HEALTH TIPS

No title

        ಐದನೇ ದಿನ ಖಾಸಗೀ ಬಸ್ ಮುಷ್ಕರ ವಾಪಸ್=ಭರವಸೆಯಷ್ಟೆ=ತೀಮರ್ಾನ ಶೂನ್ಯ
  ಕಾಸರಗೋಡು: ಕೇರಳದಾತ್ಯಂತ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಖಾಸಗೀ ಬಸ್ ಮುಷ್ಕರ ಹಿಂತೆಗೆದುಕೊಳ್ಳಲಾಗಿದೆ.
   ಮಂಗಳವಾರ ಬೆಳಿಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರೊಂದಿಗೆ ನಡೆಸಿದ ಮಾತುಕತೆಯ ಬಳಿಕ ಖಾಸಗೀ ಬಸ್ ಮಾಲಕರು ಈ ನಿಧರ್ಾರ ಪ್ರಕಟಿಸಿದ್ದಾರೆ.
   ಪ್ರಯಾಣ ದರ ಏರಿಕೆ ಮಾಡಿದರೂ ವಿದ್ಯಾಥರ್ಿಗಳಿಗೆ ನೀಡುತ್ತಿರುವ ರೀಯಾಯಿತಿ ದರವನ್ನು ಏರಿಕೆ ಮಾಡುವಂತೆ ಮಾಲಕರು ಮುಷ್ಕರ ಮುಂದುವರಿಸಿದ್ದರು. ಈ ಬಗ್ಗೆ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಎರಡು ಬಾರಿ ಬಸ್ ಮಾಲಕರ ಸಂಘಟನೆಯ ಜೊತೆಗೆ ಮಾತುಕತೆ ನಡೆಸಿದ್ದರೂ ವಿಫಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಬಸ್ ಮಾಲಕರ ಸಂಘಟಮನೆಯ ಮುಖಂಡರ ಜೊತೆಗೆ ಮುಖ್ಯಮಂತ್ರಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದರು.
  ವಿದ್ಯಾಥರ್ಿಗಳ ರೀಯಾಯಿತಿ ದರವನ್ನು ಸದ್ಯ ಏರಿಕೆ ಮಾಡುವುದಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರ ಹಿಂತೆಗೆಯಲಾಗಿದೆಯೆಂದು ಮುಖಂಡರು ತಿಳಿಸಿದ್ದಾರೆ.
   ಕಳೆದ ಐದು ದಿನಗಳಿಂದ ಮುಷ್ಕರ ನಡೆಸಿದ ಖಾಸಗೀ ಬಸ್ ಗಳ ವಿರುದ್ದ ಕ್ರಮಕ್ಕೆ ಸರಕಾರ ಮುಂದಾಗಿತ್ತು. ಸೋಮವಾರದಿಂದ ನೊಟೀಸು ನೀಡುವ, ಮುಟ್ಟುಗೋಲು ಹಾಕುವ, ಪರವಾನಿಗೆ ರದ್ದುಪಡಿಸುವ ಕಠಿಣ ಕ್ರಮದ ಬಗ್ಗೆ ಸರಕಾರ ಮುನ್ನೆಚ್ಚರಿಕೆ ನೀಡಿತ್ತು. ಈ ಮಧ್ಯೆ ಮುಷ್ಕರ ನಡೆಸುವ ಬಗ್ಗೆ ಖಾಸಗೀ ಬಸ್ ಮಾಲಕರ ಸಂಘಟನೆಯ ಮಧ್ಯೆ ಬಿರುಕು ಮೂಡಿತ್ತು. ಈ ಮಧ್ಯೆ ಮಂಗಳವಾರ ಮುಖ್ಯಮಂತ್ರಿಯ ಜೊತೆ ಮಾತುಕತೆ ನಡೆಸಿ ಯಾವುದೇ ತೀಮರ್ಾನಕ್ಕೂ ಬಾರದೆ ಮುಷ್ಕರ ಹಿಂತೆಗೆಯಲು ಮಾಲಕರು ತೀಮಮರ್ಾನ ತೆಗೆದುಕೊಂಡಿದ್ದು, ಬಸ್ಸುಗಳು ರಸ್ತೆಗಿಳಿದವು.
   ಗ್ರಾಮೀಣ ಪ್ರದೇಶದಲ್ಲಿ ತಣ್ಣಗೆ:
  ಮಂಗಳವಾರ ಬೆಳಿಗ್ಗೆ 10ರ ಸುಮಾರಿಗೆ ಖಾಸಗೀ ಬಸ್ ಮಾಲಕರು ಹಠಾತ್ ಎಂಬಂತೆ ಮುಷ್ಕರದಿಂದ ಹಿಂದೆ ಸರಿಯುವುದನ್ನು ಪ್ರಕಟಿಸುತ್ತಿದ್ದಂತೆ ನಗರ ಪ್ರದೇಶಗಳಲ್ಲಿ ಅಲ್ಲಲ್ಲಿ ನಿಧಾನವಾಗಿ ಬಸ್ ಗಳು ರಸ್ತೆಗಿಳಿದವು. ಆದರೆ ಗ್ರಾಮೀಣ ಒಳ ಪ್ರದೇಶಗಳಲ್ಲಿ ಬಸ್ ಗಳು ಅಪರಾಹ್ನದ ಬಳಿಕವಷ್ಟೆ ಸಂಚಾರ ಆರಂಭಿಸಿದವು. ಹಠಾತ್ ಮುಷ್ಕರ ಹಿಂತೆಗೆಯುವ ಬಗ್ಗೆ ಯಾವುದೇ ಮುನದಸೂಚನೆ ಇಲ್ಲದಿದ್ದರಿಂದ ಐದು ದಿನಗಳಿಂದ ಇತರ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿದ್ದ ಖಾಸಗೀ ಬಸ್ ನೌಕರರು ಬಳಿಕ ಆಗಮಿಸಿ ಬಸ್ ಸೇವೆಗೆ ತೊಡಗಿಸಿಕೊಂಡರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries