ಮಜಿಬೈಲು ಶಾಲೆಯಲ್ಲಿ ಮಧುರ ಕನ್ನಡ ಘೋಷಣೆ
ಮಂಜೇಶ್ವರ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಅಯೋಜಿಸಿದ `ಮಧುರ ಕನ್ನಡ' ಕಾರ್ಯಕ್ರಮ ನಡೆಯಿತು. ಕನ್ನಡದಲ್ಲಿ ತೀರಾ ಹಿಂದುಳಿದ ಮಕ್ಕಳಿಗಾಗಿ ಕಳೆದ ಒಂದು ತಿಂಗಳಿಂದ ಪ್ರತಿದಿನ ಒಂದು ಗಂಟೆ ತರಬೇತು ನೀಡುವ ಈ ಶಿಬಿರದ ಫಲವಾಗಿ ಇಂದು ಭಾಗವಹಿಸಿದೆಲ್ಲಾ ಮಕ್ಕಳು ಸ್ವತಂತ್ರವಾಗಿ ಓದಬಲ್ಲರು ಎಂಬುದನ್ನು ಹೆತ್ತವರ ಸಾನಿಧ್ಯದಲ್ಲಿ ಘೋಸಲಾಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಗೀತಾ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಸುಶೀಲ, ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಕ್ಕಳ ಮೂರು ಹಸ್ತ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು. ಜೊತೆಗೆ ತರಬೇತಿಯಲ್ಲಿ ಭಾಗವಹಿಸಿದ ಮಕ್ಕಳ ಪ್ರತಿಭೆಯನ್ನು ಪ್ರದಶರ್ಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಜೈಶಂಕರ ವಿ.ಜಿ. ಸ್ವಾಗತಿಸಿ, ಶಿಕ್ಷಕಿ ಕವಿತ ವಂದಿಸಿದರು. ಶಿಕ್ಷಕಿ ಸೀಮಾ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.