HEALTH TIPS

No title

                ಪರಕ್ಕಿಲ ಅಷ್ಠಬಂಧ ಬ್ರಹ್ಮಕಲಶ ನಾಡಿಗೆ ಸಡಗರ ಮತ್ತು ಸಂಭ್ರಮ
    ಮಧೂರು: ಪರಮ ಕಾರಣಿಕ ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ಕ್ಷೇತ್ರದಲ್ಲಿ  ಫೆ.19 ರಂದು ಅಷ್ಠಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಫೆ.14 ರಿಂದ ವಿಧಿವಿಧಾನಗಳೊಂದಿಗೆ ಅಷ್ಠಬಂಭ ಬ್ರಹ್ಮಕಲಶೋತ್ಸವ ಪ್ರಾರಂಭವಾಗಿದ್ದು ಆಸ್ತಿಕ ಶ್ರದ್ಧಾಳುಗಳಲ್ಲಿ ಭಕ್ತಿಭಾವ ಉದ್ದೀಪನಗೊಳಿಸುತ್ತಿದ್ದು ನಾಡಿಗೆ ಸಡಗರ ಮತ್ತು ಸಂಭ್ರಮವನ್ನು ತಂದಿದೆ.
   ಹಸಿರು ಸಿರಿಯ ಮಧ್ಯೆ ನಯನ ಮನೋಹರವಾದ ದೃಶ್ಯಸಾನಿಧ್ಯದಲ್ಲಿ ಪ್ರಕೃತಿ ಮಾನವನ ಅನುಸಂಧಾನದ ನೆಲೆಯಾಗಿ ಕಂಗೊಳಿಸುತ್ತಿರುವ ಮಹಾದೇವ, ಶಾಸ್ತಾವು, ವಿನಾಯಕನ ಆಲಯವು ಭಕ್ತರ ಅಭಯ ಕೇಂದ್ರವಾಗಿದೆ. ಜಿಲ್ಲೆಯ ವಿವಿಧ ಧಾಮರ್ಿಕ ಕ್ಷೇತ್ರಗಳ ಹಾಗೂ ಸಂಘಸಂಸ್ಥೆಗಳ ವತಿಯಿಂದ ಪ್ರತಿದಿನವೂ ಹೊರೆಕಾಣಿಕೆ  ಮೆರವಣಿಗೆಯಲ್ಲಿ ತಲುಪುತ್ತಿದ್ದು ದೇವಸ್ಥಾನದ ತೆಂಕು ಬದಿಯಲ್ಲಿ  ವ್ಯವಸ್ಥೆಗೊಳಿಸಿದ ಉಗ್ರಾಣವು  ಜೀನಸು, ತರಕಾರಿ, ಹಣ್ಣು ಹಂಪಲುಗಳಿಂದ ತುಂಬಿ ತುಳುಕುತ್ತಿದೆ. ದಿನಂಪ್ರತಿ ಸಾವಿರಾರು ಮಂದಿ ಸನ್ನಿಧಾನದಲ್ಲಿ ಸಂಕಲ್ಪ ಸೇವೆ ಮಾಡಿ ಅನ್ನಪ್ರಸಾದವನ್ನು ಸ್ವೀಕರಿಸಿ ಧನ್ಯತಾಭಾವದಿಂದ  ಮರಳುತ್ತಿದ್ದಾರೆ.
   ದೇವಸ್ಥಾನದ ಆಡಳಿತ ಮೊಕ್ತೇಸರ ಬ್ರಹ್ಮಕಲಶೋತ್ಸವ ಸಮಿತಿಯ ರಕ್ಷಾಧಿಕಾರಿ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ಸಮರ್ಥ ಮಾರ್ಗದರ್ಶನದಲ್ಲಿ ದೇವಸ್ಥಾನದ ಅಭಿವೃದ್ಧಿ  ಕೆಲಸಗಳು ನಡೆದಿದ್ದು ಸ್ಥಳೀಯ ಯುವಕರು ಮತ್ತು ಆಸ್ತಿಕ ಶ್ರದ್ಧಾಳುಗಳು ಶ್ರಮದಾನದ ಮೂಲಕ ನಡೆಸಿದ ಕಾಮಗಾರಿ ಬೆಡಗಿನೊಳಗೆ ಬೆರಗು ಮೂಡಿಸುತ್ತಿದೆ. ಮುಂಭಾಗದ ವಿಶಾಲವಾದ ಕೆರೆ ಅತ್ಯಾಕರ್ಷಕವಾಗಿದೆ. ಪ್ರಧಾನ ಸಮಿತಿಯ ಜೊತೆ ಉಪಸಮಿತಿ ಮಹಿಳಾ ಸಮಿತಿಗಳು ಉತ್ಸವದ ಯಶಸ್ವಿಗೆ ಪೂರ್ಣ ಸಹಕಾರ ನೀಡುತ್ತಿದೆ.
   ಫೆ.19 ರಂದು ಬೆಳಿಗ್ಗೆ 8.37ಕ್ಕೆ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ದಿವ್ಯಹಸ್ತದಿಂದ ಶ್ರೀ ಮಹಾದೇವರಿಗೆ ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ ಹಾಗೂ ಉಪದೇವರಿಗೆ ಕಲಶಾಭಿಷೇಕ ನಡೆಯಲಿದೆ. ಒಂದು ಕಾಲದಲ್ಲಿ ಪೂರ್ಣ ಶಿಥಿಲವಾಗಿದ್ದ ಶ್ರೀ ಕ್ಷೇತ್ರವು ಹಂತಹಂತವಾಗಿ ನವೀಕರಣಗೊಂಡು 2000 ಇಸವಿಯಲ್ಲಿ  ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿತ್ತು. ಇದೀಗ ಅದೇ ರೀತಿಯ ಉತ್ಸವದಲ್ಲಿ ಪುನ: ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗುವ ಸೌಭಾಗ್ಯ ಭಕ್ತಮಹಾಜನರಿಗೆ ಪ್ರಾಪ್ತವಾಗಿದೆ.
   ಫೆ.17 ರಂದು ಬೆಳಗ್ಗೆ ಗಣಪತಿ ಹವನ, ತತ್ವ ಹೋಮ, ತತ್ವ ಕಲಶ, ಮಂಟಪ ಸಂಸ್ಕಾರ, ಶ್ರೀ ಸತ್ಯಸಾಯಿ ಸೇವಾ ಸಮಿತಿ ಮಧೂರು ಅವರಿಂದ ಭಜನೆ, ಚೇನಕ್ಕೋಡು ಶ್ರೀ ರಕ್ತೇಶ್ವರಿ ಭಜನಾ ಸಂಘದಿಂದ ಭಜನೆ,  ಶ್ರಾವಣಕೆರೆ ಶ್ರೀ ದುಗರ್ಾಪರಮೇಶ್ವರೀ ಮಹಿಳಾ ಭಜನಾ ಸಂಘದಿಂದ ಭಜನೆ, ಮಧ್ಯಾಹ್ನ ಅಂಕುರ ಪೂಜೆ, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ, ರಾಗಸುಧಾ ಮಧೂರು ಅವರಿಂದ ಭಜನಾಮೃತಂ, ಶ್ರೀ ಬೊಡ್ಡಜ್ಜ ಯಕ್ಷಭಾರತಿ ಮಧೂರು ಇವರಿಂದ ಯಕ್ಷಗಾನ ಕೂಟ, ಸಂಜೆ ಪುಳ್ಕೂರು ಶ್ರೀ ಮಹಾದೇವ ಭಜನಾ ಸಂಘ ಶಿರಿಬಾಗಿಲು ಅವರಿಂದ ಭಜನೆ, ಮಲಯಾಳ ನಾಟಕ, ರಾತ್ರಿ ಆದರ್ಶ ಯುವಕ ಸಂಘ ಉಳಿಯತ್ತಡ್ಕ ಅವರಿಂದ ನೃತ್ಯ ವೈಭವ, ರಾತ್ರಿ ಅಂಕುರ ಪೂಜೆ, ರಾತ್ರಿ ಪೂಜೆ ಜರಗಿತು.
      ಇಂದಿನ ಕಾರ್ಯಕ್ರಮ :
  ಫೆ.18 ರಂದು ಬೆಳಗ್ಗೆ 7ರಿಂದ ಗಣಪತಿ ಹವನ, ಕುಂಭೇಶ ಪೂಜೆ, 9 ರಿಂದ ಕೂಡ್ಲು ಪಾರೆಕಟ್ಟೆಯ ಸಪ್ತಗಿರಿ ಭಜನಾ ಮಂಡಳಿಯಿಂದ ಭಜನೆ, 10 ರಿಂದ ನಾಯ್ಕಾಪು ಶ್ರೀ ಶಾಸ್ತಾ ಭಜನಾ ಸಂಘದಿಂದ ಭಜನೆ, 11 ರಿಂದ ಪುಳ್ಕೂರಿನ ಭಜನ್ ಸಾಮ್ರಾಟ್ನಿಂದ ಭನೆ, ಮಧ್ಯಾಹ್ನ 12.30ಕ್ಕೆ ಅಂಕುರಪೂಜೆ, ಬ್ರಹ್ಮಕಲಶ ಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಯಕ್ಷ-ಗಾನ-ವೈಭವ (ಭಾಗವಹಿಸುವ ಪ್ರಸಿದ್ಧ ಕಲಾವಿದರು : ಗಿರೀಶ್ ರೈ ಕಕ್ಕೆಪದವು, ಕಾವ್ಯಶ್ರೀ ಅಜೇರು, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಅಪೂರ್ವ ಸುರತ್ಕಲ್, ಚೈತನ್ಯಕೃಷ್ಣ  ಪದ್ಯಾಣ, ನಿರೂಪಣೆ : ಗುರುರಾಜ ಹೊಳ್ಳ  ಬಾಯಾರು) 2.30 ರಿಂದ ಮಂಗಲ್ಪಾಡಿ ಕೂಟ ಮಹಾಜಗತ್ತು ಯಕ್ಷಕೂಟ ಮಹಿಳಾ ವೇದಿಕೆಯಿಂದ ಯಕ್ಷಗಾನ ಕೂಟ, ರಾತ್ರಿ 7 ರಿಂದ ವಿದುಷಿ ವಿದ್ಯಾಲಕ್ಷ್ಮಿ, ನಾಟ್ಯನಿಲಯ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯವೈವಿಧ್ಯ, 9 ರಿಂದ ನಾಟ್ಯ ನಿಲಯ ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ನೃತ್ಯೋಪಾಸನ, ರಾತ್ರಿ 8ಕ್ಕೆ ಕಲಶಾಧಿವಾಸ, ಅಧಿವಾಸ ಹೋಮ, ರಾತ್ರಿ ಪೂಜೆ ನಡೆಯಲಿದೆ.
   ಫೆ.19 ರಂದು ಬೆಳಗ್ಗೆ 7ಕ್ಕೆ ಗಣಪತಿ ಹವನ, 8.37ಕ್ಕೆ ಪರಮಪೂಜ್ಯ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮೀನ ಲಗ್ನ ಶುಭಮುಹೂರ್ತದಲ್ಲಿ ತಂತ್ರವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರವರ ದಿವ್ಯಹಸ್ತದಿಂದ ಶ್ರೀ ಮಹಾದೇವರಿಗೆ ಅಷ್ಠಬಂಧ ಲೇಪನ, ಬ್ರಹ್ಮಕಲಶಾಭಿಷೇಕ ಹಾಗೂ ಉಪದೇವರಿಗೆ ಕಲಶಾಭಿಷೇಕ, ರಕ್ತೇಶ್ವರಿ, ವಿಷ್ಣುಮೂತರ್ಿ ದೈವಗಳಿಗೆ ಕಲಶಾಭಿಷೇಕ ತಂಬಿಲ, 11 ರಿಂದ ಬಳ್ಳಪದವು ಯೋಗೀಶ್ ಶರ್ಮ ಇವರಿಂದ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, 1 ರಿಂದ ಭಕ್ತಿ ಭಾವ ರಾಗ ಸಂಗಮ ಸಾಯಿ ಮನೋಹರ್ ಮತ್ತು ಬಳಗದವರಿಂದ ನಡೆಯಲಿದೆ.
   ಸಂಜೆ 4ಕ್ಕೆ ಪರಮಪೂಜ್ಯ ಶ್ರೀ ಯೋಗಾನಂದಸರಸ್ವತಿ ಸ್ವಾಮಿಜಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಅವರಿಗೆ ಪೂರ್ಣಕುಂಭ ಸ್ವಾಗತ, ಸಂಜೆ 4.30ಕ್ಕೆ ಧಾಮರ್ಿಕ ಸಭೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಆಶೀರ್ವಚನ ನೀಡುವರು. ಆಡಳಿತ ಮೊಕ್ತೇಸರ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಗೌರವ ಉಪಸ್ಥಿತರಿರುವರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಉಪಸ್ಥಿತರಿರುವರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಸಂಸ್ಕಾರ ಭಾರತಿ ಪ್ರಾಂತ್ಯ ಅಧ್ಯಕ್ಷ ಚಕ್ರವತರ್ಿ ಸೂಲಿಬೆಲೆ ಧಾಮರ್ಿಕ ಭಾಷಣ ಮಾಡುವರು.  ಮಧೂರು ಶ್ರೀ ಕ್ಷೇತ್ರ ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ , ಜ್ಯೋತಿಷಿ ಸಿ.ವಿ.ಪೊದುವಾಳ್, ಮಹಾಲಕ್ಷ್ಮಿಪುರಂ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಗೋಪಿನಾಥ್ ನಾಯರ್ ಅತಿಥಿಗಳಾಗಿ ಉಪಸ್ಥಿತರಿರುವರು.  ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಎ.ವಾಸುದೇವ ಹೊಳ್ಳ ಮಧೂರು ಉಪಸ್ಥಿತರಿರುವರು.
   ಸಂಜೆ 6ಕ್ಕೆ ಶ್ರೀ ಭೂತಬಲಿ, ಉತ್ಸವ, ಬೆಡಿಕಟ್ಟೆಯಲ್ಲಿ ಪೂಜೆ, ಸಿಡಿಮದ್ದು ಪ್ರದರ್ಶನ, ಶ್ರೀ ಸನ್ನಿಧಿಯಲ್ಲಿ ರಾಜಾಂಗಣ ಪ್ರಸಾದ, ಮಹಾಮಂತ್ರಾಕ್ಷತೆ, ರಾತ್ರಿ 9.30 ರಿಂದ ಕಟೀಲು ಶ್ರೀ ದುಗರ್ಾಪರಮೇಶ್ವರಿ ಪ್ರಸಾದಿತ ದಶವತಾರ ಯಕ್ಷಗಾನ ಮಂಡಳಿಯಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಲಿದೆ.
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries