HEALTH TIPS

No title

            ಹೊಸ್ತಿನ ಕೋಲ ಮಹೋತ್ಸವ
  ಬದಿಯಡ್ಕ: ನೀಚರ್ಾಲು ಸಮೀಪದ ಮಾನ್ಯ ಶ್ರೀಮೂವರು ದೈವಗಳ ಹೊಸ್ತಿನ ಕೋಲ ಮಹೋತ್ಸವ ಇತ್ತೀಚೆಗೆ ಮಾನ್ಯ ಬಯಲಿನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
   ಕಾರ್ಯಕ್ರಮದ ಅಂಗವಾಗಿ ಜ.29 ರಂದು ಬೆಳಿಗ್ಗೆ ಮಾನ್ಯ ಪಡುಮನೆ ಭಂಡಾರದ ಮನೆಯಲ್ಲಿ ಗಣಪತಿಹವನ, ಬಳಿಕ ಮೂವರು ದೈವಗಳ ಭಂಡಾರ ಹೊರಟು ಶ್ರೀಪ್ಲಾಡಗತ್ತ ಚಾಮುಂಡಿ ದೈವಸ್ಥಾನಕ್ಕೆ ಆಗಮನ, ರಾತ್ರಿ ಶ್ರೀದೈವಗಳ ತೊಡಂಙಲ್, ಮೋಂದಿ ಕೋಲ ನಡೆಯಿತು. ಜ.30 ರಂದು ಬೆಳಿಗ್ಗೆ 7 ಕ್ಕೆ ಶ್ರೀಭಂಡಾರಿ ದೈವ, 9.30ಕ್ಕೆ ಶ್ರೀಪ್ಲಾಡಗತ್ತ ಚಾಮುಂಡಿ ದೈವದ ಆರಂಭ, ಶ್ರೀದೈವದ ಬಾರಣೆ, ಅರಸಿನ ಹುಡಿ ಪ್ರಸಾದ ವಿತರಣೆ, ಶ್ರೀದೈವಗಳ ಭಂಡಾರ ನಿರ್ಗಮನ, ರಾತ್ರಿ 7ಕ್ಕೆ ಶ್ರೀವಿಷ್ಣುಮೂತರ್ಿ ದೈವಸ್ಥಾನಕ್ಕೆ ಭಂಡಾರ ಆಗಮನ, ಶ್ರೀಪಡು ಧೂಮಾವತಿ ದೈವಸ್ಥಾನಕ್ಕೆ ಭಂಡಾರ ಆಗಮನ ಹಾಗೂ ತೊಡಂಙಲ್, ವಿಷ್ಣುಮೂತರ್ಿ ದೈವದ ಕುಳಿಚ್ಚಾಟ, ಶ್ರೀಪಡು ಧೂಮಾವತಿ ದೈವದ ಮೋಂದಿ ನಡೆಯಿತು.
  ಜ.31 ರಂದು ಬೆಳಿಗ್ಗೆ 7 ರಿಂದ ಶ್ರೀಮಹಾವಿಷ್ಣುಮೂತರ್ಿ ದೈವದ ಆಗಮನ, ಶ್ರೀವಿಷ್ಣುಮೂತರ್ಿ ದೈವದ ಪೂಡುಂಗಲ್ಲು ಸಂದರ್ಶನ, ಮಾನ್ಯ ಶ್ರೀವೆಂಕಟರಮಣ ದೇವಸ್ಥಾನಕ್ಕೆ ಸಂದರ್ಶನ, ದೇವಾಲಯದ ಮಹಾಪೂಜೆ, ದೈವದ ಭಾರಣೆ, ಅರಸಿನ ಹುಡಿ ಪ್ರಸಾದ ವಿತರಣೆ ನಡೆಯಿತು. ಬಳಿಕ ಶ್ರೀವಿಷ್ಣುಮೂತರ್ಿ ದೈವದ ಕೆಂಡಸೇವೆ ಮಹೋತ್ಸವಕ್ಕೆ ಕೊಳ್ಳಿಕಡಿಯುವುದು, ಅನ್ನದಾನಗಳು ನಡೆಯಿತು. ಅಪರಾಹ್ನ ಶ್ರೀದೈವದ ಭಂಡಾರ ನಿರ್ಗಮನ, ಸಂಜೆ ಶ್ರೀಪಡು ಧೂಮಾವತಿ ದೈವದ ಆರಂಭ, ಬಾರಣೆ, ಅರಸಿನ ಹುಡಿ ಪ್ರಸಾದ ವಿತರಣೆ, ದೈವದ ಭಂಡಾರ ನಿರ್ಗಮನದ ಬಳಿಕ ಮಾನ್ಯ ಪಡುಮನೆ ಭಂಡಾರದ ಮನೆಯಲ್ಲಿ ಶ್ರೀಕಡವು ಧೂಮಾವತಿ, ಕೊರಗ, ಮಂತ್ರವಾದಿ ಗುಳಿಗ ಮೊದಲಾದ ಒಂದು ಕಡಿಮೆ ನಲುವತ್ತು ದೈವಗಳ ಕೋಲಗಳೊಂದಿಗೆ ಮಹೋತ್ಸವ ಸಂಪನ್ನಗೊಂಡಿತು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries