HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ರಾಷ್ಟ್ರ ವಿಶ್ವಗುರುವಾಗಿಸುವಲ್ಲಿ ಮಾತೆಯರ ಪಾತ್ರ ಮಹತ್ತರ-ಕುಂಟಾರು ರವೀಶ ತಂತ್ರಿ
    ಪೆರ್ಲ: ನಮ್ಮ ಸಂಸ್ಕೃತಿ,ಸಂಸ್ಕಾರ ಈ ಮಣ್ಣಿನ ಚರಾಚರವಸ್ತುಗಳಲ್ಲೆಲ್ಲ ಕಂಡುಕೊಳ್ಳಬಹುದು. ಅಶ್ವತ್ಥ ಮರದಲ್ಲಿ  ತ್ರಿಮೂತರ್ಿಗಳು ಹಾಗೂ ಸೃಷ್ಠಿಗೆ ಕಾರಣಕರ್ತಳಾದ ಆದಿಶಕ್ತಿ ನೆಲೆಸಿರುವಳೆಂಬುದು ನಮ್ಮ ನಂಬಿಕೆ. ಮಾತೆಯರ ಮೂಲಕ ನಮ್ಮ ಸಂಸ್ಕೃತಿ ಬೆಳಗುತ್ತದೆ. ಮಾತೆ ಎಂದರೆ ಮನೆಯ ಬೆಳಕು ಮಾತ್ರವಲ್ಲ ಲೋಕಕ್ಕೇ ಬೆಳಕನ್ನು ನೀಡುವ ಮೊದಲ ಗುರು ಎಂದು ಬ್ರಹ್ಮ ಶ್ರೀ ವೇ.ಮೂ ಕುಂಟಾರು ರವೀಶ ತಂತ್ರಿ ತಿಳಿಸಿದರು. 
    ಕಾಟುಕುಕ್ಕೆ ಖಂಡೇರಿಯ ಅಶ್ವತ್ಥ ಕಟ್ಟೆ ಸೇವಾ ಸಮಿತಿಯ ಆಶ್ರಯದಲ್ಲಿ ಭಾನುವಾರ ನಡೆದ ಅಶ್ವತ್ಥ ಸಿರಿ 2118-  6ನೇ ವಾಷರ್ಿಕೋತ್ಸವದಲ್ಲಿ ಧಾಮರ್ಿಕ ಉಪನ್ಯಾಸಗೈದು ಅವರು ಮಾತನಾಡಿದರು.
   ಭಾರತವನ್ನು ವಿಶ್ವಗುರುವನ್ನಾಗಿ ಮಾಡುವಲ್ಲಿ ಮಾತೆಯರ ಪಾತ್ರ ಮಹತ್ತರವಾದುದು. ಹೆಣ್ಣು ತ್ಯಾಗದ ಸಂಕೇತ. ಧರ್ಮ ಬದ್ಧವಾಗಿ ನಡೆಯುವ ಮಾತೆ,  ಅದಕ್ಕಾಗಿಯೇ ಧರ್ಮಪತ್ನಿ ಎಂದು ಕರೆಸಿಕೊಳ್ಳತ್ತಾಳೆ. ಬೆಳೆಯುತ್ತಿರುವ ಮಕ್ಕಳು ಗುರು ಹಿರಿಯರನ್ನು ಹೇಗೆ ಗೌರವಿಸಬೇಕೆನ್ನುವುದನ್ನು ತಾಯಿ ಕಲಿಸಿಕೊಡುತ್ತಾಳೆ. ನಮ್ಮ ಆಚಾರ ವಿಚಾರ ಬದುಕಿನ ಪದ್ಧತಿ ,ಧಾಮರ್ಿಕ ಕಟ್ಟುಪಾಡುಗಳನ್ನು ಕಲಿಯುವ ಕಲಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಅವರು ತಿಳಿಸಿದರು. ನಾವು ಮಾಡುವ ಕಟ್ಟುಪಾಡುಗಳು  ,ಅನುಷ್ಠಾನ ಕರ್ಮಗಳು , ಹೇಗೆ ,ಯಾಕೆ , ಏನು ಎಂಬ ಪ್ರಶ್ನೆಗಳಿಗೆ ಉತ್ತರಿಸಲು ನಾವು ಸದಾ ಸಿಧ್ಧರಿರಬೇಕು.ಧರ್ಮವನ್ನು ಉಳಿಸುವ ಸಲುವಾಗಿ ನಾವು ಸದಾ ಜಾಗೃತರಾಗಬೇಕು ಎಂದು ಅವರು ತಿಳಿಸಿದರು.
   ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹಯರ್ ಸೆಕಂಡರಿ ಶಾಲೆಯ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಸಭೆಯ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿ, ಇಂದಿನ ಧಾಮರ್ಿಕ ಕಾರ್ಯಕ್ರಮಗಳಲ್ಲಿ  ಯುವ ಮನಸ್ಸುಗಳ ಪಾಲ್ಗೊಳ್ಳುವಿಕೆ ವಿರಳ. ಆಧುನಿಕತೆಯ ಸೆಳೆತದಿಂದಾಗಿ ವಿದೇಶಿ, ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವ ಇಂದಿನ ಯುವಜನತೆ ಅಂಗೈಯಲ್ಲಿ ಜಗತ್ತನ್ನು ಕಾಣುತ್ತಿದೆ. ದುಶ್ಚಟ , ಜಾಲತಾಣಕ್ಕೆ ದಾಸರಾಗುವ ಮೂಲಕ ನಮ್ಮದಾದ ನೆಲದ ಸಂಸ್ಕೃತಿ , ಅಚಾರ ವಿಚಾರಗಳನ್ನ ಮರೆತು ಬಿಟ್ಟಿದೆ. ಈ ರೀತಿಯ ಬೆಳವಣಿಗೆ  ನಮ್ಮ  ಧಾಮರ್ಿಕ ಸಂಸ್ಕೃತಿಗೆ ಮಾರಕವಾದುದು. ಆಧುನಿಕತೆ ಬೇಕು. ಆದರೆ ನಮ್ಮತನವನ್ನು ಯಾವತ್ತೂ ಬಿಟ್ಟುಕೊಡಬಾರದು. ಮೊಬೈಲು ನೋಡುತ್ತಾ ತಲೆ ಅಡಿಗೆ ಹಾಕುವ ಸಂಸ್ಕಾರ ನಮ್ಮದಲ್ಲ. ತಲೆಯೆತ್ತಿ ನಡೆಯುವ ಪರಂಪರೆ ನಮ್ಮದು ಎಂದು ನುಡಿದರು.
    ಈ ಸಂದರ್ಭದಲ್ಲಿ ಖ್ಯಾತ ನಾಟಿ ವೈದ್ಯ ಪದ್ಮನಾಭ ರೈ ಪೆರ್ಲ, ಉದಯೋನ್ಮುಖ ಭರತನಾಟ್ಯ ಪ್ರತಿಭೆ ಶ್ರೇಯ ಪಾದೆಗಿರಿ ಅವರನ್ನು ಅಭಿನಂದಿಸಲಾಯಿತು.ಜಯರಾಮ ರೈ ದಂಬೆಕಾನ ಸ್ವಾಗತಿಸಿ, ಭರತ್ ರೈ ವಂದಿಸಿದರು. ಕಾತರ್ಿಕ್ ಶಾಸ್ತ್ರಿ ಕಾರ್ಯಕ್ರಮವನ್ನು ನಿರ್ವಹಿಸಿದರು.ಶೃತಿ ಕಯ್ಯಂಕೂಡ್ಲು ಪ್ರಾರ್ಥನೆ ಹಾಡಿದರು.
   ಕಾರ್ಯಕ್ರಮದ ಅಂಗವಾಗಿ  ಬೆಳಗ್ಗೆ ಗಣಹೋಮ, ಸಂಜೆ 5.30ಕ್ಕೆ  ಕಶೆಕೋಡೆ ಸೂರ್ಯನಾರಾಯಣ ಭಟ್ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ  ದುಗರ್ಾಪೂಜೆ ನೆರವೇರಿತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries