HEALTH TIPS

No title

        ಬ್ರಹ್ಮಕಲಶೋತ್ಸವ ತಯಾರಿಯಲ್ಲಿ ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನ ಮಲೆತ್ಕಡ್ಕ -ಸ್ವರ್ಗ
    ಪೆರ್ಲ : ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನ ಮಲೆತ್ಕಡ್ಕ -ಸ್ವರ್ಗ ಇಲ್ಲಿ  ನಾಗಪ್ರತಿಷ್ಠೆ, ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ  ಮತ್ತು ಜಟಾಧಾರಿ ಮಹಿಮೆಯು ಏ.18 ರಿಂದ 24 ರ ತನಕ ವಿವಿಧ ವೈದಿಕ,ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಜರಗಲಿದೆ. ಶ್ರೀ ಜಟಾಧಾರಿಯ ಮೂಲಸ್ಥಾನ ಕಾಮಗಾರಿ ಅಂತಿಮ ಹಂತದಲ್ಲಿರುವುದಾಗಿ ಜೀಣರ್ೋದ್ದಾರ ಸಮಿತಿಯ ಪದಾಧಿಕಾರಿಗಳು  ಮೂಲಸ್ಥಾನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
    ಕ್ಷೇತ್ರದ ಐತಿಹ್ಯ : ಘಟ್ಟದ ಮೇಲಿಂದ  ಬಂದ ಶಿವನ ಅಂಶವಾದ ಶ್ರೀ ಜಟಾಧಾರಿ ದೈವವು ಸ್ವರ್ಗ ಸಮೀಪದ ಮಲೆತ್ತಡ್ಕ ಎಂಬಲ್ಲಿ ನೆಲೆನಿಂತಿತ್ತು ಎಂಬುದು ಐತಿಹ್ಯ.ಅಲ್ಲಿ ನ ಮೂಲನಿವಾಸಿಗಳಿಂದ  ನಿರಂತರವಾಗಿ ಆರಾಧನೆ ಪವರ್ಾದಿಗಳನ್ನು ಸ್ವೀಕರಿಸಿ ನಾಡಿಗೆ ಸುಭೀಕ್ಷೆಯನ್ನು ನೀಡುತ್ತಿತ್ತು.ಏನೋ ತೀವ್ರ ತರಹದ ಸಮಸ್ಯೆಯಿಂದ ಪ್ರದೇಶದ ಮೂಲನಿವಾಸಿಗಳಿಗೆ ಶ್ರೀ ದೈವಕ್ಕೆ ಆರಾಧನೆ ,ಪವರ್ಾದಿಗಳು ಹಾಗೂ ಮಹಿಮೆಯನ್ನು ನಡೆಸಲು ಸಾಧ್ಯವಾಗಲಿಲ್ಲ.ಇದರಿಂದ ಜಟಾಧಾರಿಯ ದೈವದ ಶಕ್ತಿಯು ಕುಂದುವ ಲಕ್ಷಣ ಕಂಡು ಬಂದಿತ್ತು.ಇದರಿಂದ ಶ್ರೀ ದೈವವು ಆಶ್ರಯದಾತರನ್ನು ಅರಸಿ ತಡೆಗಲ್ಲು ಮನೆತನದಲ್ಲಿ ಸಾನಿಧ್ಯವನ್ನು ಕಂಡುಕೊಂಡಿತು.ಬಳಿಕ ಅಲ್ಲಿ ನ ತಡೆಗಲ್ಲು ಮನೆತನತವರ ಮುಂದಾಳುತ್ವದಲ್ಲಿ  ಪಡ್ರೆ ಗಾಳಿಗೋಪುರ ಸಮೀಪ ಬದಿಯೆಂಬಲ್ಲಿ ಶ್ರೀ ದೈವಕ್ಕೆ `ರಾಜಸ್ಥಾನ `ವನ್ನು ಕಲ್ಪಿಸಿ `ಮಹಿಮೆ `ಆರಾಧನೆಯನ್ನು  ನಡೆಸಿಕೊಂಡು ಇಂದಿಗೂ ಬರಲಾಗುತ್ತಿದೆ.
   ಶ್ರೀ ದೈವವು ಆಶ್ರಯದಾತರನ್ನು ಅರಸಿಕೊಂಡು ಹೋದರೂ ತಾನು ನೆಲೆನಿಂತ ಮಲೆತ್ತಡ್ಕ ಎಂಬಲ್ಲಿ ಪುಣ್ಯ ಸ್ಥಳದಲ್ಲಿ  ಶ್ರೀ ದೈವದ ಶಕ್ತಿ ಕುಂದಲಿಲ್ಲ.ಶ್ರೀ ಜಟಾಧಾರಿಯ ಮೂಲಸ್ಥಾನವನ್ನು ನವನಿಮರ್ಾಣ ಮಾಡಿದರೆ ನಾಡಿಗೆ ಅತ್ಯಂತ ಸುಭೀಕ್ಷೆ ಎಂದು ಪ್ರಶ್ನೆ ಮುಖೇರ ಅರಿತ ಭಕ್ತರು ಸಭೆಯೊಂದನ್ನು ಸೇರಿ ಜೀಣೋದ್ದಾರ ಸಮಿತಿಯೊಂದನ್ನು ರಚಿಸಿದರು.ಇಲ್ಲಿ  ಶ್ರೀ ದುಗರ್ೆಯು ಸಂಕಲ್ಪ  ರೀತಿಯಲ್ಲಿ ಅವಿರ್ಭವಿಸಿರುವುದರಿಂದ `ದೈವ ದೇವರ `ಸಂಗಮ ಸ್ಥಳವೂ ಆಗಿದೆ. ಆದುದರಿಂದ ಈ ಕ್ಷೇತ್ರವನ್ನು  ಸುಮಾರು 1.ಕೊ.ರೂ. ವೆಚ್ಚದಲ್ಲಿ   ಭಕ್ತರ ಸಹಾಯದೊಂದಿಗೆ ನವ ನಿಮರ್ಾಣ ಮಾಡಲಾಗುತ್ತಿದೆ.ಈಗಾಗಲೇ ಶ್ರೀ ದೈವದ ಗರ್ಭಗುಡಿ,ಮಾಡು,ಮೂಡು ಗೋಪುರಗಳ ಕುಶಲಕೆತ್ತನೆಯ ಕೆಂಪುಕಲ್ಲಿನ ಗೋಡೆ  ಹಾಗೂ ಕಗ್ಗಲ್ಲಿನ ದಾರಂದದ ಮುಖ್ಯ ದ್ವಾರಗಳ ಅಳವಡಿಕೆ ,ಆವರಣ ಗೋಡೆ ,ನಾಗಾಲಯಗಳ ಕೆಲಸಗಳು ಪೂರ್ಣಗೊಂಡಿದೆ ಎಂದು ಸುದ್ದಗೋಷ್ಠಿಯಲ್ಲಿ ಸಂಬಂಧಪಟ್ಟವರು ತಿಳಿಸಿದರು.
  ಏ.18 ರಂದು ಅಡ್ಯೆತ ಖಂಡ ನಾಗಾಲಯದಲ್ಲಿ ತಂತ್ರಿವರ್ಯರ ಆಗಮನ, ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ,ಉಗ್ರಾಣ ತುಂಬಿಸುವ ಕಾರ್ಯಕ್ರಮ ಜರಗಲಿರುವುದು.ಏ.19 ರಂದು ಶ್ರೀ ಜಟಾಧಾರಿ ಮೂಲಸ್ಥಾನಕ್ಕೆ ಸಂಬಂಧಿಸಿದ ಅಡ್ಯೆತ ಕಂಡ ನಾಗಾಲಯದಲ್ಲಿ ಗಣಪತಿ ಹವನ,ಪ್ರತಿಷ್ಠಾಂಗ ಕಲಶ ಪೂಜೆ,ಆಶ್ಲೇಷ ಬಲಿ ,ನಾಗಪ್ರತಿಷ್ಠೆ,ಸಂಜೆ ಎಡನೀರು ಮಠಾದೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಗುವುದು.ಬಳಿಕ ಶ್ರೀ ಕ್ಷೇತ್ರ ಮಲ್ಲದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅವರ ಅಧ್ಯಕ್ಷತೆಯಲ್ಲಿ ಧಾಮರ್ಿಕ ಸಭೆ ನಡೆಯಲಿದೆ.ಏ.20 ರಂದು ದೀಪ ಪ್ರಜ್ವಲನ ಭಜನಾ ವೈವಿಧ್ಯ ,ಕುಣಿತದ ಭಜನೆ ,ಸಂಜೆ ನೃತ್ಯ ವೈಭವ  ನಡೆಯಲಿದೆ.ಎ.21 ರಂದು ಬೆಳಿಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆರಂಭ,ಹರಿಕಥಾ ಸಂಕೀರ್ತನೆ, ಶಾಸ್ತ್ರೀಯ ಸಂಗೀತ ,ಸಂಜೆ ದಾಸ ಸಂಕೀರ್ತನೆ ,ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೃತ್ಯ ಮಾಲೆ ,ನೃತ್ಯ ವೈಭವ ನಡೆಯಲಿದೆ.ಏ.22 ರಂದು ಜಟಾಧಾರಿ ಪ್ರತಿಷ್ಠೆಯೊಂದಿಗೆ ದೇವಿಯನ್ನು ಒಲಿಸಿಕೊಳ್ಳಲು ಚಂಡಿಕಾ ಹವನ ನಡೆಯಲಿದೆ.ಅ
ಪರಾಹ್ನ ಸಭಾ ಕಾರ್ಯಕ್ರಮ,ಸಂಜೆ ಮಕ್ಕಳ ಯಕ್ಷಗಾನ  ಬಯಲಾಟ ನಡೆಯಲಿದೆ.ಏ.23 ರಂದು ಜಟಾಧಾರಿ ಮಹಿಮೆ ,ಪ್ರಸಾದ ವಿತರಣೆ ,ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ  ಶಾಸ್ತ್ರೀಯ ಸಂಗೀತ ,ರಾತ್ರಿ ಯಕ್ಷಗಾನ ವೈಭವ ನಡೆಯುವುದು.ಏ.24 ರಂದು ಅರಸಿನ ಹುಡಿ ಪ್ರಸಾದ ಸ್ವೀಕಾರ ಮತ್ತು ಮಹಿಮೆಯ ಮುಕ್ತಾಯದೊಂದಿಗೆ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಸಮಾಪ್ತಿಗೊಳ್ಳಲಿದೆ.
   ಪತ್ರಿಕಾಗೊಷ್ಠಿಯಲ್ಲಿ  ಜೀಣೋದ್ದಾರ ಸಮಿತಿಯ ಗೌರವಾಧ್ಯಕ್ಷ ತಡೆಗಲ್ಲು ವಾಸುದೇವ ಭಟ್,ಕಾರ್ಯದಶರ್ಿ ಕೆ.ವೈ.ಸುಬ್ರಹ್ಮಣ್ಯ ಭಟ್., ಸಜಂಗದ್ದೆ ಶ್ರೀ ಹರಿ ಭಟ್, ಕ್ಷೇತ್ರಾಧಿಕಾರಿ ಬೆಲ್ಲ ಮಾಧವ ಭಟ್, ಪ್ರಚಾರ ಸಮಿತಿಯ ಸಂಚಾಲಕ ಅಜಿತ್ ಸ್ವರ್ಗ,ರಾಜಶ್ರೀ ಟಿ ರೈ ಪೆರ್ಲ,ಜಗದೀಶ ಸೈಪಂಗಲ್ಲು ,ಜಗದೀಶ ಕುತ್ತಾಜೆ ಉಪಸ್ಥಿತರಿದ್ದರು.
           

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries