HEALTH TIPS

No title

       ಮಲೆತ್ತಡ್ಕ ಶ್ರೀಜಟಾಧಾರಿ ಕ್ಷೇತ್ರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

     ಪೆರ್ಲ: ಆರಾಧನಾಲಯಗಳ ಜೀಣೋದ್ದಾರಗಳು ಸಮಾಜವನ್ನು ಸುಭಿಕ್ಷವಾಗಿರಿಸುವಲ್ಲಿ ಪ್ರಧಾನ ಕಾರ್ಯನಿರ್ವಹಿಸುತ್ತದೆ. ಸಾಮಾಜಿಕ ಒಗ್ಗಟ್ಟು ಮತ್ತು ಸೇವಾ ಮನೋವೃತ್ತಿ ಬದುಕನ್ನು ಸಾಫಲ್ಯಗೊಳಿಸಿ ಸಂತೃಪ್ತಿಗೆ ಕಾರಣವಾಗುತ್ತದೆ ಎಂದು ಮಲೆತ್ತಡ್ಕ ಶ್ರೀ ಜಟಾಧಾರಿ ಮೂಲಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ತಡೆಗಲ್ಲು ರಾಮಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಪಡ್ರೆ ಸಮೀಪದ ಸ್ವರ್ಗ ಮಲೆತ್ತಡ್ಕ ಶ್ರೀ ಜಟಾಧಾರಿ ಮೂಲಸ್ಥಾನದಲ್ಲಿ ಏ.18 ರಿಂದ 24ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸ ಮತ್ತು ಜಟಾಧಾರಿ ಮಹಿಮೆ ಸಮಾರಂಭದ  ಆಮಂತ್ರಣ ಪತ್ರಿಕೆಯನ್ನು ಶ್ರೀಕ್ಷೇತ್ರದಲ್ಲಿ ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
   ಧರ್ಮ ನೆಲೆಗೊಂಡು ಸುಭಿಕ್ಷದ ಸಮಾಜ ನಿಮರ್ಾಣದಲ್ಲಿ ದೈವ ದೇವರುಗಳ ಆರಾಧನೆಗಳನ್ನು ಕಾಲಾಕಾಲಕ್ಕೆ ನಡೆಸುವ ಅಗತ್ಯವಿದ್ದು, ಯುವ ಸಮೂಹ ಈ ನಿಟ್ಟಿನಲ್ಲಿ ಮುಂದೆಬಂದು ಕಾರ್ಯನಿರ್ವಹಿಸಬೇಕೆಂದು ಅವರು ಕರೆನೀಡಿದರು.
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಳು ಸಾಹಿತಿ ರಾಜಶ್ರೀ ಟಿ.ರೈ ಪೆರ್ಲ ಮಾತನಾಡಿ, ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಾತೆಯರ ಪಾತ್ರ ಹಿರಿದಾಗಿದ್ದು, ಧಾಮರ್ಿಕ ಕ್ಷೇತ್ರಗಳಲ್ಲೂ ಆಸಕ್ತರಾಗಿ ಮುಂದೆಬರಬೇಕು. ಯುವ ಸಮೂಹವನ್ನು ಭದ್ರ ನೆಲೆಗಟ್ಟಿನಲ್ಲಿ ಬೆಳೆಸುವ ಜವಾಬ್ದಾರಿಯನ್ನು ನಿರ್ವಹಿಸುವ ಮಾತೆಯರು ಕುಟುಂಬ ಮತ್ತು ಸಮಾಜವನ್ನು ಸಮೃದ್ದವಾಗಿ ಮುನ್ನಡೆಸುವ ಸಾಮಥ್ರ್ಯ ಹೊಂದಿದ್ದಾಳೆ ಎಂದು ತಿಳಿಸಿದರು.
   ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉಕ್ಕಿನಡ್ಕ ಸಹಸ್ರಾಕ್ಷ ವೈದ್ಯ ಶಾಲೆಯ ಡಾ. ಜಯಗೋವಿಂದ ಉಕ್ಕಿನಡ್ಕ ಅವರು ಮಾತನಾಡಿ,  ಆರಾಧನಾಲಯಗಳ ಕೇಂದ್ರವಾಗಿರಿಸಿ ಭಾರತೀಯ ಸನಾತನ ಸಂಸ್ಕೃತಿ ಬೆಳೆದುಬಂದಿದ್ದು, ಅದರ ಸಮಗ್ರ ಪುನರುತ್ಥಾನ ಸಮಾಜದ ಸಮೃದ್ದಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
   ಜಟಾಧಾರಿ ಶ್ರೀಕ್ಷೇತ್ರದ ಕ್ಷೇತ್ರಾಧಿಕಾರಿ ಬೆಲ್ಲ ಮಾಧವ ಭಟ್, ಅಧ್ಯಕ್ಷ ಬಿ.ಕೆ.ರಾಮ, ಕಾರ್ಯದಶರ್ಿ ಶ್ರೀಹರಿ ಭಟ್ ಸಜಂಗದ್ದೆ, ಕೆ.ವೈ.ಸುಬ್ರಹ್ಮಣ್ಯ ಭಟ್ ಕೆದಂಬಾಯಿಮೂಲೆ, ಕೋಶಾಧಿಕಾರಿ ವೆಂಕಟರಮಣ ಭಟ್ ಎಡಮಲೆ, ಆಥರ್ಿಕ ಸಮಿತಿ ಸಂಚಾಲಕ ಶ್ರೀಕಾಂತ್ ಭಟ್ ಬರೆಕೆರೆ, ಗೀತಾ ಕುಮಾರಿ ಬಿ.ಕೆದಂಬಾಯಿಮೂಲೆ, ಪ್ರಚಾರ ಸಮಿತಿಯ ಅಜಿತ್ ಸ್ವರ್ಗ ಮೊದಲಾದವರು ಉಪಸ್ಥಿತರಿದ್ದರು.
     ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕ್ಷೇತ್ರದ ಕಿರಿಯ ತಂತ್ರಿಗಳ ಆಗಮನ, ಕುಂಭಲಗ್ನ ಸುಮುಹೂರ್ತದಲ್ಲಿ 'ಅರ್ಚಕರ ನಿವಾಸಕ್ಕೆ' ಶಿಲಾನ್ಯಾಸ, ಶ್ರೀದೈವಕ್ಕೆ ಸಿಯಾಳ ಸಮರ್ಪಣೆ, ಪ್ರಾರ್ಥನೆ ನಡೆಯಿತು. ಬಳಿಕ ಪ್ರಸಾದ ಭೋಜನ ನಡೆಯಿತು.
 
           

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries