ಮಾನ್ಯದಲ್ಲಿ ಗೋಕುಲೋತ್ಸವ
ಬದಿಯಡ್ಕ : ರಾಷ್ಟ್ರವನ್ನು ಪ್ರಬುದ್ದತೆ, ಸಂಸ್ಕಾರದೊಂದಿಗೆ ಮುನ್ನಡೆಸುವಲ್ಲಿ ಅಂತಹ ಶಿಕ್ಷಣದಿಂದ ಮಾತ್ರ ಸಾಧ್ಯ. ಗುರುಸ್ಥಾನದತ್ತ ಭಾರತ ಸಾಗಲು ಬಾಲಗೋಕುಲದ ಸಂಸ್ಕಾರಪ್ರದ ಶಿಕ್ಷಣದಿಂದ ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಬೌದ್ಧಿಕ್ ಪ್ರಮುಖ್ ರಾಜೇಶ್ ಹೇಳಿದರು.
ಅವರು ಭಾನುವಾರ ಮಾನ್ಯ ಜ್ಞಾನೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬಾಲಗೋಕುಲ ಕಾಸರಗೋಡು ತಾಲೂಕು ಸಮಿತಿ, ಬದಿಯಡ್ಕ ಮಹಾಮಂಡಲದ `ಗೋಕುಲೋತ್ಸವ'ದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭೌದ್ದಿಕ್ ನೀಡಿ ಮಾತನಾಡಿದರು.
ಪ್ರತಿಭೆಗಳನ್ನು ಬೆಳಗಿಸುವ ಕಾರ್ಯವನ್ನು ಬಾಲಗೋಕುಲಗಳು ಮಾಡುತ್ತವೆ. ಪುರಾತನ ಕಥೆ, ಕಾವ್ಯಗಳನ್ನೊಳಗೊಂಡ ಶಿಕ್ಷಣದಿಂದ ಸನಾತನ ಹಿಂದೂ ಸಂಸ್ಕೃತಿ ಏನೆಂಬುದನ್ನು ಮಕ್ಕಳು ಮನದಟ್ಟು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಅಧ್ಯಾಪಕ ಪರಿಷತ್(ಎನ್ಟಿಯು) ನ ಕಾಸರಗೋಡು ಜಿಲ್ಲಾ ಕಾರ್ಯದಶರ್ಿ ಪ್ರಭಾಕರ ಮಾಸ್ತರ್ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಬಾಲಗೋಕುಲದ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಹಾಗೂ ಉಳಿದ ಮಕ್ಕಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಇಲ್ಲಿನ ಶಿಕ್ಷಣವು ಮಕ್ಕಳ ಭದ್ರ ಭವಿಷ್ಯಕ್ಕೆ ಉತ್ತಮ ತಳಹದಿಯಾಗುವುದಲ್ಲದೆ, ಸಂಸ್ಕಾರವಂತರಾಗಿ ಜೀವಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಗೋಕುಲೋತ್ಸವ ಸಮಿತಿಯ ಅಧ್ಯಕ್ಷ ನವೀನಚಂದ್ರ ಮಾಸ್ತರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮರ ಸಹವಾಸದಿಂದ ಬದುಕು ಸುಖಕರವಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಆಧುನೀಕರಣಕ್ಕೆ ದಾಸರಾಗದೆ ಸಂಸ್ಕಾರವಂತ ಮಕ್ಕಳನ್ನು ದೇಶಕ್ಕೆ ನೀಡುವಲ್ಲಿ ಹೆತ್ತವರು ಪ್ರಧಾನ ಪಾತ್ರವಹಿಸಬೇಕು. ಪುರಾಣದ ಕಥೆಗಳನ್ನು ಕೇಳುವುದರಿಂದ, ಮಕ್ಕಳಿಗೆ ತಿಳಿಸುವ ಮೂಲಕ ಭಾರತೀಯ ಪರಂಪರೆಯ ಅರಿವು ಮೂಡಿಸಬೇಕು ಎಂದರು. ಶರಣ್ಯ ಗಾಡಿಗುಡ್ಡೆ ಸುಶ್ರಾವ್ಯವಾಗಿ ವಂದೇಮಾತರಂ ಹಾಡಿದರು. ಅಶ್ವತ್ ಮಾನ್ಯ ಸ್ವಾಗತಿಸಿ, ಯೋಗೀಶ್ ಪೊಡಿಪ್ಪಳ್ಳ ಧನ್ಯವಾದವನ್ನಿತ್ತರು. ಸುರಕ್ಷಾ ನಾಕೂರು ನಿರೂಪಣೆಗೈದರು.
ಬದಿಯಡ್ಕ ಮಹಾಮಂಡಲದ ಒಟ್ಟು 36 ಬಾಲಗೋಕುಲಗಳಿಂದ 700ಕ್ಕೂ ಹೆಚ್ಚು ಮಕ್ಕಳು ಉರಿಬಿಸಿಲನ್ನೂ ಲೆಕ್ಕಿಸದೆ ಗೋಕುಲೋತ್ಸವದಲ್ಲಿ ಪಾಲ್ಗೊಂಡರು. ಬೆಳಗ್ಗೆ ಮಾನ್ಯ ಶ್ರೀ ವೆಂಕಟ್ರಮಣ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆಯು ಮುತ್ತುಕೊಡೆ, ಚೆಂಡೆ ಮೇಳ, ಕೇಸರಿ ಧ್ವಜಗಳಿಂದ ರಂಗೇರಿತ್ತು. ಮಕ್ಕಳಿಗೆ ಬೌದ್ಧಕ ಹಾಗೂ ಶಾರೀರಿಕ ಸ್ಪಧರ್ೆಗಳನ್ನು ಏರ್ಪಡಿಸಲಾಗಿತ್ತು.
* ಉದ್ಘಾಟನಾ ಸಮಾರಂಭಕ್ಕೆ ಮೊದಲು ಧ್ವಜಾರೋಹಣಗೈಯಲಾಯಿತು.
* ಗೋಕುಲೋತ್ಸವ ಅಂಗಳ ಕೇಸರಿ ಧ್ವಜಗಳಿಂದ ಕಂಗೊಳಿಸುತ್ತಿತ್ತು.
* ಹಗ್ಗ ಜಗ್ಗಾಟ ಹಾಗೂ ಸ್ಪಧರ್ೆಗಳು ತೀವ್ರ ಪೈಪೋಟಿಯಿಂದ ಕೂಡಿತ್ತು.