ಕಾಸರಗೋಡಿನ ನಿರಂತರ ಕನ್ನಡ ಚಟುವಟಿಕೆ ಇತರೆಡೆಗಳಿಗೆ ಮಾದರಿ-ಸಚಿವೆ ಉಮಾಶ್ರೀ
ಮಂಜೇಶ್ವರ: ಕನರ್ಾಟಕ ಸರಕಾರವು ಒಳ ಮತ್ತು ಗಡಿನಾಡುಗಳ ಕನ್ನಡಿಗರ ಆಶೋತ್ತರಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗಡಿನಾಡ ಕನ್ನಡಿಗೆ ಶ್ರೇಯೋಭೀವೃದ್ದಿಗೆ ಕಂಕಣಬದ್ದವಾಗಿದೆ. ಕನರ್ಾಟಕದ 14 ಅಕಾಡೆಮಿಗಳ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ವಿವಿಧ ಕ್ಷೇತ್ರಗಳ ಸಮಗ್ರ ಅಭಿವೃದ್ದಿ ಮತ್ತು ಆ ಸಂಬಂಧಿ ಚಟುವಟಿಕೆಗಳನ್ನು ಬಲಪಡಿಸುವ ಮೂಲಕ ಕನ್ನಡ ಭಾಷೆ, ಸಂಸ್ಕೃತಿಯ ಪರಂಪರೆಯನ್ನು ಕಾಯ್ದುಕೊಳ್ಳುವಲ್ಲಿ ಉತ್ಸುಕವಾಗಿದೆ ಎಂದು ಕನರ್ಾಟಕದ ಸಂಸ್ಕ್ರತಿ ಸಚಿವೆ ಉಮಾಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡಿನ ಸಾಂಸ್ಕೃತಿಕ, ಸಾಹಿತ್ತಿಕ ಸಂಸ್ಥೆಯಾದ ರಂಗಚಿನ್ನಾರಿಯ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸಹಕಾರದೊಂದಿಗೆ ಗಡಿನಾಡು ಕಾಸರಗೋಡಿನ 50 ಕನ್ನಡ ಶಾಲೆಗಳ ಎರಡು ಸಾವಿರ ವಿದ್ಯಾಥರ್ಿಗಳಿಗೆ ನಾಡಗೀತೆ ಹಾಗೂ ಭಾವಗೀತೆಗಳನ್ನು ಕಲಿಸುವ ಕಾಯರ್ಾಗಾರ "ಕನ್ನಡ ಸ್ವರ"ದ ಸಮಾರೋಪ ಸಮಾರಂಭವನ್ನು ಶನಿವಾರ ಮಂಜೇಶ್ವರದ ಕಲಾಸ್ಪರ್ಶಂ ಫೈನ್ ಆಟ್ಸರ್್ ಅಕಾಡೆಮಿ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರವು ಕಾಗದ ರಹಿತ ಕಾರ್ಯನಿರ್ವಹಣೆಯ ಮೂಲಕ ಗಮನ ಸೆಳೆಯುವ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದ್ದು, ಕನ್ನಡ ಭಾಷೆ, ಸಂಸ್ಕೃತಿ ಸಂವರ್ಧನೆಗೆ ಒತ್ತು ನೀಡುತ್ತಿದೆ. ಗಡಿನಾಡಿನ ಕನ್ನಡಿಗರನ್ನು ಲಕ್ಷ್ಯದಲ್ಲಿರಿಸಿ ಕನರ್ಾಟಕದಲ್ಲಿ ಅವರಿಗೆ ಶೇ.5ರ ಉದ್ಯೋಗ ಮೀಸಲಾತಿಯನ್ನು ಒದಗಿಸಲಾಗಿದ್ದು, ಇಲ್ಲಿಯ ನಿರಂತರ ಕನ್ನಡ ಚಟುವಟಿಕೆಗಳು ಇತರೆಡೆಗಳಿಗೆ ಮಾದರಿ ಎಂದು ತಿಳಿಸಿದರು. ಸಂಸ್ಕ್ದೃತಿ ಇಲಾಖೆಯ ಕನ್ನಡ ಕಣಜ ಜಾಲತಾಣದ ಮೂಲಕ ಜಗತ್ತಿನ ವಿವಿಧೆಡೆ ಹಂಚಿಹೋಗಿರುವ ಕನ್ನಡಿಗರನ್ನು ಒಗ್ಗೂಡಿಸಿ ವಿಚಾರ ವಿನಿಮಯ, ಪರಂಪರೆಯ ಅರಿವನ್ನು ವಿಸ್ತರಿಸುವ ಪ್ರಯತ್ನಗಳಿಂದ ಉಪಯೋಗವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ರಂಗಚಿನ್ನಾರಿಯ ಕನ್ನಡ ಸ್ವರ ಕಾರ್ಯಕ್ರಮ ಅತ್ಯಂತ ಯಶಸ್ವಿ ಯೋಜನೆಯಾಗಿದ್ದು, ನಾಡಗೀತೆ ಮತ್ತು ಭಾವಗೀತೆಗಳ ಕಲಿಕೆ ಮತ್ತು ಆ ಮೂಲಕ ಹೊಸ ತಲೆಮಾರಿಗೆ ಅದರ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿ ಮೂಡಿಬಂದಿದೆ ಎಂದು ತಿಳಿಸಿದರು. ಕುವೆಂಪುರವರು ರಚಿಸಿರುವ ನಾಡಗೀತೆ ರಾಷ್ಟ್ರದ ಇತರ ರಾಜ್ಯಗಳ ಗೀತೆಗಳಿಗಿಂತ ಭಿನ್ನವಾಗಿದ್ದು, ಕನ್ನಡ ನೆಲಕ್ಕೆ ಮಾತ್ರ ಸೀಮಿತಗೊಳ್ಳದೆ ಸಮಷ್ಠಿಯ ರಾಷ್ಟ್ರ ಗೀತೆಗೆ ಸಂವಾದಿಯಾಗಿ ಮೂಡಿಬಂದಿದೆ ಎಂದು ತಿಳಿಸಿದಸರು. ಗೋವಿಂದ ಪೈಗಳ ತಾಯೆಬಾರ ಮೊಗವ ತೋರ ಗೀತೆಯು ಆತ್ಮಾವಲೋಕನದೊಂದಿಗೆ ಹೆತ್ತ ತಾಯಿ ಮತ್ತು ಸಮಗ್ರ ಭಾರತದ ಮಾತೃ ಪರಿಕಲ್ಪನೆಯನ್ನು ಎತ್ತಿತೋರಿಸುವ ಮೂಲಕ ವಿಶಿಷ್ಟವಾಗಿ ಮೂಡಿಬಂದು ಇಂದಿನ ಯುವ ಸಮೂಹಕ್ಕೆ ದಾರಿದೀಪವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನೂರಾರು ಸಂಸ್ಕೃತಿಗಳ ನಮ್ಮ ತಾಯ್ನೆಲದಲ್ಲಿ ಇಂದು ಮಾನವೀಯತೆ, ಪ್ರೇಮ, ವಿಶ್ವಾಸವನ್ನು ಬಿತ್ತುವ ಯತ್ನಗಳು ಇಂದು ಆಗಬೇಕಿದೆ ಎಂದ ಅವರು, ನಾಡಗೀತೆ, ಭಾವಗೀತೆಗಳ ಸಹಿತ ಸಾಹಿತ್ಯ ಕ್ಷೇತ್ರ ಈ ಕೆಲಸವನ್ನು ವಿಸ್ತರಿಸಿ ಮುಂದುವರಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ವಿದ್ವಾಂಸ ನಾ.ದಾ ಶೆಟ್ಟಿ ಮಾತನಾಡಿ, ಗಡಿನಾಡು ಕಾಸರಗೋಡು ಕನ್ನಡ ಭಾಷೆ, ಸಂಸ್ಕೃತಿಗೆ ಸಂಬಂಧಿಸಿ ಇಂದು ಸವಾಲುಗಳನ್ನು ಎದುರಿಸುತ್ತಿದೆ. ಜೊತೆಗೆ ಕನ್ನಡ ಪರ ವಿವಿಧ ಆಯಾಮಗಳ ಚಟುವಟಿಕೆಗಳ ಮೂಲಕ ಇತರೆಡೆಗಳಿಗಿಂತ ವಿಭಿನ್ನವಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು. ಸಮಸ್ತ ಕನ್ನಡಿಗರ ಭಾವನಾತ್ಮಕತೆಯ ಸಂಕೇತವಾದ ನಾಡಗೀತೆ ವಿವಿಧತೆಯಲ್ಲೂ ಕನ್ನಡವನ್ನು ಒಗ್ಗಟ್ಟಿನಿಂದ ಮುನ್ನಡೆಸುವಲ್ಲಿ ಗೆದ್ದಿದೆ ಎಂದ ಅವರು, ಹೊಸ ತಲೆಮಾರಿಗೆ ಭಾಷೆ, ಸಂಸ್ಕೃತಿಗಳಿಗೆ ಸಂಬಂಧಿಸಿ ರಂಗಚಿನ್ನಾರಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳು ಸ್ತುತ್ಯರ್ಹ ಎಂದು ತಿಳಿಸಿದರು.
ಕನರ್ಾಟಕ ಸುಗಮ ಸಂಗೀತ ಕಲಾಪರಿಷತ್ತು ಗೌರವಾಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಖ್ಯಾತ ವೈದ್ಯ, ಸಾಹಿತಿ ಡಾ.ರಮಾನಂದ ಬನಾರಿ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಗಿಳಿವಿಂಡು ಕಾರ್ಯದಶರ್ಿ ಕೆ.ಆರ್.ಜಯಾನಂದ, ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಮಂಜೇಶ್ವರ ಬ್ಲಾ.ಪಂ. ಮಾಜಿ ಉಪಾಧ್ಯಕ್ಷ ಹರಿಶ್ಚಂದ್ರ ಮಂಜೇಶ್ವರ, ಕಲಾಸ್ಪರ್ಶಂ ಫೈನ್ ಆಟರ್್ ಅಕಾಡೆಮಿ ನಿದರ್ೇಶಕಿ ಜೀನ್ ಲವೀನಾ ಮೊಂತೇರೋ, ಸಂಕಬೈಲು ಸತೀಶ ಅಡಪ, ನಟ ಕಲಾಗಂಗೋತ್ರಿ ಕಿಟ್ಟಿ, ಹಿಂದೂಸ್ಥಾನಿ ಗಾಯಕಿ ಡಾ.ಸಂಪದಾ ಭಟ್ ಮರಂಬಳ್ಳಿ, ಗಾಯಕರಾದ ಪ್ರಮೋದ್ ಸಪ್ರೆ, ಕಿಶೋರ್ ಪೆರ್ಲ, ಕೋಳಾರು ಸತೀಶ್ಚಂದ್ರ ಭಂಡಾರಿ, ಕೆ.ಸತ್ಯನಾರಾಯಣ, ಗಿಳಿವಿಂಡು ಕಾರ್ಯನಿರ್ವಹಣಾಧಿಕಾರಿ ಡಾ.ಕಮಲಾಕ್ಷ ಕೆ ಮೊದಲಾದವರು ಉಪಸ್ಥಿತರಿದ್ದರು.
ರಂಗ ಚಿನ್ನಾರಿ ನಿದರ್ೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೆ.ಸತ್ಯನಾರಾಯಣ ವಂದಿಸಿದರು.
ವಿಶೇಷತೆಗಳು:
ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ 25 ಶಾಲೆಗಳ ಆಯ್ದ 600 ವಿದ್ಯಾಥರ್ಿಗಳು ಏಕಕಾಲದಲ್ಲಿ ಕುವೆಂಪುರವರು ರಚಿಸಿದ ನಾಡಗೀತೆ ಮತ್ತು ಮಂಜೇಶ್ವರ ಗೋವಿಂದ ಪೈಗಳು ರಚಿಸಿದ ತಾಯೆಬಾರ ಮೊಗವ ತೋರ ಗೀತೆಗಳನ್ನು ಹಾಡಿದರು. ಹಿನ್ನೆಲೆ ಸಂಗೀತದೊಂದಿಗೆ ಕಿಶೋರ್ ಪೆರ್ಲ ಮತ್ತು ಪ್ರಮೋದ್ ಸಪ್ರೆಯವರ ನಿದರ್ೇಶನದಲ್ಲಿ ಹೊಸ ದಾಖಲೆಯನ್ನು ದೊಡ್ಡ ಸಂಖ್ಯೆ ವಿದ್ಯಾಥರ್ಿಗಳು ಏಕಕಾಲದಲ್ಲಿ ಹಾಡುವ ಮೂಲಕ ದಾಖಲೆ ನಿಮರ್ಿಸಿದರು.
ಸಚಿವೆ ಉಮಾಶ್ರೀಯವರು 600 ವಿದ್ಯಾಥರ್ಿಗಳು ಜೊತೆಗೆ ಹಾಡುತ್ತಿರುವುದನ್ನು ಕಂಡು ಪುಳಕಿತರಾಗಿ ಕನ್ನಡಕ್ಕೆ ಸಂಬಂಧಿಸಿ ಹೊಸ ಆಲೋಚನೆ, ಚಟುವಟಿಕೆಗಳಿಗೆ ,ಮೂಲ ಪ್ರೇರಣೆಯಾಗಿ ಗಡಿನಾಡಿನ ಇಂತಹ ಕಾರ್ಯಕ್ರಮಗಳೇ ಮಾರ್ಗದಶರ್ಿ ಎಂದು ಶ್ಲಾಘಿಸಿದರು.