HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಮಕ್ಕಳಿಗೆ ಉತ್ತಮ ನೈತಿಕ ಶಿಕ್ಷಣ ಲಭಿಸಬೇಕು
    ಬದಿಯಡ್ಕ: ಆಧುನಿಕ ಯುಗದಲ್ಲಿ ಮಕ್ಕಳಿಗೆ ಉತ್ತಮ ನೈತಿಕ ಶಿಕ್ಷಣ ಲಭಿಸಬೇಕಾಗಿದೆ. ಸೂಕ್ತವಾದ ವಿದ್ಯಾಭ್ಯಾಸ ಕ್ಷೇತ್ರವನ್ನು ಅವರಿಗೆ ಕಲ್ಪಿಸಿಕೊಡುವಲ್ಲಿ ಹೆತ್ತವರು ಮುತುವಜರ್ಿ ವಹಿಸಬೇಕಾಗಿದೆ ಎಂದು ಕಾಸರಗೋಡು ಡಿವೈಎಸ್ಪಿ ಸುಕುಮಾರನ್ ಹೇಳಿದರು.
    ಅವರು ಬದಿಯಡ್ಕ ಚಿನ್ಮಯ ವಿದ್ಯಾಲಯಭಿತ್ತೀಚೆಗೆ ನಡೆದ 30ನೇ ವಾಷರ್ಿಕೋತ್ಸವದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
   ವಿದ್ಯಾಥರ್ಿಗಳು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದರ ಬಗ್ಗೆ ರಕ್ಷಕರು ಜಾಗ್ರತೆವಹಿಸಬೇಕಾಗಿದೆ. ಅಪರಿಚಿತರ ಜೊತೆ ಮಕ್ಕಳು ಹೋಗದಂತೆ ನೋಡಿಕೊಳ್ಳಬೇಕು. ಸೃಜನಶೀಲತೆ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ವಿದ್ಯಾಥರ್ಿಗಳನ್ನು ಹೊರತರುವಲ್ಲಿ ಚಿನ್ಮಯ ವಿದ್ಯಾಲಯದ ಶಾಲೆಗಳು ಕಾರ್ಯಪ್ರವೃತ್ತವಾಗಿರುವುದು ಸಂತಸದ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟರು.
  ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನುಡಿಗಳನ್ನಾಡುತ್ತಾ ಶಾಲೆ ಅಭಿವೃದ್ಧಿಯನ್ನು ಹೊಂದುವಲ್ಲಿ ಪೋಷಕರು ಮತ್ತು ಪ್ರದೇಶದವರ ಕಾಳಜಿ ಮತ್ತು ಸಹಕಾರದಿಂದ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ 9 ಹಾಗೂ 10ನೇ ತರಗತಿಯು ಪ್ರಾರಂಭವಾಗಲಿದೆ ಎಂದು ತಿಳಿಸಿದರು.
   ಶಾಲಾ ಪ್ರಾಂಶುಪಾಲ ಪ್ರಶಾಂತ್ ಬೆಳಿಂಜ ವರದಿಯನ್ನು ಮಂಡಿಸಿದರು. ಆಡಳಿತ ಮಂಡಳಿ ಕಾರ್ಯದಶರ್ಿ ಜ್ಞಾನದೇವ ಶೆಣೈ, ಉಪ ಪ್ರಾಂಶುಪಾಲ ಸತೀಶ್ಚಂದ್ರನ್, ಹಿರಿಯರಾದ ಪಿಲಿಂಗಲ್ಲು ಕೃಷ್ಣ ಭಟ್, ಸಂಚಾಲಕಿ ವಸಂತಿ ಉಪಸ್ಥಿತರಿದ್ದರು. ವಿದ್ಯಾಥರ್ಿ ನಾಯಕಿ ಸ್ಮಿತಾ ಸ್ವಾಗತಿಸಿ,  ವಿದ್ಯಾಥರ್ಿ ನಾಯಕ ಶಿವಶರಣ್ ವಂದಿಸಿದರು. ಅಧ್ಯಾಪಿಕೆ ನ್ಯಾನ್ಸಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾಥರ್ಿಗಳಿಂದ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಿತು. ಭರತನಾಟ್ಯ, ಕಥಕ್ಕಳಿ, ತಿರುವಾದಿರ, ಒಡಿಸ್ಸಿ ನೃತ್ಯ, ರಾಜಸ್ಥಾನಿ ನೃತ್ಯ, ಪಂಜಾಬಿ ನೃತ್ಯ ಹಾಗೂ ತುಳು, ದೇಶಭಕ್ತಿ, ರಾಮರಾಜ್ಯ ಮಲಯಾಳ ರೂಪಕಗಳು ಮನಸೂರೆಗೊಂಡವು.
   ವಿದ್ಯಾಲಯದಲ್ಲಿ ವಿದ್ಯಾಥರ್ಿಗಳಿಗೆ ಹೆಚ್ಚಿನ ಇಂಗ್ಲೀಷ್ ತರಬೇತಿಯನ್ನು ನೀಡುತ್ತಿರುವ ಬೆಂಗಳೂರಿನ ಇನ್ಸ್ಸ್ಟಿಟ್ಯೂಟ್ ಆಫ್ ಲ್ಯಾಂಗ್ವೇಜ್ ಮೇನೇಜ್ ಮೆಂಟ್ ಸಂಸ್ಥೆಯು ಸ್ಮರಣಿಕೆಗಳನ್ನು ನೀಡಿದ್ದರು. `ಚಿನ್ಮಯ 2017' ಶಾಲಾ ಮ್ಯಾಗಸಿನ್ ಅನವಾರಣಗೊಳಿಸಲಾಯಿತು. ಶಿಶುಮಂದಿರ ವಿದ್ಯಾಥರ್ಿಗಳಿಗೆ ಘಟಿಕೋತ್ಸವ ಪ್ರಮಾಣಪತ್ರವನ್ನು ನೀಡಲಾಯಿತು.
 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries