HEALTH TIPS

No title

              ಪರಕ್ಕಿಲ ಬ್ರಹ್ಮಕಲಶ ಸಂಪನ್ನ
   ಬಿಂಬದ ಜೊತೆಗೆ ಅಂತರಂಗದ ಪ್ರತಿಬಿಂಬಕ್ಕೂ ಕಲಶ ಎರೆಯಲ್ಪಟ್ಟು ಬ್ರಹ್ಮಕಲಶ ಸಾಕಾರ-ಕೊಂಡೆವೂರು ಶ್ರೀ 
    ಮಧೂರು: ಪ್ರಪಂಚದ ಸರ್ವರ ಒಳಿತಿಗೆ ಧನಾತ್ಮಕ ಶಕ್ತಿ ಸಂಚಯನವಾಗಬೇಕು. ಭಗವಂತನ ನಾಮ ಸ್ಮರಣೆಗಳು ನಿರಂತರವಾಗಿರುವಲ್ಲಿ ಧನಾತ್ಮಕತೆ ವೃದ್ದಿಗೊಳ್ಳುತ್ತದೆ. ತನ್ಮೂಲಕ ಸಮಾಜ, ರಾಷ್ಟ್ರ ಬಲಿಷ್ಠಗೊಳ್ಳುವುದೆಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಆಶೀರ್ವಚನ ನೀಡಿದರು.
   ಮಧೂರು ಸಮೀಪದ ಪರಕ್ಕಿಲ ಶ್ರೀಮಹಾದೇವ ಶಾಸ್ತಾ ವಿನಾಯಕ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ಸಂಜೆ ನಡೆದ ಧಾಮರ್ಿಕ ಸಭೆ ಮತ್ತು ಸಮಾರೋಪ ಸಮಾರಂಭದಲ್ಲಿ ದಿವ್ಯ ಉಪಸ್ಥಿತರಿದ್ದು, ಅನುಗ್ರಹ ಭಾಷಣಗೈದು ಅವರು ಮಾತನಾಡಿದರು.
   ಭಾರತದ ಸಾಂಸ್ಕೃತಿಕ ಬೇರುಗಳು ಗಟ್ಟಿಯಾಗುವಲ್ಲಿ ಯುವ ಸಮೂಹವನ್ನು ದೃಢಗೊಳಿಸಬೇಕಾದ ಅಗತ್ಯ ಹೆಚ್ಚಿದ್ದು, ಈ ನಿಟ್ಟಿನಲ್ಲಿ ತಾಯಂದಿರ ಪಾತ್ರ ಮಹತ್ತರವೆಂದು ತಿಳಿಸಿದ ಅವರು, ಸಂಸ್ಕೃತಿ ವಿಕೃತಿಗೆ ತಿರುಗದಂತೆ ಜಾಗರೂಕತೆವಹಿಸಬೇಕು ಎಂದರು. ಪ್ರತಿಯೊಬ್ಬನೊಳಗೂ ಸಮ್ಮಿಳಿತಗೊಂಡಿರುವ ಭಗವಂತ ಅಂತರಾಳದ ಮೂಲಕ ಪ್ರಚೋಧನೆ ನೀಡುವ ಧನಾತ್ಮಕ ಬೋಧನೆಗಳಿಗೆ ಗಮನ ನೀಡಿ ಮುಂದೆ ನಡೆದಲ್ಲಿ ಯಶಸ್ಸು ಸಾಧ್ಯ. ಋಣಾತ್ಮಕ ಚಿಂತನೆಗಳು ಅನೀತಿ, ಅನ್ಯಾಯಗಳಿಗೆ ಒಲವು ನೀಡಿ ಅಧಃಪತನಕ್ಕೆ ತಳ್ಳುತ್ತದೆ. ದೇವಾಲಯದ ಬಿಂಬದ ಜೊತೆಗೆ ಅಂತರಂಗದ ಪ್ರತಿಬಿಂಬಕ್ಕೂ ಸನ್ಮಂಗಲದ ಕಲಶ ಎರೆಯಲ್ಪಟ್ಟು ಜೀವನ ಪಾವನವಾಗುವುದು ಎಂದು ಅವರು ಹೇಳಿದರು.
   ಸಮಾರಂಭದಲ್ಲಿ ಉಪಸ್ಥಿತರಿದ್ದ ಆಧ್ಯಾತ್ಮಿಕ ಚಿಂತಕ ಪ್ರಕಾಶ್ ಮಲ್ಪೆ ಧಾಮರ್ಿಕ ಉಪನ್ಯಾಸ ನೀಡಿ ಮಾತನಾಡಿ, ಇಂದು ಎಲ್ಲೆಡೆ ಭಗವಂತ, ವೇದ, ಉಪನಿಷತ್ತು, ಪುರಾಣಗಳ ಬಗ್ಗೆ  ತಪ್ಪಾದ ವ್ಯಾಖ್ಯಾನಗಳನ್ನು ತುರುಕುವ ಯತ್ನಗಳು ನಡೆಯುತ್ತಿದ್ದು, ಭಗವಂತನನ್ನು ಒಳಗಣ್ಣಿನಿಂದ ಗ್ರಹಿಸುವವನಿಗೆ ಮಾತ್ರ ಸತ್ಯದ ಜ್ಞಾನೋದಯವಾಗಲು ಸಾಧ್ಯ ಎಂದು ತಿಳಿಸಿದರು. ನೂರಾರು ಮಾರ್ಗದರ್ಶಕರ ಮೂಲಕ ಭರತ ಖಂಡವು ಭಗವಂತನ ಅಸ್ತಿತ್ವದ ಬಗ್ಗೆ ಸ್ಪಷ್ಟ ಮಾರ್ಗದರ್ಶನ ನೀಡಿದ್ದು, ನಿಶ್ಕಲ್ಮಷ ಭಕ್ತಿ, ಪ್ರೀತಿಗೆ ಮಾತ್ರ ಭಗವಂತನ ಅನುಗ್ರಹ ಲಭ್ಯವಾಗುತ್ತದೆ. ತೊರಿಕೆಯ, ಆಡಂಬರದ ವ್ಯವಸ್ಥೆಗೆ ಭಗವಂತ ಒಲಿಯಲಾರ ಎಂಬ ಸತ್ಯ ಅರಿವಿನಲ್ಲಿರಬೇಕು ಎಂದು ಅವರು ತಿಳಿಸಿದರು.
   ಭಾರತದ ಧಾಮರ್ಿಕ ಶ್ರದ್ದಾ ಕೇಂದ್ರ, ಆಚರಣೆಗಳು ಕೇವಲ ಪೂಜಾದಿಗಳಿಗೆ ಮಾತ್ರ ಸೀಮಿತವಾಗಿರದೆ ಅದು ರಾಷ್ಟ್ರೀಯ ಚಿಂತನೆ, ಸಮಷ್ಠಿಯ ಒಳಿತಿನ ಚಿಂತನೆಗಳಿಂದ ಕೂಡಿದೆ ಎಂದು ಅವರು ತಿಳಿಸಿದರು. ಅಸಂಖ್ಯ ಹೊಳೆ, ತೊರೆಗಳು ಯಾವ ಮೂಲೆಗಳಿಂದ ಹರಿದರೂ ಕೊನೆಗೆ ಸೇರುವುದು ಸಾಗರಕ್ಕೆಂಬಂತೆ, ರಾಷ್ಟ್ರದ ವೈವಿಧ್ಯಮಯ ಆಚರಣೆ, ನಂಬಿಕೆಗಳು ಏಕಮೇವ ಮಹಾನ್ ಶಕ್ತಿ ಭಗವಂತನಿಗೆ ತಲಪುತ್ತದೆ. ಪರಮ ಸ್ವಾತಂತ್ರ್ಯವನ್ನು ನಂಬಿಕೆಯ ವಿಚಾರದಲ್ಲಿ ನೀಡಿರುವ ಭರತ ಖಂಡ ಅವಿನಾಶಿಯಾಗಿ ಜಗತ್ತಿಗೇ ಮಾರ್ಗದಶರ್ಿಯಾಗುವ ಕಾಲ ಮತ್ತೊಮ್ಮೆ ಸನ್ನಿಹಿತವಾಗುವುದು ಎಂದು ತಿಳಿಸಿದರು.
  ಸಮಾರಂಭದಲ್ಲಿ ಹಿರಿಯ ಧಾಮರ್ಿಕ ಮುಂದಾಳು ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡ ಸೀಮಿಗಳಲ್ಲಿ ಕುಂಬಳೆ ಸೀಮೆ ಅತ್ಯಂತ ಕಾರಣಿಕ ಪ್ರಸಿದ್ದವಾಗಿ ಗುರುತಿಸಲ್ಪಟ್ಟಿದೆ. ಎಲ್ಲೆಡೆ ನೆಲೆಯಾಗಿರುವ ಭಗವಂತ, ದೈವಗಳು, ಉಪದೈವಗಳ ಆರಾಧನಾಲಯಗಳಿಂದ ಕೂಡಿರುವ ಕುಂಬಳೆ ಸೀಮೆಯಲ್ಲಿ ಜನಿಸಿರುವುದು ಎಲ್ಲರ ಪುಣ್ಯ ಎಂದು ತಿಳಿಸಿದರು.
  ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಉಪಸ್ಥಿತರಿದ್ದು ಶ್ರದ್ದಾ ಕೇಂದ್ರಗಳ ಆಚರಣೆ, ಮಹತ್ವದ ಬಗ್ಗೆ ಮಾತನಾಡಿದರು.
  ಮಧೂರು ಶ್ರೀಮದನಂತೇಶ್ವರ ಶ್ರೀಸಿದ್ದಿವಿನಾಯಕ ಕ್ಷೇತ್ರದ ಜೀಣರ್ೋದ್ದಾರ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಎ.ವಾಸುದೇವ ಹೊಳ್ಳ, ಬ್ರಹ್ಮಕಲಶೋತ್ಸವ ಸಮಿತಿ ಕಾಯರ್ಾಧ್ಯಕ್ಷ ಕೆ.ಸುರೇಶ್, ವೆಂಕಟರಮಣ ಹೊಳ್ಳ, ಕಾರ್ಯದಶರ್ಿ ವಿಷ್ಣು ಭಟ್, ಬಾಲಕೃಷ್ಣ ನಂಬೀಶ, ತಾರಾನಾಥ ಮಧೂರು ಉಪಸ್ಥಿತರಿದ್ದರು. ಜೊತೆ ಕಾರ್ಯದಶರ್ಿ ಉಮೇಶ್ ಗಟ್ಟಿ ಸ್ವಾಗತಿಸಿದರು. ರಾಧಾಕೃಷ್ಣ ಉಳಿಯತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
   ಬಳಿಕ ಕ್ಷೇತ್ರದಲ್ಲಿ ಶ್ರೀಭೂತಬಲಿ ಉತ್ಸವ, ಬೆಡಿಕಟ್ಟೆಯಲ್ಲಿ ಪೂಜೆ, ಸಿಡಿಮದ್ದು ಪ್ರದರ್ಶನ, ಶ್ರೀಸನ್ನಿಧಿಯಲ್ಲಿ ರಾಜಾಂಗಣ ಪ್ರಸಾದ, ಮಹಾಮಂತ್ರಾಕ್ಷತೆಯೊಂದಿಗೆ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು.
   ರಾತ್ರಿ 9.30 ರಿಂದ ಕಟೀಲು ಶ್ರೀದುಗರ್ಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಶ್ರೀದೇವೀ ಮಹಾತ್ಮ್ಯೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries