HEALTH TIPS

No title

               ಸಂಗೀತ ಶಕ್ತಿವರ್ಧಕ : ಡಾ.ಯು.ಬಿ.ಕುಣಿಕುಳ್ಳಾಯ
     ಬದಿಯಡ್ಕ: ಸಂಗೀತ ಕಲೆಯು ಮನುಷ್ಯನಿಗೆ ಏಕಾಗ್ರತೆಯನ್ನು ತಂದುಕೊಡುವುದಲ್ಲದೆ ಆತನಲ್ಲಿರುವ ಸಕಾರಾತ್ಮಕ ಅಂಶಗಳನ್ನು ಹೆಚ್ಚು ಮಾಡುತ್ತದೆ ಎಂದು ಪ್ರಸಿದ್ಧ ವೈದ್ಯರಾದ ಡಾ.ಯು.ಬಿ.ಕುಣಿಕುಳ್ಳಾಯ ಹೇಳಿದರು.
   ಬದಿಯಡ್ಕ ಸಮೀಪದ ಬಳ್ಳಪದವು ನಾರಾಯಣೀಯಂ ಸಮುಚ್ಛಯದ ವೀಣಾವಾದಿನೀ ಸಂಗೀತ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ವೇದ ನಾದ ತರಂಗಿಣಿ ಸಂಗೀತೋತ್ಸವವನ್ನು ಶುಕ್ರವಾರ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ವಿದ್ಯಾಥರ್ಿಗಳಿಗೆ ಸಂಗೀತ ಕಲಿಕೆಯು ಇತರ ಶಿಕ್ಷಣಗಳಿಗೆ ಪೂರಕವಾಗಿದ್ದು, ಅವರ ವ್ಯಕ್ತಿತ್ವ ವಿಕಸನಕ್ಕೆ ಉಪಕಾರಿಯಾಗಿದೆ. ಕಳೆದ ಹತ್ತೊಂಬತ್ತು ವರ್ಷಗಳ ಹಿಂದೆ ಸ್ಥಾಪನೆಯಾದ ನಾರಾಯಣೀಯಂ ಸಂಸ್ಥೆಯು ಕರಾವಳಿ ಭಾಗದಲ್ಲಿ ಉತ್ತಮವಾದ ಸಂಗೀತ ಶಿಕ್ಷಣವನ್ನು ನೀಡುತ್ತಾ ನಾಡಿಗೆ ಒಂದು ವರದಾನದಂತೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
    ವೇದಿಕೆಯಲ್ಲಿ ಕಲಾಚಾರ್ಯ ಪ್ರೊ.ವೆಂಕಟರಮಣನ್, ಶ್ರೀ ಚಕ್ರ ಪೂಜೆಯ ತಂತ್ರಿ ಬ್ರಹ್ಮಶ್ರೀ ಕೃಷ್ಣನ್ ನಂಬೂದಿರಿ, ಕಲಾವಿದ ವೈಕಮ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಸಂಗೀತ ಶಾಲೆಯ ಪ್ರಾಚಾರ್ಯ ಬಳ್ಳಪದವು ಯೋಗೀಶ ಶರ್ಮ ಅವರ ಮುಂದಾಳತ್ವದಲ್ಲಿ ನವಗ್ರಹ ಕೃತಿಗಳ ಹಾಡುಗಾರಿಕೆ ಜರಗಿತು. ಮಹಾ ಶ್ರೀಚಕ್ರ ಪೂಜೆಯನ್ನು ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ತಂಡವು ನಡೆಸಿಕೊಟ್ಟಿತು. ಈ ಸಂದರ್ಭದಲ್ಲಿ ಪೂಜೆಯ ಭಾಗವಾಗಿ ವೀಣಾವಾದಿನಿಯ ವಿದ್ಯಾಥರ್ಿಗಳಿಂದ ನವರತ್ನ ಕೃತಿಗಳ ಗಾಯನವೂ ಪ್ರಸ್ತುತಗೊಂಡಿತು. 
   ವಿದುಷಿ ಅಥರ್ಾ ಪೆರ್ಲ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾಥರ್ಿಗಳು, ಪೋಷಕರು ಮತ್ತು ಸಂಗೀತ ರಸಿಕರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
    ಶನಿವಾರ ಅತ್ಯಂತ ಅಪೂರ್ವದ ನಿರಂತರ ಎಂಟು ಗಂಟೆ ಕಾಲ ಡಾ. ಎಂ ಬಾಲಮುರಳಿಕೃಷ್ಣ  ಅವರು ರಚಿಸಿದ 72 ಮೇಳಕರ್ತ ಕೃತಿಗಳ ಗಾಯನ ನೂರಾರು ಸಂಗೀತಾಸಕ್ತರ ಸಮಕ್ಷಮ ಪ್ರಸ್ತುತಗೊಂಡಿತು.   ಇದೇ ಸಂದರ್ಭದಲ್ಲಿ ಪಯ್ಯನ್ನೂರಿನ ಲೀಜಾ ದಿನೂಪ್ ಅವರಿಂದ ಕೊನೆಯ 6 ಮೇಳಕರ್ತ ಹಾಡುಗಳಿಗೆ ಭರತನಾಟ್ಯ ಪ್ರಸ್ತುತಿ ಮತ್ತು ಬಾಲಮುರಳಿಯವರ ವರ್ಣಚಿತ್ರ ಬಿಡಿಸುವ ಕಾರ್ಯಕ್ರಮವೂ ವೈಶಿಷ್ಯುಪೂರ್ಣವಾಗಿ ನಡೆಯಿತು. ಸಂಜೆ ಬಾಲಮುರಳಿ ಕೃಷ್ಣರ ಸಂಸ್ಮರಣೆ ನಡೆಯಿತು.
   ಭಾನುವಾರ ಪಂಚರತ್ನ ಕೀರ್ತನೆ, ವೀಣಾವಾದಿನಿ ವಿದ್ಯಾಥರ್ಿಗಳಿಂದ ನಾದೋಪಾಸನೆ, ಕಾಸರಗೋಡಿನ ಸಂಗೀತ ಕಲಾವಿದ ಡಾ.ಶಂಕರರಾಜ್ ಆಲಂಪಾಡಿಯವರಿಗೆ ವೀಣಾವಾದಿನಿ ಪುರಸ್ಕಾರ ಪ್ರಧಾನ ನಡೆಯಲಿದೆ. ಸಂಜೆ ಪ್ರಸಿದ್ದ ಸಂಗೀತ ಕಲಾವಿದ ಚೆನ್ನೈ ವಿಷ್ಣದೇವ ನಂಬೂದಿರಿ ಯವರಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ಕಚೇರಿ, ನಡೆಯಲಿದೆ.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries