HEALTH TIPS

No title

                ಮಧೂರಿನಲ್ಲಿ ಕಾವ್ಯಶಿಲ್ಪದ ಕವಿ ಕಾವ್ಯ ಸಂವಾದ
   ಮಧೂರು: ವಿಶ್ವಕರ್ಮ ಸಾಹಿತ್ಯ ದರ್ಶನದ ವತಿಯಿಂದ ಇತ್ತೀಚೆಗೆ ಬಿಡುಗಡೆಗೊಂಡ ಕಾವ್ಯಶಿಲ್ಪ ಎಂಬ ಕವನ ಸಂಕಲನದ ಕವಿ ಕಾವ್ಯ ಸಂವಾದ ಕಾರ್ಯಕ್ರಮ ಮಧೂರಿನ ಗುರುಕೃಪಾ ಸಭಾ ವೇದಿಕೆಯಲ್ಲಿ ಜರಗಿತು.
  ಈ ಸಂದರ್ಭದಲ್ಲಿ ಕವಿ,ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಕವಿತೆ ಕಟ್ಟುವ ಕ್ರಿಯೆಯಲ್ಲ, ಅದು ಸಹಜವಾಗಿ ಹುಟ್ಟುವ ಕ್ರಿಯೆ. ಕವಿತೆಗಳು ಕವಿಯ ಭಾವನೆಯ ಒಳಗಿನ ಮೂರ್ತರೂಪ. ಕವಿಗಳು ಕೃತಕೃತೆಗೆ ತಲೆಬಾಗದೆ ಸಮಕಾಲೀನ ಸಂದರ್ಭಕ್ಕೆ ಸಾಕ್ಷಿಯಾಗಬೇಕು ಎಂದರು.
  ಕಾವ್ಯಶಿಲ್ಪ ಕವನ ಸಂಕಲನ ವಿಶ್ವಕರ್ಮ ಕುಲದ ಉದಯೋನ್ಮುಖ ಕವಿಗಳ ಸಾಧನೆಗೊಂದು ಸಾಕ್ಷಿಯಾಗಿ ಸಾರಸ್ವತ ಲೋಕಕ್ಕೆ ಸಮರ್ಪಣೆಗೊಂಡಿರುವುದು ಶ್ಲಾಘನೀಯ ಎಂದರು.
 ಈ ಸಂದರ್ಭದಲ್ಲಿ ದೇವರಾಜ್ ಆಚಾರ್ಯ, ಚಿತ್ರಕಲಾ,ಕಿರಣ್ ಆಚಾರ್ಯ ಮಧೂರು,ಅಕ್ಷಿತಾ ಮಾಯಿಪ್ಪಾಡಿ,ಲತಾ ಬನಾರಿ, ಚಿದಾನಂದ ಹೆರೂರು,ದೀಕ್ಷಿತಾ ಹೊಸಂಗಡಿ, ಜಯಲಕ್ಷ್ಮಿ ಕೂಡ್ಲು, ಮನೋಜ್ ಅಟ್ಟೆಗೋಳಿ,ಕುಸುಮ ಕೂಡ್ಲು ತಮ್ಮ ಸ್ವರಚಿತ ಕವನ ವಾಚನಗೈದರು. ಸುಬ್ರಹ್ಮಣ್ಯ ಆಚಾರ್ಯ ಮಾಯಿಪ್ಪಾಡಿ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ನಾಟ್ಯಚಾರ್ಯ ನವೀನ್ ಆಚಾರ್ಯ ಇತ್ತಿಕಾಲು ಮೂಲೆ ಹಾಗೂ ಯುವ ಪ್ರತಿಭೆ ಯತೀಕ್ರಾಜ್ ಆಚಾರ್ಯ ಅವರನ್ನು ವಿಶ್ವಕರ್ಮ ಸಾಧಕ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.ಬಳಿಕ ವಿಶ್ವದರ್ಶನ ಕಾರ್ಯಕ್ರಮದ ಅವಲೋಕನ ಸಭೆ ಹಾಗೂ ಲೆಕ್ಕಪತ್ರ ಮಂಡನೆ ನಡೆಯಿತು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries