HEALTH TIPS

No title

               ಎಸ್ಟಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಬದ್ಧ-ಬಿಜೆಪಿ ಎಣ್ಮಕಜೆ ಪಂಚಾಯತ್ ಸಮಿತಿ
   ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಎಸ್ಟಿ ವಿಭಾಗಕ್ಕೆ ಅತೀ ಹೆಚ್ಚು ಅನುದಾನ ತರುವಲ್ಲಿ ಈಗಿನ ಬಿಜೆಪಿ ಪಂಚಾಯತು ಆಡಳಿತ ಸಮಿತಿ ಯಶಸ್ವಿಯಾಗಿದೆ,ಎಂದು ಬಿಜೆಪಿ ಎಣ್ಮಕಜೆ ಪಂಚಾಯತು ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.2018-19ರ ಯೋಜನೆಯಲ್ಲಿ ಅಳವಡಿಸಿ ಪಂಚಾಯತಿಗೆ ದೊರೆತ ಅನುದಾನ 1ಕೋಟಿ ಅರುವತ್ತೊಂದು ಲಕ್ಷದ ನಲುವತ್ತ ಮೂರು ಸಾವಿರ ರೂ. 2015 ರಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಇಷ್ಟು ದೊಡ್ಡ ಮೊತ್ತವನ್ನು ಎಸ್ಟಿ ವಿಭಾಗದ ಅಭಿವೃದ್ಧಿಗೆ ತರುವಲ್ಲಿ ಯಶಸ್ವಿಯಾಗಿದೆ.ಈ ಮೊತ್ತವನ್ನು ಎಣ್ಮಕಜೆ ಪಂಚಾಯತಿನ ಎಸ್ಟಿ ವಿಭಾಗದ ಮೂಲಭೂತ ಸೌಕಾರ್ಯಕ್ಕೆ ಉಪಯೋಗಿಸಲಾಗವುದು.ನಿರಂತರವಾಗಿ ಯೋಜನಾ ಸಮಿತಿ ಸಭೆಗಳಲ್ಲಿ ಈ ವಿಷಯವನ್ನೆತ್ತಿ ಹಿಡಿದು ಸಂಬಂಧಪಟ್ಟವರ ಮುಖಾಂತರ ಸರಕಾರಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ ಮರಾಠಿ ಸಂರಕ್ಷಣಾ ಸಮಿತಿಯಿಂದ ಬಂದ ಮನವಿಗಳನ್ನು ಒಗ್ಗೂಡಿಸಿ ವಿವಿಧ ಇಲಾಖೆಗಳ ಮುಖಾಂತರ ಸರಕಾರಕ್ಕೆ ತಲುಪಿಸಿ, ಕೊಟ್ಟ ಮಾತನ್ನು ಪಂಚಾಯತು ಅಧ್ಯಕ್ಷರು ಉಳಿಸಿಕೊಂಡಿದ್ದಾರೆ.ಶಾಸಕರಾದ ಓ.ರಾಜ್ಗೋಪಾಲ್ ಮುಖಾಂತರ ಮನವಿ ನೀಡಿ ಸರಕಾರದ ಬಜೆಟ್ ಅಧಿವೇಶನದಲ್ಲಿ ಇದರ ಬಗ್ಗೆ ಚಚರ್ಿಸುವರೇ ಕ್ರಮಕೈಗೊಂಡಿದ್ದಾರೆ.ಈ ವಿಷಯದಲ್ಲಿ ಪಕ್ಷಬೇಧವಿಲ್ಲದೆ ಎಸ್ಟಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಆಡಳಿತ ಸಮಿತಿಯೊಂದಿಗೆ ಕೈಜೋಡಿಸಬೇಕೆಂದು ಎಣ್ಮಕಜೆ ಬಿಜೆಪಿ ಪಂಚಾಯತು ಸಮಿತಿ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries