HEALTH TIPS

No title

                     ಸಂಸ್ಕಾರದ ಜೀವನ ಮನುಷ್ಯರನ್ನಾಗಿಸುತ್ತದೆ-ಕೆ.ಶಿವಕುಮಾರ್
  ಬದಿಯಡ್ಕ: ಒಂದೊಂದು ಹೆಜ್ಜೆಯನ್ನು ಮುಂದಿಟ್ಟಾಗ ನಡೆಸುವ ಸಿಂಹಾವಲೋಕನವೇ ವಾಷರ್ಿಕೋತ್ಸವ. ತನ್ನ ಹಾಗೂ ಸಂಸ್ಥೆಯ ಪ್ರಗತಿಯನ್ನು ಸಮಾಜಕ್ಕೆ ತೆರೆದಿಡಲು ಇದೊಂದು ಮಾಧ್ಯಮವಾಗಿದೆ. ದೀಪ ಬೆಳಗಿಸುವಿಕೆ, ಪ್ರಾರ್ಥನಾ ಶ್ಲೋಕದ ಪಠಣದಿಂದ ಅಲ್ಲಿ ಭಾರತೀಯತೆ ಅಲ್ಲಿ ಭಾರತೀಯತೆಯನ್ನು ಕಾಣಬಹುದು ಎಂದು ಪೆರ್ಲ ನಾಲಂದ ಕೋಲೇಜ್ ಓಫ್ ಆಟ್ಸರ್್ - ಸೈನ್ಸ್ನ ಆಡಳಿತಾಧಿಕಾರಿ ನಿವೃತ್ತ ಅಧ್ಯಾಪಕ ಕೆ.ಶಿವಕುಮಾರ ಹೇಳಿದರು.
ಅವರು ಶನಿವಾರ ಪೆರಡಾಲ ನವಜೀವನ ವಿದ್ಯಾಲಯದ ವಾಷರ್ಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
   ಯಾವುದೇ ಭಾಷೆಯನ್ನು ಕಲಿಯಬಹುದು ಆದರೆ ಹೆತ್ತ ತಾಯಿಯನ್ನು ಹೇಗೆ ಮರೆಯಲು ಸಾಧ್ಯವಿಲ್ಲವೋ ಅದೇ ರೀತಿ ಮಾತೃಭಾಷೆಯನ್ನು ಮರೆಯಬಾರದು. ವಿದ್ಯಾಭ್ಯಾಸದಿಂದ ನಮ್ಮ ಆತ್ಮಕ್ಕೆ ಸಂಸ್ಕಾರ ಲಭಿಸಬೇಕು. ಹುಟ್ಟಿನಲ್ಲಿ ಯಾರೂ ಮನುಷ್ಯರಾಗಿ ಹುಟ್ಟುವುದಿಲ್ಲ. ಸಂಸ್ಕಾರಯುತ ಜೀವನವು ನಮ್ಮನ್ನು ಮನುಷ್ಯನನ್ನಾಗಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂತರ್ಿ ಮಾತನಾಡುತ್ತಾ ವಿದ್ಯಾಥರ್ಿಗಳಿಗೆ ಪ್ರತಿಭೆಗಳನ್ನು ಪ್ರದಶರ್ಿಸಲು ವೇದಿಕೆ ನಿಮರ್ಾಣವಾದರೆ ಮಾತ್ರ ಕಲಿತ ವಿದ್ಯೆ ಸಾರ್ಥಕವಾಗಬಲ್ಲದು. ಕಲಿತಿರುವ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರದ ಉತ್ತಮ ಪ್ರಜೆಯಾಗಿ ತನ್ನ ಕರ್ತವ್ಯಕ್ಕೆ ಅಣಿಯಾಗಬೇಕು. ಮನುಷ್ಯ ಮನುಷ್ಯನನ್ನು ತಿಳಿದುಕೊಂಡು ಸಹೋದರತೆಯಿಂದ ಬಾಳಬೇಕು. ಜೀವನದಲ್ಲಿ ಶಿಸ್ತು, ಸ್ನೇಹವನ್ನು ಅಳವಡಿಸಿಕೊಂಡು ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಕರೆಯಿತ್ತರು. ಪೆರಡಾಲ ಎಜ್ಯುಕೇಶನ್ ಸೊಸೈಟಿಯ ಕೋಶಾಧಿಕಾರಿ ಪಿ.ವೆಂಕಟ್ರಮಣ ಭಟ್, ನವಜೀವನ ಹೈಯರ್ ಸೆಕೆಂಡರಿಯ ಪ್ರಾಂಶುಪಾಲ ಪಿ. ರಾಮಚಂದ್ರನ್, ಮುಖ್ಯೋಪಾಧ್ಯಾಯ ಕೆ.ಶ್ಯಾಮ ಭಟ್, ಕೃಷ್ಣಪ್ರಸಾದ್ ರೈ ಪೆರಡಾಲ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಭಾಸ್ಕರ ಪಾಟಾಳಿ, ಗಣೇಶ್ ಸಿ.ಎಚ್. ಮಾತನಾಡಿದರು. ಮುಖ್ಯೋಪಾಧ್ಯಾಯ ಸಿ.ಎಚ್. ಗೋಪಾಲ ಭಟ್ ಚುಕ್ಕಿನಡ್ಕ ವರದಿಯನ್ನು ಮಂಡಿಸಿದರು. ಶಾಲಾ ಆಡಳಿತಾಧಿಕಾರಿ ವೆಂಕಟರಾಜ ಕೆ. ಧನ್ಯವಾದವನ್ನಿತ್ತರು. ಅಧ್ಯಾಪಿಕೆ ಸರೋಜ ಎನ್. ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries