ವರ್ಣಂ-2018 ವರ್ಣರಂಜಿತ ಶಿಬಿರ
ಬದಿಯಡ್ಕ: ಚೆಂಗಳ ಗ್ರಾಮ ಪಂಚಾಯತು ನೇತೃತ್ವದಲ್ಲಿ ಜಿ.ಜೆ.ಬಿ.ಎಸ್. ಪಿಲಾಂಕಟ್ಟೆ ಶಾಲೆಯಲ್ಲಿ ನಡೆಯುತ್ತಿರುವ ದ್ವಿದಿನ ಕಲಾಸಾಹಿತ್ಯ ಶಿಬಿರವು ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಪ್ರಾರಂಭಗೊಂಡಿತು. ಚೆಂಗಳ ಗ್ರಾಮ ಪಂಚಾಯತಿಗೊಳಪಟ್ಟ 4ರಿಂದ 7ನೇ ತರಗತಿವರೆಗಿನ ಮಕ್ಕಳಿಗಾಗಿ ಆಯೋಜಿಸಿರುವ ಶಿಬಿರವು ವೈಜ್ಞಾನಿಕ ವಿಚಾರಧಾರೆಯನ್ನೂ ವೈವಿಧ್ಯಮಯ ಕಾರ್ಯಕ್ರಮಗಳನ್ನೂ ಹೊಂದಿದೆ. ಮಕ್ಕಳಲ್ಲಿ ಓದುವ ಹವ್ಯಾಸ ಹಾಗೂ ಆ ಮೂಲಕ ಬರವಣಿಗೆಯನ್ನು ಪ್ರೋತ್ಸಾಹಿಸುವ ಉದ್ದೇಶವನ್ನೂ ಶಿಬಿರ ಒಳಗೊಂಡಿದೆ. ಸರಕಾರೀ ವಿದ್ಯಾಭ್ಯಾಸ ಪದ್ಧತಿಯ ಭಾಗವಾಗಿ ಪಂಚಾಯತು ಈ ಶಿಬಿರವನ್ನು ಸಂಘಟಿಸಿರುತ್ತದೆ.
ಚೆಂಗಳ ಗ್ರಾಮ ಪಂಚಾಯತು ಅಧ್ಯಕ್ಷೆ ಶಾಹಿನಾ ಸಲೀಮ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಶಾಂತಕುಮಾರಿ ಅಧ್ಯಕ್ಷತೆ ವಹಿಸಿದರು .ಸ್ಥಾಯಿ ಸಮಿತಿ ಅಧ್ಯಕ್ಷರಾದ ಹಾಜಿರ, ಎ.ಅಹಮ್ಮದ್ ಹಾಜಿ, ಅಬ್ದುಲ್ ಕುಂಞಿ ಕೋಳಾರಿ, ತಾಹಿರ್, ಜಿ.ಜೆ.ಬಿ.ಎಸ್. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮರೀಟಿಯ ಅಬ್ರಹಾಮ್, ಬಿಅರ್ಸಿಯ ಕಾಸಿಂ ಮುಂತಾದವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಿ.ಜೆ.ಬಿ.ಎಸ್. ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್ ಸ್ವಾಗತಿಸಿ, ನಿರ್ಮಲ್ ಕುಮಾರ್ ಕಾಡಗಂ ವಂದಿಸಿದರು.