HEALTH TIPS

No title

            ಜಿಲ್ಲೆಯಲ್ಲಿ ಗ್ರಾಪಂ. ಒಂದರ ಪ್ರಪ್ರಥಮ ಯೋಜನೆ
              ಜನಪದ ಸಿರಿ-ವಿದ್ಯಾಥರ್ಿಗಳಿಗೆ ಪ್ರಾತ್ಯಕ್ಷಿಕೆ, ಪ್ರದರ್ಶನ               
   ಕುಂಬಳೆ: ಬಹುಭಾಷಾ ಸಂಗಮ ಭೂಮಿಯಾದ ತೌಳವ ನಾಡಿನ ವಿಶಿಷ್ಟ ಪ್ರಾಚೀನ ಜಾನಪದ ಕಲಾ ಪ್ರಕಾರಗಳನ್ನು ಯುವ ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಗ್ರಾ.ಪಂ. ಅಹನರ್ಿಶಿ ಪ್ರಯತ್ನಿಸಬೇಕು,. ಸ್ಥಳೀಯಾಡಳಿತಗಳ ಮೂಲಕ ಜನಪರವಾದ ಇಂತಹ ಯೋಜನೆಗಳು ಕಾರ್ಯಗತಗೊಂಡಾಗ ಸಂಸ್ಕೃತಿ ಸಮವರ್ಧನೆಗೆ ಬಲ ನೀಡಿದಂತಾಗುವುದೆಂದು ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅಭಿಪ್ರಾಯಪಟ್ಟರು.
  ಕುಂಬಳೆ  ಗ್ರಾಮ ಪಂಚಾಯತು ಗ್ರಾ.ಪಂ. ವ್ಯಾಪ್ತಿಯ ಶಾಲೆಗಳ ವಿದ್ಯಾಥರ್ಿಗಳಿಗೆ ಜಾನಪದ ಕಲಾ ಪ್ರಕಾರಗಳ ತಿಳುವಳಿಕೆಗೆ ಬೇಕಾಗಿ ಗ್ರಾ.ಪಂ. ಯೋಜನೆಯಲ್ಲಿ ಅಳವಡಿಸಿ ಜಾರಿಗೊಳಿಸಿದ 2 ದಿನಗಳ  "ಜನಪದ ಸಿರಿ" ಸಮಾರಂಭವನ್ನು ಶನಿವಾರ ಕುಂಬಳೆ ಸರಕಾರಿ ಹಿರಿಯ ಬುನಾದಿ ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
   ಪರಸ್ಪರ ಪ್ರೀತಿ, ವಿಶ್ವಾಸಗಳು ಕೆಡವಲ್ಪಟ್ಟು, ವ್ಯಾವಹಾರಿಕ ಜಂಜಡಗಳ ಇಂದಿನ ಬದುಕಿಗೆ ಕೊನೆ ಹಾಡಬೇಕಾದ ಅನಿವಾರ್ಯತೆ ಇದೆ. ಹೊಸ ತಲೆಮಾರು ಯಾಂತ್ರಿಕ ಜೀವನದಿಂದ ಹೊರಬಂದು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬೇಕೆಮಬುದು ಈ ಯೋಜನೆಯ ಉದ್ದೇಶ ಎಂದು ಅವರು ತಿಳಿಸಿದರು.
  ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಅಶ್ರಫ್ ಸಮರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗೀತಾ ಲೋಕನಾಥ ಶೆಟ್ಟಿ, ಸದಸ್ಯರಾದ ಮೊಹಮ್ಮದಾಲಿ, ಫಾತಿಮಾ ಅಬ್ದುಲ್ಲ ಕುಂಞಿ, ಮುರಳೀಧರ ಯಾದವ್ ನಾಯ್ಕಾಪು ಉಪಸ್ಥಿತರಿದ್ದು ಮಾತನಾಡಿದರು. ಕುಂಬಳೆ ಗ್ರಾ.ಪಂ. ವಿದ್ಯಾಭ್ಯಾಸ ವಿಭಾಗದ ಕಾರ್ಯದಶರ್ಿ ರಾಮಚಂದ್ರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗುರುಮೂತರ್ಿ ನಾಯ್ಕಾಪು ವಂದಿಸಿದರು.
   ಗ್ರಾ.ಪಂ. ವ್ಯಾಪ್ತಿಯ ವಿವಿಧ ಶಾಲೆಗಳ ಆಯ್ದ 130ಕ್ಕಿಂತಲೂ ಮಿಕ್ಕಿದ ವಿದ್ಯಾಥರ್ಿಗಳು ಎರಡು ದಿನದ ವಿಶೇಷ ಶಿಬಿರದಲ್ಲಿ ಭಾಗವಹಿಸಿದರು. ತುಳು ಪಾಡ್ದನ, ನಲಿಕೆ, ಯಕ್ಷಗಾನ ಸಹಿತ ವಿವಿಧ ಜಾನಪದ ಕಲೆಗಳ ಪ್ರಾತ್ಯಕ್ಷಿಕೆ, ವಿವರಣೆಗಳ ಸಹಿತ ತರಬೇತಿ ತಜ್ಞರಿಂದ ನಡೆಸಲ್ಪಟ್ಟು ಪ್ರದರ್ಶನಗಳು ನಡೆದವು.
   ಕುಂಬಳೆ ಗ್ರಾ.ಪಂ. ಈ ಯೋಜನೆಗೆ 2017-18 ರ ಯೋಜನೆಯಲ್ಲಿ 2 ಲಕ್ಷ ರೂ.ಗಳನ್ನು ಮೀಸಲಿರಿಸಿದ್ದು, ಜಿಲ್ಲೆಯಲ್ಲೇ ಜಾನಪದ ಕಲಾ ಪ್ರಕಾರದ ಹೊಸತನದ ಸಂವರ್ಧನೆಗೆ ಈ ರೀತಿಯ ನಿಧಿ ಮೀಸಲಿರಿಸಿ ಜಾರಿಗೊಳಿಸಿದ್ದು ಕುಂಬಳೆ ಗ್ರಾ.ಪಂ ನ ಹೆಗ್ಗಳಿಕೆಯಾಗಿದೆ.
    (ಈ ಬಗೆಗಿನ ವಿಸ್ಕೃತ ವರದಿ ಶೀಘ್ರ ನಿರೀಕ್ಷಿಸಿ...ನಿಮ್ಮ ಸಮರಸದಲ್ಲಿ.)



   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries