HEALTH TIPS

No title

           ಹೊಸ ತಲೆಮಾರಿಗೆ ಮಾಗ್ದರ್ಶನ ಅಗತ್ಯ-ಸೀತಾರಾಮ ಭರಣ್ಯ
    ಮಂಜೇಶ್ವರ: ವಿಶ್ವ ವ್ಯಾಪಕ ವಿಸ್ತಾರತೆಯ ಸನಾತನ ಹಿಂದೂ ಧರ್ಮ ಸಾಗರದಂತೆ ವಿಶಾಲವಾಗಿ ಅವಿನಾಶಿಯಾಗಿದೆ. ಸನಾತನ ಧರ್ಮದ ಪರಂಪರೆ, ವಿಶ್ವಾಸ, ಪರಂಪರೆಯನ್ನು ಮುನ್ನಡೆಸುವಲ್ಲಿ ಹೊಸ ತಲೆಮಾರಿಗೆ ಮಾರ್ಗದರ್ಶನ ಕ್ರಿಯಾತ್ಮಕವಾಗಿ ಆಗಬೇಕು ಎಂದು ಅಖಿಲ ಭಾರತ ಹಿಂದೂ ಸಾಮ್ರಾಜ್ಯ ಶಕ್ತಿ ಚಿಕ್ಕಮಗಳೂರಿನ ಕಾರ್ಯವಾಹ್ ಸೀತಾರಾಮ ಭರಣ್ಯ ತಿಳಿಸಿದರು.
   ಉದ್ಯಾವರ ಸಮೀಪದ ತೂಮಿನಾಡು ಶ್ರೀಮಹಾಕಾಳಿ ಭಜನಾ ಮಂದಿರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ನಡೆದ ಧಾಮರ್ಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
  ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ ಮಾತನಾಡಿ,ಸನಾತನ ನಂಬಿಕೆ, ಜೀವನಪದ್ದತಿಯನ್ನು ಉಳಿಸಿ ಬೆಳೆಸಿದರಷ್ಟೆ ಶಾಂತಿಯುತ ಸಮಾಜ ನಿಮರ್ಾಣ ಸಾಧ್ಯ. ಹೊಸ ತಲೆಮಾರಿಗೆ ಆದರ್ಶಯುತ ಬಾಳನ್ನು ನಿಮರ್ಿಸುವಲ್ಲಿ ನಂಬಿಕೆ, ಆಚರಣೆಗಳ ಹಿನ್ನೆಲೆಯ ಜೀವನ ಪಥದ ಮಾರ್ಗದರ್ಶನ ನೀಡಬೇಕು. ಭಜನೆ, ಭಗವದರ್ಚನೆಯ ಜೀವನ ರೀತಿಯನ್ನು ಅಳವಡಿಸುವ ಮಾರ್ಗದರ್ಶನ ಲಭ್ಯವಾಗಬೇಕು ಎಂದು ತಿಳಿಸಿದರು. ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಆಶಾಜ್ಯೋತಿ ರೈ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶ್ರೀಮದ್ ಅನಂತೇಶ್ವರ ಕ್ಷೇತ್ರದ ಉಪಾಧ್ಯಕ್ಷ ಛತ್ರಪತಿ ಫ್ರಭು, ವಿ.ಹಿಂ.ಪ ಜಿಲ್ಲಾ ಅಧ್ಯಕ್ಷ ಅಂಗಾರ ಶ್ರೀಪಾದ , ವಿವಿಧ ರಂಗಗಳ ಪ್ರಮುಖರಾದ ಚಂದ್ರಹಾಸ ಉಳ್ಳಾಲ್,ವಿಶ್ವನಾಥ ಪೊಯ್ಯೆಕಂಡ, ಬಾಬು ಕಿನ್ಯಾ, ದೇವದಾಸ ಶೆಟ್ಟಿ, ಧನ್ಯ ಬಿ.ಉಚ್ಚಿಲ್, ಸವಿತಾಕೃಷ್ಣ ಉದಯನಗರ, ರಾಜಾ ಬೆಳ್ಚಪ್ಪಾಡ ಉದ್ಯಾವರ, ಶಿಲ್ಪಿ ರಾಧಾಕೃಷ್ಣ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಹರೀಶ್ ಶೆಟ್ಟಿ ಮಾಡ ಸ್ವಾಗತಿಸಿ, ಶ್ರೀಕೃಷ್ಣ ಶಿವಕೃಪಾ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವದಾಸ ಶೆಟ್ಟಿ ವಂದಿಸಿದರು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಶಂ.ನಾ ಅಡಿಗ ಕುಂಬಳೆಯವರಿಂದ ಹರಿಕಥಾ ಸಂಕೀರ್ತನೆ ಪ್ರಸ್ತುತಗೊಂಡಿತು. ಬುಧವಾರ ಬ್ರಹ್ಮಕಲಶೋತ್ಸವ ನಡೆಯಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries