ಒಮಾನ್ನಲ್ಲಿ ಮಿನಿ ಇಂಡಿಯಾ ಕಾಣಿಸುತ್ತಿದೆ; ಭಾರತೀಯ ಸಮುದಾಯ ಉದ್ದೇಶಿಸಿ ಮೋದಿ ಭಾಷಣ
ಸಾಂಪ್ರದಾಯಿಕ ವ್ಯವಸ್ಥೆ ಮುರಿದು ಮೊತ್ತಮೊದಲ ಸಾರ್ವಜನಿಕ ಸಭೆಗೆ ಮೋದಿ ಸಾಕ್ಷಿ
ಮಸ್ಕಟ್: ದೇಶವನ್ನು ಬಿಟ್ಟು ಬಂದು ಇಲ್ಲಿ ದುಡಿಯುತ್ತಿರುವ ನಾಗರಿಕರು ಈಗ ಭಾರತಕ್ಕೆ ಭೇಟಿ ನೀಡಿದರೆ ನಿಮಗೆ ಯುವ ಭಾರತ, ನವ ಭಾರತ ಕಂಡುಬರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮಸ್ಕಟ್ನಲ್ಲಿ ಸುಲ್ತಾನ್ ಖಬೂಸ್ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಿದರು. ಮೋದಿ ಭಾಷಣಕ್ಕಾಗಿ ಭವ್ಯ ವೇದಿಕೆಯನ್ನೂ ನಿಮರ್ಿಸಲಾಗಿತ್ತು.
ಒಮಾನ್ ಮತ್ತು ಭಾರತ ನಡುವಿನ ಸಂಬಂಧಕ್ಕೆ ಲಕ್ಷಾಂತರ ಭಾರತೀಯರು ಸೇತುವೆಯಾಗಿದ್ದೀರಿ. ಉಭಯ ದೇಶಗಳ ನಡುವಿನ ಸಂಬಂಧ ಶತಮಾನಗಳಷ್ಟು ಹಳೆಯದ್ದಾಗಿದೆ. ಗುಜರಾತ್ನಿಂದ ಮೊದಲ ಬಾರಿಗೆ ಒಮಾನ್ಗೆ ಹಡಗು ಬಂದಿತ್ತು ಎಂದರು.
ಈಗ ದೇಶದಲ್ಲಿ ಸುಲಲಿತ ಆಡಳಿತ ವ್ಯವಸ್ಥೆ ಬಂದಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ನಮ್ಮ ಶ್ರೇಣಿ ಕೂಡ ಹೆಚ್ಚಾಗಿದೆ. ಸುಲಲಿತ ಆಡಳಿತ ವಿಷಯದಲ್ಲಿ ವಿಶ್ವದಲ್ಲಿಯೇ ಭಾರತ 50ಕ್ಕೂ ಹೆಚ್ಚು ಸ್ಥಾನ ಮೇಲೇರಿದೆ ಎಂದರು.
ಈ ಹಿಂದಿನಂತೆಯೇ ದೇಶದಲ್ಲಿ ಸರಕಾರವಿದೆ, ಅಧಿಕಾರಿಗಳಿದ್ದರೆ, ಆದರೆ ಈಗ ಆಡಳಿತ ನೀಡುವ ಮನಸ್ಥಿತಿ ಬದಲಾಗಿದೆ. ರೈತರು, ಮಹಿಳೆಯರು, ಹಿಂದುಳಿದವರಿಗೆ ಯೋಜನೆಗಳನ್ನು ಮನೆ ಮನೆಗೆ ನೀಡಲಾಗುತ್ತಿದೆ ಎಂದರು.
ದೇಶದಲ್ಲಿ ಕೆಲವು ಯೋಜನೆಗಳನ್ನು ಕೇವಲ 90 ಪೈಸೆಗೆ ಒದಗಿಸಲಾಗುತ್ತಿದೆ. ಚಹಾವಾಲಾ ಆಗಿರುವ ನನಗೆ ಗೊತ್ತಿದೆ. ಈ ಮೊತ್ತದಲ್ಲಿ ಚಹಾ ಕೂಡ ಬರುವುದಿಲ್ಲ. ಆದರೆ ಇದೇ ಮೊತ್ತಕ್ಕೆ ನಾವು ಯೋಜನೆ ಪೂರೈಸುತ್ತಿದ್ದೇವೆ ಎಂದು ಮೋದಿ ಹೇಳಿದಾಗ ಇಡೀ ಕ್ರೀಡಾಂಗಣದಲ್ಲಿ ಕರತಾಡನದ ಕಡಲು ಸೃಷ್ಟಿಸಿತು.
ದಾಖಲೆ ಮುರಿದ ಸಂಪ್ರದಾಯ:
ಅರಬ್ ರಾಷ್ಟ್ರಗಳ ಪೈಕಿ ಒಮಾನ್ ಇದೀಗಲೂ ಸಾಂಪ್ರದಾಯಿಕ ಚೌಕಟ್ಟಿನಡಿಯಲ್ಲಿ ಶಾಂತಿಯುತವಾಗಿ ಇತರೆಡೆಗಳಿಗಿಂತ ಭಿನ್ನವಾದ ಪುಟ್ಟ ರಾಷ್ಟ್ರ. ಇಲ್ಲಿ ಈವರೆಗೆ ಸಾರ್ವಜನಿಕವಾಗಿ ಅಂತರಾಷ್ಟ್ರೀಯ ನಾಯಕರು ಯಾರೂ ಭಾಷಣ, ಸಮಾರಂಭ ಏರ್ಪಡಿಸಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ನರೇಂದ್ರಮೋದಿಯ ವಿಶೇಷ ಭೇಟಿಯ ಕಾರಣ ತನ್ನೆಲ್ಲಾ ಸಂಪ್ರದಾಯ ಬದಿಗೊತ್ತಿ ಸಾರ್ವಜನಿಕವಾಗಿ ರ್ಯಾಲಿ ಸಂಘಟಿಸಿದ್ದು ಜಗತ್ತನ್ನೇ ನಿಬ್ಬೆರಗುಗೊಳಿಸಿದೆ