕೆಂಬ ಬೇಡಿಕೆ ಮುಂದಿರಿಸಿ  ಮುಷ್ಕರ ಆರಂಭಿಸಲಾಗಿತ್ತು. ಜೊತೆಗೆ ವಿದ್ಯಾಥರ್ಿಗಳ ರೀಯಾಯಿತಿ ದರ ಹೆಚ್ಚಿಸಿದಲ್ಲಿ ಮುಷ್ಕರದಿಂದ ಹಿಂದೆ ಸರಿಯುವುದಾಗಿ ಬಸ್ ಮಾಲಕರ ಸಂಘ ತಿಳಿಸಿತ್ತು.
   ಜನಸಾಮಾನ್ಯರ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ-ಸಾರಿಗೆ ಸಚಿವ:
   ಜನಸಾಮಾನ್ಯರು ಬಸ್ ಮುಷ್ಕರದಿಂದ ಕಂಗೆಟ್ಟಿರುವುದು ಸರಕಾರದ ಅರಿವಿಗೆ ಬಂದಿದ್ದು, ಪರಿಹಾರ ಕಲ್ಪಿಸಲಾಗುವುದೆಂದು ಸಚಿವರು ಮಾಧ್ಯಮಗಳಿಗೆ ತಿಳಿಸಿರುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries