HEALTH TIPS

No title

             ಕದ್ದನೆಂಬ ಆರೋಪ ಹೊರಿಸಿ ಆದಿವಾಸಿ ಯುವಕನ ಕೊಲೆ
    ಕುಂಬಳೆ: ಮಾನಸಿಕ ಅಸ್ವಸ್ಥ ಆದಿವಾಸಿ ಯುವಕನ ಮೇಲೆ ಕಳ್ಳತನ ಆರೋಪ ಹೊರಿಸಿ ಗ್ರಾಮಸ್ಥರು ಥಳಿಸಿ ಹತ್ಯೆ ನಡೆಸಿದ ಘಟನೆ ಪಾಲಕ್ಕಾಡು ಜಿಲ್ಲೆಯ ಅಟ್ಟಪ್ಪಾಡಿಯಲ್ಲಿ ನಡೆದಿದೆ. ಕಡುಕುಮನ್ನ ಆದಿವಾಸಿ ಗ್ರಾಮದ ಮಧು(27) ಕೊಲೆಗೀಡಾದ ಯುವಕನಾಗಿದ್ದಾನೆ. ಗುರುವಾರದಂದು ಊರ ಕೆಲ ಮಂದಿ ಯುವಕನನ್ನು ಸಮೀಪದ ಅಂಗಡಿಗಳಿಂದ ವಸ್ತುಗಳನ್ನು ಕದ್ದಿದ್ದಾನೆಂದು ಆರೋಪಿಸಿ ಕಾನೂನನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿ ಥಳಿಸಿದ್ದಾರೆ. ಮಾಹಿತಿಯನ್ನರಿತ ಪೋಲಿಸರು ಅಸ್ವಸ್ಥ ಯುವಕನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮಧು ಅಸುನೀಗಿದ್ದಾನೆ.
  ಕೆಲ ದಿನಗಳ ಹಿಂದೆ ಸಮೀಪದ ಅಂಗಡಿ ಹಾಗೂ ಮನೆಗಳಿಂದ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದ ಎನ್ನಲಾಗಿದೆ.ಮಾಹಿತಿಯನ್ನು ತಿಳಿದ ಗ್ರಾಮಸ್ಥರು ಯುವಕನನ್ನು ಪತ್ತೆ ಹಚ್ಚಿದ್ದು ವಿಚಾರಿಸಿದ್ದಾರೆ.ಯುವಕನನ್ನು ಥಳಿಸುತ್ತಿರುವ ದೃಷ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಮಂದಿ ಹರಿಬಿಟ್ಟಿದ್ದು, ಮಧುವಿನ ಎರಡು ಕೈಗಳನ್ನು ಲುಂಗಿಯಿಂದ ಕಟ್ಟಲಾಗಿತ್ತು ಎನ್ನಲಾಗಿದೆ.ಮಾಹಿತಿ ಅರಿತ ಅಗಲಿ ಠಾಣಾ ಪೋಲಿಸರು ಸ್ಥಳಕ್ಕೆ ಧಾವಿಸಿ ಮಧುವಿನ ರಕ್ಷಣೆಗೆ ಮುಂದಾಗಿದ್ದಾರೆ.ಪೋಲಿಸ್ ಮಾಹಿತಿಯಂತೆ ಆದಿವಾಸಿ ಯುವಕ ಮಧುವಿನ ಬಾಹ್ಯ ಶರೀರದಲ್ಲಿಯಾವುದೇ ಗುರುತರ ಗಾಯಗಳಾಗಿಲ್ಲ ಎನ್ನಲಾಗಿದೆ.ಬಹಳ ಕ್ಷೀಣಿಸಿದ್ದ ಯುವಕನನ್ನು ಪೋಲಿಸ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ತೀವ್ರ ಅಸ್ವಸ್ಥತೆ ಕಂಡಿದ್ದು ಬಳಲಿ ವಾಂತಿಯಾಗಿದೆ ಎನ್ನಲಾಗಿದೆ.
  ವಿಡಿಯೋ ತುಣುಕೊಂದರಲ್ಲಿ ಮಧುವಿನ ಎರಡೂ ಕೈಗಳು ಕಟ್ಟಲ್ಪಟ್ಟಿದ್ದು, ಆತನ ಚೀಲವನ್ನು ಊರ ಮಂದಿ ಪರೀಕ್ಷಿಸುವ ದೃಶ್ಯವಿದೆ. ಅಕ್ಕಿ ಹಾಗೂ ಕೆಲ ಬೇಕರಿ ಸಾಮಾನುಗಳು ಕೈಚೀಲದಲ್ಲಿದ್ದು, ತಪ್ಪಿಸ್ಥರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗುವುದೆಂದು ಹಿಂದುಳಿದ ವರ್ಗದ ಕ್ಷೇಮಾಭಿವೃದ್ಧಿ ಸಚಿವ ಎ.ಕೆ ಬಾಲನ್ ಹೇಳಿದ್ದು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ನಿದರ್ೇಶಿಸಲಾಗಿದೆ. ಘಟನೆಯನ್ನು ಖಂಡಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಘಟನೆ ಕೇರಳ ಸಾಂಸ್ಕೃತಿಕ ಮುನ್ನೆಲೆಗೆ ಕಪ್ಪುಚುಕ್ಕಿಯಾಗಿದೆ. ಇಂತಹ ಘಟನೆಯನ್ನು ಮರುಕಳಿಸದಂತೆ ಸಮಾಜ ಜಾಗೃತೆ ವಹಿಸಿಬೇಕಿದೆ ಎಂದಿದ್ದಾರೆ. ಪೋಲಿಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕೊಲೆಗೀಡಾದ ಯುವಕನು ಹಲವು ತಿಂಗಳಿಂದ ತನ್ನ ಕುಟುಂಬ ಸದಸ್ಯರಿಂದ ದೂರವಿದ್ದು ಕಾಡಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries