ಪೆರ್ಲದಲ್ಲಿ ಯೋಗ ತರಬೇತಿ ಉದ್ಘಾಟನೆ
ಪೆರ್ಲ: ಪೆರ್ಲದ ಶ್ರೀ ಶಂಕರಸದನ ಸಮುಚ್ಚಯದಲ್ಲಿ ಭಾನುವಾರ ನಡೆದ ಶ್ರೀಮಾತಾ ಯೋಗ ಕೇಂದ್ರ ಪೆರ್ಲ ಇದರ ಯೋಗ ತರಗತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಇವರು ಯೋಗಾಭ್ಯಾಸ ಮಾನವ ಜೀವನದಲ್ಲಿ ಹೇಗೆ ಪ್ರಭಾವ ಬೀರುತ್ತದೆ , ಮನಸ್ಸಿನ ಏಕಾಗ್ರತೆ ಯೋಗಾಭ್ಯಾಸದಿಂದ ಹೇಗೆ ಹತೋಟಿಯಲ್ಲಿಡಬಹುದು, ಯೋಗ ಮುದ್ರೆಗಳ ಅಭ್ಯಾಸದಿಂದ ಮಾನವನಬ ಶರೀರಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಸಮಂಜಸವಾದ ವಿವರಣೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಸತ್ಯನಾರಾಯಣ ಹೈಸ್ಕೂಲಿನ ಮುಖ್ಯೋಪಾಧ್ಯಾಯ ರಾಜೇಂದ್ರ. ಬಿ ಮಾತನಾಡಿ ಯೋಗ ತನ್ನ ಜೀವನದಲ್ಲಿ ಉತ್ತಮ ಪ್ರಭಾವ ಬೀರಿದೆ. ಕೆಲಸ ಒತ್ತಡ ಎಷ್ಟೇ ಇದ್ದರೂ ದಿನದ ಸ್ವಲ್ಪ ಸಮಯ ಯೋಗಾಭ್ಯಾಸಕ್ಕಾಗಿ ಮುಡಿಪಾಗಿಟ್ಟರೆ ಮನಃಶಾಂತಿ ಹಾಗೂ ದೇಹದ ಸಮತೋಲಕ್ಕೆ ಬಹಳ ಅನೂಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉದ್ಘಾಟಕರಿಂದ ಯೋಗ ಶಿಕ್ಷಕಿ ದಿವ್ಯ ಕೇಶವ ಶರ್ಮ ಪಳ್ಳತ್ತಡ್ಕ ಬರೆದು ಪ್ರಕಟಿಸಿದ ಮೇಧಾ ಸರಸ್ವತಿ ಕ್ರಿಯಾ ಯೋಗ ಎನ್ನುವ ಕಿರುಹೊತ್ತಗೆಯನ್ನು ಬಿಡುಗಡೆಗೊಳಿಸಲಾಯಿತು. ಯೋಗ ,ಧ್ಯಾನ ಯೋಗಮುದ್ರೆಗಳು ಹಾಗೂ ಇನ್ನಿತರ ಹಲವು ಯೋಗಕ್ಕೆ ಉಪಯುಕ್ತವಾದ ಲೇಖನ ಮತ್ತು ಭಂಗಿಗಳು ಈ ಪುಸ್ತಕದಲ್ಲಿ ಪ್ರಕಟಪಡಿಸಲಾಗಿದೆ.
ಉಕ್ಕಿನಡ್ಕ ಸಹಸ್ರಾಕ್ಷ ವೈದ್ಯಶಾಲೆಯ ವೈದ್ಯೆ ಡಾ.ಸ್ವಪ್ನಾ ಜೆ ಉಕ್ಕಿನಡ್ಕ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಯೋಗಾಭ್ಯಾಸ ಎಲ್ಲಾ ರೋಗಗಳಿಗೂ ದಿವ್ಯ ಔಷಧ. ಯೋಗಾಭ್ಯಾಸವನ್ನು ಪ್ರತಿಯೊಬ್ಬರೂ ಅಳವಡಿಸುವ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ಪ್ರಾರಂಭಗೊಂಡ ತರಗತಿ ನಿರಂತರವಾಗಿ ಮುಂದುವರಿಯಲೆಂದು ಹಾರೈಸಿದರು. ಯೋಗ ಶಿಕ್ಷಕಿ ದಿವ್ಯ ಕೇಶವ ಶರ್ಮ ಪಳ್ಳತ್ತಡ್ಕ ಉಪಸ್ಥಿತರಿದ್ದರು. ಶಂಕುತಲಾ ಶಂನಾ ಭಟ್ ಪೆರ್ಲ ಸ್ವಾಗತಿಸಿ, ಶಾಂತ ಜೆ ಶೆಟ್ಟಿ ಸೇರಾಜೆ ವಂದಿಸಿದರು. ಮಹಿಳೆಯರಿಗಾಗಿಯೇ ಪ್ರಾರಂಭಗೊಂಡ ಯೋಗ ತರಗತಿಗಳು ನುರಿತ ಯೋಗಶಿಕ್ಷಕಿ ದಿವ್ಯಕೇಶವ ಶರ್ಮ ಪಳ್ಳತ್ತಡ್ಕ ಇವರಿಂದ ಪ್ರತಿ ಭಾನುವಾರ ಸಂಜೆ 4.15ರಿಂದ 5.30ರ ವರೆಗೆ ನಿರಂತರವಾಗಿ ಶ್ರೀಶಂಕರಸದನದ ಸಮುಚ್ಚಯದಲ್ಲಿ ನಡೆಯಲಿದೆ. ಈ ತರಗತಿಗಳ ಪ್ರಯೋಜನವನ್ನು ಎಲ್ಲಾ ಮಾತೆಯರು ಪಡೆಯಬೇಕಾಗಿ ಆಯೋಜಕರು ವಿನಂತಿಸಿಕೊಂಡಿದ್ದಾರೆ.