HEALTH TIPS

No title

                    ಸಹಕಾರಿ ಸಮ್ಮೇಳನ -
ದ್ವಜಸ್ತಂಬ ಜಾಥಾಕ್ಕೆ ಚಾಲನೆ
       ಮಂಜೇಶ್ವರ: ದೇಶದಲ್ಲಿ ಸಹಕಾರಿರಂಗವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ನೋಟು ನಿಷೇಧದಿಂದ ಸಹಕಾರಿರಂಗವನ್ನು ಅವಗಣಿಸಲ್ಪಟ್ಟಾಗ ನಾಡಿನ ಸಮಸ್ತ ಸಹಕಾರಿಗಳ ಪರಸ್ಪರ ಸಹಕಾರದಿಂದ ಸಮಸ್ಯೆಯನ್ನು ಮೆಟ್ಟಿ ನಿಂತು ಮುನ್ನಡೆಯಲು ಸಾಧ್ಯವಾಗಿದೆ.ಪ್ರಸ್ತುತ ಸಹಕಾರಿರಂಗದ ಸಮಗ್ರ ಅಭ್ಯುದಯಕ್ಕೆ ಪಕ್ವವಾದ ಸಹಕಾರಿ ನಿಯಮ ರೂಪಿಸುವ ಅಗತ್ಯತೆ ಇದೆ ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್ ಕುಞಂಬು ಹೇಳಿದರು.
  ಮಂಜೇಶ್ವರ ಹೊಸಂಗಡಿ ಆಲ್.ಆರ್.ಗುರು ವೇದಿಕೆಯಲ್ಲಿ ಗುರುವಾರ ನಡೆದ ಸಹಕಾರಿ ಸಮ್ಮೇಳನದ ಪೂರ್ವಭಾವಿಯಾದ ಧ್ವಜಸ್ಥಂಬ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಕಣ್ಣೂರಿನಲ್ಲಿ ಫೆ.10 ರಿಂದ ಆರಂಭವಾಗಲಿರುವ ಸಹಕಾರಿ ಸಮ್ಮೇಳನವು ರಂಗದ ಏಳಿಗೆಗೆ ಕಾರಣವಾಗಬಲ್ಲ ಏಕರೂಪ ಸಹಕಾರಿ ನಿಮಯವನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು. ದ.ಭಾರತದ ವಿವಿಧ ರಾಜ್ಯಗಳ ಸಹಕಾರಿ ಇಲಾಖೆ ಸಚಿವರು ಅಧಿಕಾರಿಗಳ ಅಭಿಪ್ರಾಯವನ್ನು ಸಂಗ್ರಹಿಸಿ ಸಂಬಂಧಪಟ್ಟವರಿಗೆ ನೀಡಲಾಗುವುದೆಂದು ಅವರು ತಿಳಿಸಿದರು.
  ಈ ಸಂದರ್ಭ ಮಾಜಿ ಶಾಸಕ ಸಿ.ಎಚ್ ಕುಞಂಬು ಜಾಥಾ ನಾಯಕ ಹರೀಂದ್ರನ್ ಅವರಿಗೆ ಧ್ವಜವನ್ನು ಹಸ್ತಾಂತರಿಸಿದರು. ಬ್ಲಾ.ಪಂ ಸದಸ್ಯ ಕೆ.ಆರ್ಜಯಾನಂದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಾಥಾ ಸಹ ನಾಯಕ ಮುಂಡೇರಿ ಗಂಗಾಧರನ್, ವಿ.ಶಶೀಂದ್ರನ್, ಹಮೀದ್ ವಿ.ಎ, ಬಿ.ಯಂ ಅನಂತ, ಯಂ.ಸಂಜೀವ ಶೆಟ್ಟಿ, ಎಸ್.ಜೆ ಸೋಮಶೇಖರ, ಬೇಬಿ ಶೆಟ್ಟಿ, ವಿ.ಚಂದ್ರನ್, ಅನಿಲ್ ಕುಮಾರ್ ವಿಲ್ಸನ್ ಮೊದಲಾದವರು ಉಪಸ್ಥಿತರಿದ್ದರು. ಕಾಸರಗೋಡು ಸಹಕಾರಿ ಸಂಘದ ಉಪ ನೋಂದಣಾಧಿಕಾರಿ ಪಿ.ರಹೀಂ ಸ್ವಾಗತಿಸಿ, ರಾಮಕೃಷ್ಣ ಕಡಂಬಾರು ಕಾರ್ಯಕ್ರಮ ನಿರೂಪಿಸಿದರು.ಸಂಚಾಲಕ ಮನೋಜ್ಕುಮಾರ್ ವಂದಿಸಿದರು.50 ದ್ವಿಚಕ್ರ ವಾಹನಗಳ ಮೂಲಕ ಜಾಥಾವು ಕಾಸರಗೋಡಿಗೆ ಸಾಗಿತು.
 
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries