HEALTH TIPS

No title

                   ಸಮಗ್ರ ಯೋಜನೆಗೆ ಆದ್ಯತೆ ನೀಡುವ ಅಭಿವೃದ್ಧಿ ದೃಷ್ಟಿಕೋನ ಬೇಕು
     ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ  ಸಮಗ್ರ ಯೋಜನೆಗಳಿಗೆ ಆದ್ಯತೆ ನೀಡುವ ಅಭಿವೃದ್ಧಿ ದೃಷ್ಟಿಕೋನದೊಂದಿಗೆ ಮುನ್ನಡೆಯಬೇಕು. ಹಾಗಾದಲ್ಲಿ  ಮಾತ್ರ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿ   ಸಾಧ್ಯವಿದೆ. ಈ ನಿಟ್ಟಿನಲ್ಲಿ  ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ  ಪಂಚಾಯತ್ ಅಧ್ಯಕ್ಷ  ಎ.ಜಿ.ಸಿ. ಬಶೀರ್ ಕರೆ ನೀಡಿದ್ದಾರೆ.
   ಕಾಸರಗೋಡು ಜಿಲ್ಲಾ ಪಂಚಾಯತು ಸಭಾಂಗಣದಲ್ಲಿ  ಜಿಲ್ಲಾ  ಪಂಚಾಯತ್ನ 2018-19ನೇ ಸಾಲಿನ ವಾಷರ್ಿಕ ಯೋಜನೆ ರಚನೆಗೆ ಸಂಬಂಧಿಸಿದಂತೆ ವಕರ್ಿಂಗ್ ಗ್ರೂಪ್ನ ವಿಶೇಷ ಮಹಾಸಭೆಯನ್ನು  ಉದ್ಘಾಟಿಸಿ ಅವರು ಮಾತನಾಡಿದರು.
   ಝೀರೋ ವೇಸ್ಟ್  ಆಧಾರದಲ್ಲಿ  ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡುವ ಯೋಜನೆಗಳಿಗೆ ಮುಂದಿನ ಆಥರ್ಿಕ ವರ್ಷದಲ್ಲಿ  ವಿಶೇಷ ಆದ್ಯತೆ ಕಲ್ಪಿಸುವಂತಾಗಬೇಕು. ಇದರೊಂದಿಗೆ 2019ರಲ್ಲಿ  ಮಾಲಿನ್ಯ ಸಮಸ್ಯೆಯಿಲ್ಲದ ರೀತಿಯಲ್ಲಿ  ಜಿಲ್ಲೆಯನ್ನು  ಬದಲಾಯಿಸಬೇಕು. ಮಹಿಳೆಯರಿಗಾಗಿ ಮಾತ್ರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ  ವಿಶ್ರಾಂತಿ ಕೊಠಡಿಗಳನ್ನು  ಸ್ಥಾಪಿಸುವ ಯೋಜನೆಯು ಪರಿಗಣನೆಯಲ್ಲಿದೆ ಎಂದು ಅವರು ತಿಳಿಸಿದರು.
   ತ್ರಿಸ್ತರ ಪಂಚಾಯತ್ಗಳಲ್ಲಿ  ಒಟ್ಟಾಗಿ ಆರಂಭದಲ್ಲಿ 10ರಿಂದ 12ರಷ್ಟು  ಸ್ಥಳಗಳಲ್ಲಿ  ಇಂತಹ ಕೇಂದ್ರಗಳನ್ನು  ಸ್ಥಾಪಿಸಲು ಸಾಧ್ಯವಾಗಬೇಕು. ಕ್ರೀಡಾ ವಲಯವನ್ನು  ಉತ್ತೇಜಿಸುವುದಕ್ಕಾಗಿ ಪ್ರತಿ ಪಂಚಾಯತ್ಗಳು ಕ್ರೀಡಾಂಗಣವನ್ನು  ಹೊಂದಿರಬೇಕು. ಐಟಿಗೆ ಸಂಬಂಧಿಸಿದಂತೆ ಉದ್ಯೋಗವನ್ನು  ಮಾಡುವವರಿಗಾಗಿ ಜಿಲ್ಲೆಯಲ್ಲಿ  ಸ್ಮಾಟರ್್ ಆಫ್ ಇಂಕುಬೇಷನ್ ಸೆಂಟರ್ ಆರಂಭಿಸಲು ಸಾಧ್ಯವಾಗಿರುವುದು ಮತ್ತೊಂದು ಮಹತ್ವಪೂರ್ಣ ಹೆಜ್ಜೆಯಾಗಿದೆ ಎಂದರು.
   ಜಿಲ್ಲಾ  ಪಂಚಾಯತ್ ಉಪಾಧ್ಯಕ್ಷೆ  ಶಾಂತಮ್ಮ  ಫಿಲಿಪ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ  ಸ್ಥಾಯೀ ಸಮಿತಿಗಳ ಅಧ್ಯಕ್ಷ ಫರೀದಾ ಝಕೀರ್ ಅಹಮ್ಮದ್, ಶಾನವಾಸ್ ಪಾದೂರು, ನ್ಯಾಯವಾದಿ ಎ.ಪಿ.ಉಷಾ, ಹಷರ್ಾದ್ ವಕರ್ಾಡಿ, ಜಿಲ್ಲಾ  ಪಂಚಾಯತ್ ಕಾರ್ಯದಶರ್ಿ ಪಿ.ನಂದಕುಮಾರ್, ಜಿಲ್ಲಾ  ಪಂಚಾಯತ್ ಸದಸ್ಯರು, ಬ್ಲಾಕ್ ಪಂಚಾಯತ್ ಅಧ್ಯಕ್ಷರು, ವಕರ್ಿಂಗ್ ಗ್ರೂಪ್ ಸದಸ್ಯರು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
   ಅಭಿವೃದ್ದಿ ನಿಧಿ ಮೀಸಲು : ಜಿಲ್ಲಾ  ಪಂಚಾಯತ್ನ 2018-19ನೇ ವಾಷರ್ಿಕ ಯೋಜನೆಗಳಿಗಾಗಿ ರಾಜ್ಯ ಬಜೆಟ್ನಲ್ಲಿ  ಅಭಿವೃದ್ಧಿ ನಿಧಿಯಾಗಿ 35.81 ಕೋಟಿ ರೂ., ನಿರ್ವಹಣಾ ನಿಧಿಯಾಗಿ 39.99 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಬಗ್ಗೆ  ಸಭೆಯಲ್ಲಿ  ಅಂಕಿ ಅಂಶಗಳನ್ನು  ತಿಳಿಸಲಾಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries