ಕೊನೆಗೂ ಇಹಲೋಕ ತ್ಯಜಿಸಿದ ರಕ್ತಸಾಕ್ಷಿಗಳ ಸಹೋದರ ಪತ್ನಿ ಪೂವಕ್ಕ !
ಉಪ್ಪಳ: ರೈತಪರ ಹೋರಾಟಗಳ ಮೂಲಕ ಗುರುತಿಸಿಕೊಂಡಿದ್ದ ಗಡಿ ಗ್ರಾಮ ಪೈವಳಿಕೆ ಇಂದು ತನ್ನ ಮೊದಲಿನ ಹುರುಪಲ್ಲಿ ಇಲ್ಲದೆ ಚಿಗುರುವುದನ್ನು ಮರೆತು ನಲುಗುವ ಬಳ್ಳಿಯಂತೆ ಬಾಡುತ್ತಿದೆ. ಪೈವಳಿಕೆ ರಕ್ತಸಾಕ್ಷಿ ಸಹೋದರರಲ್ಲಿ ಮಡಿದ ಓರ್ವರ ಪತ್ನಿ ಅನಾಥೆ ಪೂವಕ್ಕನವರು ಕೊನೆಗೂ ಜ.17 ರಂದು ವೃದ್ಧಾಪ್ಯದಿಂದ ಪರವನಡ್ಕ ಸರಕಾರಿ ವೃದ್ಧ ಮಂದಿರದಲ್ಲಿ ಇಹಲೋಕ ತ್ಯಜಿಸಿದರು.ಕಳೆದ 1958ರಲ್ಲಿ ರೈತಪರ ಹೋರಾಟದಲ್ಲಿ ಮಡಿದ ಕಳಾಯಿ ರೈತ ಕುಟುಂಬದ ಮೂವರು ಸಹೋದರರೋರ್ವರ ದ್ವಿತೀಯ ಪತ್ನಿ ಎನಿಸಿಕೊಳ್ಳುತ್ತಿರುವ ಪೂವಕ್ಕ ಪತಿಯ ಮರಣದ ಬಳಿಕ ಅನಾಥವಾಗಿದ್ದರು.ಮಕ್ಕಳಿಲ್ಲದ ಇವರಿಗೆ ಉಪ್ಪಳದ ಕಾವೇರಿ ಅಮ್ಮ ಎಂಬ ಸ್ವಜಾತಿ ಮಹಿಳೆಯೋರ್ವರು ಹಲವಾರು ವರ್ಷಗಳ ಕಾಲ ಆಸರೆ ನೀಡಿದ್ದರು. ಪಕ್ಕದ ಮನೆಯ ಕಂದಾಯ ಅಧಿಕಾರಿ ಗುರುಪಾದ್ರವರು ಮತ್ತು ಬ್ಯಾಂಕ್ ಪ್ರಬಂಧಕ ಚಂದ್ರಕಾತ್ ಮತ್ತು ಮನೆಯವರು ಇವರಿಗೆ ಸಾಂತ್ವನ ಸಹಕಾರ ನೀಡುತ್ತಿದ್ದರು.ಹಿರಿಯ ಸಮಾಜಸೇವಕ ಬೇರಿಕೆ ರಾಮಯ್ಯ ನಾಕ್ರವರು ಇವರಿಗೆ ಸರಕಾರದಿಂದ ವೃದ್ಧಾಪ್ಯ ಪಿಂಚಣಿ ದೊರಕುವಂತೆ ಮಾಡಿದ್ದರು. ಈ ಮಧ್ಯೆ ಪೂವಕ್ಕನವರ ವೃದ್ಯಾಪ್ಯ ಪಿಂಚಣಿ ಮೊಟಕುಗೊಂಡಾಗ 1995 ರಲ್ಲಿ ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷರಾಗಿದ್ದ ಅಚ್ಯುತ ಚೇವಾರ್ರವರು ಅಧಿಕಾರಿಗಳ ಗಮನ ಸೆಳೆದು ಇದನ್ನು ಮರಳಿ ದೊರೆಯುವಂತೆ ವ್ಯವಸ್ಥೆಗೊಳಿಸಿದ್ದರು.2005 ರಲ್ಲಿ ಕಾವೇರಿ ಅಮ್ಮನವರು ತನ್ನ ಮನೆ ಸ್ಥಳವನ್ನು ಮಾರಾಟ ಮಾಡಿ ಬೇರೆಡೆಗೆ ತೆರಳುವ ಕಾರಣ ಪೂವಕ್ಕನವರಿಗೆ ಎಲ್ಲಿಯಾದರೂ ಆಶ್ರಯ ನೀಡಬೇಕೆಂಬುದಾಗಿ ಚೇವಾರ್ರವರಲ್ಲಿ ವಿನಂತಿಸಿದರು.ಇದರಂತೆ ಹಿಂದೂ ಸಂಘಟನೆಯೆ ನಾಯಕ ಬಳ್ಳಂಬೆಟ್ಟು ಸಂಕಪ್ಪ ಭಂಡಾರಿಯವರು ಮಂಗಳೂರಿನ ಪ್ರತಿಷ್ಠಿತ ಮನೆಯಲ್ಲಿ ಆಶ್ರಯಕ್ಕೆ ಪೂವಕ್ಕರವರನ್ನು ಕರೆದೊಯ್ದಾಗ ಪೂವಕ್ಕನವರು ಆ ಬಂಗಲೆ ಮನೆಯನ್ನು ನಿರಾಕರಿಸಿ ಭಂಡಾರಿಯವರೊಂದಿಗೆ ಮರಳಿದರು.ತಾನು ಪರರ ಆಶ್ರಯಕ್ಕೆ ಬಲಿ ಬೀಳಲಾರೆನೆಂಬ ಇವರ ಆಶಯದಯಂತೆ ಇವರನ್ನು 2005 ಆಗಸ್ಟ್ 30ರಂದು ಚೆಮ್ನಾಡು ಬಳಿಯ ಪರವನಡ್ಕ ಸರಕಾರಿ ವೃದ್ಧ ಮಂದಿರದಲ್ಲಿ ಅಚ್ಯುತ ಚೇವಾರ್ರವರು ದಾಖಲಿಸಿದರು. ಅಂದಿನಿಂದ ಜ.17 ರ ತನಕ 12 ವರ್ಷಗಳ ಕಾಲ ಪೂವಕ್ಕ ಅನಾಥಾಶ್ರಮದಲ್ಲಿದ್ದರೂ ಚೇವಾರ್ ರವರು ಅಲ್ಲಿಗೆ ಆಗಾಗ ತೆರಳಿ ಇವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು.ಸರಕಾರದ ವೃದ್ಧಾಪ್ಯ ಪಿಂಚಣಿ ಕೈಸೇರುವ ವ್ಯವಸ್ಥೆ ಮಾಡುತ್ತಿದ್ದರು.ಮನೆಗೆ ಕರೆತಂದು ಕೆಲಕಾಲ ಆಶ್ರಯ ನೀಡುತ್ತಿದ್ದರು. ಅನಾಥೆ ಎಂಬ ಮಮಕಾರ ತೋರುತ್ತಿದ್ದರು.90 ವರ್ಷಸಂದ ಹಿರಿಯ ನಾಗರಿಕೆ ಎಂಬುದಾಗಿ ಇವರನ್ನು ವೃದ್ಧ ಮಂದಿರದ ಸಮಾರಂಭದಲ್ಲಿ ಸಮ್ಮಾನಿಸಲಾಗಿತ್ತು.
ಬಂಟ ಮನೆತನದವರಾಗಿದ್ದು ಒಡಿಯೂರು ಸ್ವಾಮೀಜಿವರ ಪೂವರ್ಾಶ್ರಮದ ಬಂಧುವೆನಿಕೊಳ್ಳುತ್ತಿದ್ದ ಪೂವಕ್ಕನವರು ರಕ್ತಸಾಕ್ಷಿಗಳ ಸಹೋದರರೋರ್ವರ ದ್ವಿತೀಯ ಪತ್ನಿಯಾಗಿದ್ದುರಿಂದ ಪೂವಕ್ಕವವರಿಗೆ ಪತಿಯ ಮನೆಯಿಂದಾಗಲಿ ತನ್ನ ಸ್ವಂತ ತವರಿನಿಂದಾಗಲಿ ಬಂಧುಗಳಿಂದ ಯಾವುದೇ ಪರಿಗಣನೆ ದೊರೆಯದೆ ವಿಧವೆಯಾಗಿ ಅವಗಣನೆಗೆ ಒಳಗಾಗುವಂತಾಯಿತು. ಪತಿ ಗುಂಡೇಟಿನಿಂದ ಮರಣದ ಬಳಿಕ ಜೀವನದ ಕೊನೆತನಕ ನಿಧನದವರೆಗೆ ಬಂಧುಬಳಗದಿಂದ ದೂರವಾಗಿಯೇ ಉಳಿಯುವಂತಾಯಿತು.ವೃದ್ಧ ಮಂದಿರದಲ್ಲೇ ಜೀವನ ಕಳೆಯುವಂತಾಯಿತು.
ತನ್ನ ಮರಣದ ಬಳಿಕ ತನ್ನನ್ನು ಅನಾಥ ಶವವಾಗಿ ಕಾಣದೆ ಸಂಪ್ರದಾಯದಂತೆ ಸ್ಮಶಾನದ ಕಾಷ್ಠದಲ್ಲಿ ಉರಿಸಬೇಕು.ಧಾಮರ್ಿಕ ವಿಧಿವಿಧಾನಗಳೊಂದಿಗೆ ಉತ್ತರ ಕ್ರಿಯೆ ಮಾಡಬೇಕೆಂಬ ಪೂವಕ್ಕನವರ ಬೇಡಿಕೆಯನ್ನು ಪರಿಗಣಿಸಿದ ಅಚ್ಯುತ ಚೇವಾರ್ರವರು ನಿಧನದಂದು ಇವರ ಶವವನ್ನು ಅಂಬ್ಯೂಲೆನ್ಸ್ ಮೂಲಕ ತಂದು ಕಾಸರಗೋಡು ನುಳ್ಳಿಪ್ಪಾಡಿ ಚೆನ್ನಿಕ್ಕರೆಯ ರುದ್ರಭೂಮಿಯಲ್ಲಿ ಮಿತ್ರರ ಸಹಕಾರದೊಂದಿಗೆ ದಹಿಸಿದರು.ಬಳಿಕ ಜ.27 ರಂದು ಉಪ್ಪಳ ಐಲ ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದಲ್ಲಿ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ,ಸೇವಾ ಸಮಿತಿ ಪ್ರಧಾನ ಕಾರ್ಯದಶರ್ಿ ಪ್ರೇಂ ಕುಮಾರ್ ಸಹಕಾರದೊಂದಿಗೆ ನಿವೃತ್ತ ಕಂದಾಯ ಅಧಿಕಾರಿ ಗುರುಪಾದ್,ಕಾವೇರಿ ಅಮ್ಮ ಮತ್ತು ಕಳ್ಳಿಗೆಬೀಡು ಸಚ್ಚಿದಾನಂದ ರೈ,ಹಾಗೂ ಚೇವಾರ್ರವರ ಮನೆಯವರ ಉಪಸ್ಥಿತಿಯಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ಉತ್ತರಕ್ರಿಯೆಯನ್ನು ವಿದ್ಯುಕ್ತವಾಗಿ ನೆರವೇರಿಸಲಾಯಿತು.
ಜೀವನದಲ್ಲಿ ಅಪಾರ ಕನಸನ್ನು ಹೊಂದಿದ್ದ ಪೂವಕ್ಕನವರಿಗೆ ವಿಧವಾಯೋಗದ ಬಳಿಕ ಅಬಲೆಯಾಗಿ ಸುಮಾರು 50 ವರ್ಷಗಳಕಾಲ ಒಂಟಿ ಜೀವನ ನಡೆಸಿದ ಇವರಿಗೆ ಆಸ್ತಿ ಪಾಸ್ತಿಗಳಿದ್ದರೆ ಈ ಗತಿ ಬರುತ್ತಿರಲಿಲ್ಲವೇನೋ? ಜೊತೆಗೆ ರೈತ ಹೋರಾಟಗಾರರ ಪತ್ನಿಯಾಗಿದ್ದರೂ ಯಾರಿಂದಲೂ ಯಾವ ಪರಿಗಣನೆಯೂ ಕೊನೆಯ ವರೆಗೂ ಲಭಿಸದಿರುವುದು ಇಂದಿನ ರಜಕೀಯ ಮುಖಂಡರ, ಸಂಘಟನೆಗಳ ಅಂತರಂಗದ ಭಾವಗಳ ದ್ಯೋತಕವಾಗಿ ನಮ್ಮನ್ನು ದಿಗಿಲುಗೊಳಿಸುತ್ತದೆ.