HEALTH TIPS

No title

            ಮಂಜೇಶ್ವರ ರೈಲು ಮೇಲ್ಸೇತುವೆ ನಿಮರ್ಾಣ ಅಧಿಕಾರಿಗಳ ಜೊತೆ ಚಚರ್ಿಸಿ ಪರಿಹಾರ!-ಸಂಸದ ಪಿ.ಕರುಣಾಕರನ್
    ಮಂಜೇಶ್ವರ: ಮಂಜೇಶ್ವರದಲ್ಲಿನ ರೈಲ್ವೇ ಮೇಲ್ಸೆತುವೆ ನಿಮರ್ಾಣದ ಅವಶ್ಯಕತೆಯನ್ನು ತಜ್ಞ ಅಧಿಕಾರಿಗಳ ಜೊತೆ ಪರಾಮಶರ್ಿಸಿ ಪೂರೈಸಲಾಗುವುದೆಂದು ಸಂಸದ ಪಿ.ಕರುಣಾಕರನ್ ಹೇಳಿದರು.
   ಮಂಜೇಶ್ವರ ಬ್ಲಾ.ಪಂ ಸಭಾಂಗಣದಲ್ಲಿ ಗುರುವಾರ ನಡೆದ ರೈಲ್ವೇ ಮೇಲ್ಸೆತುವೆ ನಿಮರ್ಾಣದ ಬಗೆಗಿನ ಸರ್ವಪಕ್ಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಜಿಲ್ಲೆಯಲ್ಲಿ ಒಟ್ಟು 17 ರೈಲು ನಿಲುಗಡೆ ಕೇಂದ್ರಗಳಿವೆ. ಪ್ರತಿ ನಿಲ್ದಾಣಗಳಲ್ಲೂ ಅದರದ್ದೆ ಆದ ಸಮಸ್ಯೆಗಳಿವೆ. ಸುರಕ್ಷತಾ ನಿಟ್ಟಿನಲ್ಲಿ ಮಂಜೇಶ್ವರದಲ್ಲಿ ರೈಲ್ವೇ ಮೇಲ್ಸೆತುವೆ ಅಥವಾ ಕೆಳ ಸೇತುವೆ ನಿಮರ್ಾಣ ಅತ್ಯವಶ್ಯಕವಾಗಿದ್ದು, ರೈಲ್ವೇ ಸೇಫ್ಟಿ ಫಂಡ್ ಮೂಲಕ ನಿಮರ್ಿಸಬೇಕಿತ್ತು. ಪ್ರಸ್ತುತ ಸ್ಥಳೀಯಾಡಳಿತಗಳು ರೈಲ್ವೇ ಯೋಜನೆಯನ್ನು ಪೂರ್ಣಗೊಳಿಸಲು ಮುಂದೆ ಬಂದಿದ್ದು, ನಾಗರಿಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಮಂಜೇಶ್ವರ ರೈಲು ನಿಲ್ದಾಣವನ್ನು ಸ್ಥಳೀಯ ಶಾಸಕರ ನಿಧಿ ಸಹಿತ ಸಂಸದರ ನಿಧಿಯ ಮೂಲಕ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು. ನೀಲೇಶ್ವರ ಹಾಗೂ ಚೆರವತ್ತೂರಿನಲ್ಲಿ ನಿಮರ್ಾಣಗೊಂಡ ರೈಲ್ವೇ ಮೇಲ್ಸೆತುವೆಯನ್ನು ಸ್ಥಳೀಯ ಶಾಸಕರ ನಿಧಿ ಹಾಗೂ ನಗರಸಭೆಯ ಮೂಲಕ ಪೂರೈಸಲಾಗಿದೆ ಎಂದು ತಿಳಿಸಿದ ಅವರು, ಪ್ರತಿಯೋಜನೆಯ ಸಾಕಾರಕ್ಕೆ ಜನ ಸಹಭಾಗಿತ್ವ ಅತೀ ಅವಶ್ಯ ಎಂದರು. ಮಂಜೇಶ್ವರದಲ್ಲಿ ರೈಲ್ವೇ ಸಂಬಂಧಿ ಸಮಸ್ಯೆ ಬಗೆಹರಿಸಲು ಮೂರು ಮಾರ್ಗಗಳಿವೆ. ಕಾಲುದಾರಿಗಾಗಿ ಸೇತುವೆ ನಿಮರ್ಾಣ, ಕೆಳ ಸೇತುವೆ ಮತ್ತು ಮೇಲ್ಸೆತುವೆ. ಇವುಗಳಲ್ಲಿ ಯಾವುದಾದರೂ ಒಂದನ್ನು ತಜ್ಞ ಅಧಿಕಾರಿಗಳ ಸಲಹೆ ಮೂಲಕ ಗುತ್ತಿಗೆ ನೀಡಿ ನಿಮರ್ಿಸಲಾಗುವುದು ಎಂದು ತಿಳಿಸಿದರು.ಯೋಜನೆಗೆ ಸುಮಾರು ಒಂದೂವರೆ ಕೋಟಿರೂ.ಗಳಷ್ಟು ವೆಚ್ಚ ತಗಲಲಿದೆ ಎಂದು ಅಂದಾಜಿಸಲಾಗಿದ್ದು, ಜಿಲ್ಲಾ ರೈಲ್ವೇ ವಿಭಾಗದ ಪ್ರಬಂಧಕರು ಸಹಿತ ಅಧಿಕಾರಿಗಳು ಸ್ಥಳ ಸಂದಶರ್ಿಸಿದ ಬಳಿಕ ನಾಗರಿಕರಿಂದ ಮಾಹಿತಿ ಸಂಗ್ರಹಿಸಿ ಯೋಜನೆಗೆ ನೀಲ ನಕಾಶೆ ರೂಪಿಸಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.
   ಬ್ಲಾ.ಪಂ ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಮಾತನಾಡಿ ಮಂಜೇಶ್ವರ ರೈಲು ನಿಲ್ದಾಣವು ಗಡಿ ಭಾಗದ ಅತೀ ಮುಖ್ಯ ರೈಲ್ವೇ ನಿಲ್ದಾಣವಾಗಿದೆ. ಇಲ್ಲಿ ಎಕ್ಸಪ್ರೆಸ್ರೈಲು ನಿಲುಗಡೆಯ ಅವಶ್ಯಕತೆಯೂ ಇದೆ, ಹೆಚ್ಚಿನ ಸರಕಾರಿ ಕಚೇರಿಗಳು ಈ ಪ್ರದೇಶದಲ್ಲಿಕಾಯರ್ಾಚರಿಸುತ್ತಿವೆ ಎಂದರು.ಪ್ರಸ್ತುತ ಸರಕು ಸಾಗಾಟದ ರೈಲುಗಳು ಮಂಜೇಶ್ವರದಲ್ಲಿ ತಂಗುತ್ತಿದ್ದು ಹೆಚ್ಚಿನ ಅವಘಡಗಳಿಗೆ ಕಾರಣವಾಗುತ್ತಿವೆ. ವಾರದ ಹಿಂದೆ ನಡೆದ ರೈಲ್ವೇ ದುರಂತವು ಜನ ಸಾಮಾನ್ಯರ ದುಃಖಕೆ ್ಕಕಾರಣವಾಗಿದೆ. ಅಭಿವೃದ್ಧಿ ದಿಸೆಯಲ್ಲಿಯಾವುದೇರಾಜಕೀಯ ಬೇಧ ಸಲ್ಲಎಂದಅವರುಜನ ಸಂಘಟನೆಗಳು ಹಾಗೂ ನಾಗರಿಕರ ಮನವಿ ಮೇರೆಗೆ ಮೇಲ್ಸೆತುವೆ ನಿಮರ್ಾಣಕಾರ್ಯ ಯಥಾರ್ಥಗೊಳ್ಳಬೇಕಿದೆ ಎಂದರು.
   ಸಭೆಯಲ್ಲಿ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಸದಸ್ಯರಾದ ಫರೀದಾ ಸಕೀರ್, ಸಮೀರಾ, ಮಂಜೇಶ್ವರ ಬ್ಲಾ.ಪಂ ಉಪಾಧ್ಯಕ್ಷೆ ಮಮತಾ ದಿವಾಕರ್, ಸದಸ್ಯ ಕೆ.ಆರ್.ಜಯಾನಂದ, ಮೀಂಜ ಗ್ರಾ.ಪಂ ಅಧ್ಯಕ್ಷೆ ಶಂಶಾದ್ ಶುಕೂರ್, ಮಂಜೆಶ್ವರ ಗ್ರಾ.ಪಂ ಹಾಗೂ ವಕರ್ಾಡಿ ಗ್ರಾ.ಪಂ ಅಧ್ಯಕ್ಷರು ಭಾಗವಹಿಸಿದ್ದರು. ಹಲವು ರಾಜಕೀಯ ನೇತಾರರು ರೈಲ್ವೇ ಮೇಲ್ಸೆತುವೆ ನಿಮರ್ಾಣದ ಅವಶ್ಯಕತೆಯ ಬಗ್ಗೆ ಮಾತನಾಡಿದರು.
   ಸಭೆಯು ಆರಂಭದಲ್ಲಿ ರೈಲ್ವೇ ಅವಘಡದಲ್ಲಿ ಮಡಿದವರ ಆತ್ಮಕ್ಕೆ ಶಾಂತಿಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
     ಬ್ಲಾ.ಪಂ ನಿಂದ 25 ಲಕ್ಷರೂ. :
  ಕಾಸರಗೋಡು ಜಿ.ಪಂ ಸೇರಿದಂತೆ ಮಂಜೇಶ್ವರ, ಮೀಂಜ, ಮಂಗಲ್ಪಾಡಿ ಗ್ರಾ.ಪಂ ಸಹಭಾಗಿತ್ವದಲ್ಲಿ ನಡೆಯಲಿರುವ ರೈಲ್ವೇ ಮೇಲ್ಸೆತುವೆ ನಿಮರ್ಾಣಕ್ಕಾಗಿ ಮಂಜೇಶ್ವರ ಬ್ಲಾ.ಪಂ ನಿಂದ 25 ಲಕ್ಷರೂ. ಗಳನ್ನು ಮೀಸಲಿಡಲಾಗುವುದೆಂದು ಅಧ್ಯಕ್ಷ ಎ.ಕೆ.ಎಂ ಅಶ್ರಫ್ ತಿಳಿಸಿದ್ದಾರೆ.ಉಳಿದಂತೆ ಸಂಸದ ಹಾಗೂ ಶಾಸಕರ ನಿಧಿಯೂ ಸೇರಿದಂತೆ ಒಟ್ಟು 1.30 ಕೋಟಿರೂ ವೆಚ್ಚದಲ್ಲಿ ಸೂಕ್ತ ಯೋಜನೆಯನ್ನು ಪೂರೈಸಲಾಗುವುದೆಂದು ಸಂಸದರು ಹೇಳಿದ್ದಾರೆ.
 
         

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries