ಶ್ರದ್ದಾ ಭಕ್ತಿ, ಸಡಗರದಿಂದ ಮಹಾ ಶಿವರಾತ್ರಿ ಆಚರಣೆ
ಕಾಸರಗೋಡು: ನಾಡಿನಾದ್ಯಂತ ಶ್ರದ್ದಾ,ಭಕ್ತಿ, ಸಡಗರ, ಸಂಭ್ರಮದಿಂದ ಮಹಾಶಿವರಾತ್ರಿಯನ್ನು ಮಂಗಳವಾರ ಆಚರಿಸಲಾಯಿತು. ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ನಾಡಿನ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆ ನಡೆಯಿತು. ಶಿವಲಿಂಗಕ್ಕೆ ಎಳನೀರು ಅಭಿಷೇಕ, ಹಾಲಿನ ಅಭಿಷೇಕ, ತುಪ್ಪಾಭಿಷೇಕ ಮೊದಲಾದವು ಜರಗಿತು. ಬಹುತೇಕ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಭಕ್ತಾದಿಗಳ ಉದ್ದನೆಯ ಸಾಲು ಕಂಡು ಬಂತು.
ಇತಿಹಾಸ ಪ್ರಸಿದ್ಧ ಕಾಸರಗೋಡಿನ ಶ್ರೀ ಮಲ್ಲಿಕಾಜರ್ುನ ದೇವಸ್ಥಾನದಲ್ಲಿ ಬೆಳಗಿನಿಂದಲೇ ಭಕ್ತರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ದೇವಸ್ಥಾನದಲ್ಲಿ ಸೀಯಾಳ ಅಭಿಷೇಕ ಮೊದಲಾದ ವಿಶೇಷ ಸೇವೆಗಳು ನಡೆಯಿತು. ಕಾಸರಗೋಡು ನಗರದ ಹೊರ ವಲಯದ ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ನುಳ್ಳಿಪ್ಪಾಡಿ ಶ್ರೀ ಮಲ್ಲಿಕಾಜರ್ುನ ದೇವಸ್ಥಾನ, ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನ, ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಂಜೇಶ್ವರ ಶ್ರೀ ಕೀತರ್ೇಶ್ವರ ದೇವಸ್ಥಾನ, ಪುತ್ತಿಗೆ ದೇಲಂಪಾಡಿ ಮಹಾಲಿಂಗೇಶ್ವರ ದೇವಸ್ಥಾನ, ಬಾಯಾರು ಪಂಚಲಿಂಗೇಶ್ವರ ದೇವಸ್ಥಾನ ಮೊದಲಾದೆಡೆಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ನಡೆಯಿತು.
ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನ, ಅಂಬಾರು ಶ್ರೀ ಸದಾಶಿವ ದೇವಸ್ಥಾನ, ಶಿರಿಯ ಸೀರೆ ಶಂಕರನಾರಾಯಯ ದೇವಸ್ಥಾನ, ಅಡೂರು ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನ, ಮಧೂರು ಮೊದಲಾದೆಡೆಗಳಲ್ಲಿ ಕಲಶಾಭಿಷೇಕ, ಅರ್ಚನೆಗಳು, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಮಂದಿ ಭಕ್ತರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಕೃತಾರ್ಥರಾದರು.
ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಓಜ ಸಾಹಿತ್ಯ ಕೂಟದ ಆಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ 58 ನೇ ವರ್ಷದ ಏಕಾಹ ಭಜನೋತ್ಸವ ಸೂಯರ್ೋದಯದಿಂದ ಆರಂಭಗೊಂಡು ಫೆ.14 ರಂದು ಸೂಯರ್ೋದಯದ ತನಕ ನಡೆಯಲಿದೆ. ಗುಡ್ಡೆ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ 57 ನೇ ಏಕಾಹ ಭಜನಾ ಮಹೋತ್ಸವ ಜರಗಿತು.