HEALTH TIPS

No title

           ಪರಕ್ಕಿಲ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ :ಭಕ್ತ ಸಾಗರ
    ಮಧೂರು: ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ನಿಮಿತ್ತ ದೇವಸ್ಥಾನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಇದೇ ವೇಳೆ ವಿವಿಧೆಡೆಯಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯುತ್ತಿದ್ದು, ಉಗ್ರಾಣ ತುಂಬುತ್ತಿದೆ. ಫೆ.14 ರಿಂದ ಆರಂಭಗೊಂಡ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆ.19 ರಂದು ಸಂಪನ್ನಗೊಳ್ಳಲಿದೆ. ಬ್ರಹ್ಮಕಲಶೋತ್ಸವದ ನಿಮಿತ್ತ ಕೈಗೊಂಡಿರುವ ವ್ಯವಸ್ಥೆ ಅದ್ಭುತವಾಗಿದೆ. ಕಾರ್ಯಕರ್ತರ ಅಚ್ಚುಕಟ್ಟುತನದಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
   ಫೆ.16 ರಂದು ಬೆಳಗ್ಗೆ ಗಣಪತಿ ಹವನ, ಪ್ರತಿಷ್ಠಾ ದಿನದ ಅಂಗವಾಗಿ ನವಕಾಭಿಷೇಕ, ಪಾರೆಕಟ್ಟೆಯ ಶ್ರೀ ಮುತ್ತಪ್ಪನ್ ಮಹಿಳಾ ಭಜನಾ ಸಂಘದಿಂದ ಭಜನೆ, ತೆರುವತ್ತ್ ಶ್ರೀ ಚೀರುಂಬಾ ಭಗವತಿ ಮಹಿಳಾ ಭಜನಾ ಸಂಘದಿಂದ ನೃತ್ಯ ಭಜನೆ, ಮಧ್ಯಾಹ್ನ ಅಂಕುರ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಕೌಶಿಕ್ ರಾಮಕೃಷ್ಣ ಶ್ರಾವಣಕೆರೆ ಅವರಿಂದ ಶಾಸ್ತ್ರೀಯ ಸಂಗೀತ, ಕಲಾರತ್ನ ಶಂನಾಡಿಗ ಕುಂಬಳೆ ಅವರಿಂದ ಹರಿಕಥಾ ಸತ್ಸಂಗ, ಸಂಜೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ಅಮೃತ ಕಲಾ ಕ್ಷೇತ್ರ ಕೂಡ್ಲು ಅವರಿಂದ ಭರತನಾಟ್ಯ, ಕಾಸರಗೋಡು ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳಿಂದ ಯಕ್ಷಗಾನ, ಅಂಕುರ ಪೂಜೆ, ರಾತ್ರಿ ಪೂಜೆ ನಡೆಯಿತು.
    ಇಂದಿನ ಕಾರ್ಯಕ್ರಮ :
  ಫೆ.17 ರಂದು ಬೆಳಗ್ಗೆ 7 ಕ್ಕೆ ಗಣಪತಿ ಹವನ, ತತ್ವ ಹೋಮ, ತತ್ವ ಕಲಶ, ಮಂಟಪ ಸಂಸ್ಕಾರ, 9 ರಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಮಧೂರು ಅವರಿಂದ ಭಜನೆ, 10 ರಿಂದ ಚೇನಕ್ಕೋಡು ಶ್ರೀ ರಕ್ತೇಶ್ವರಿ ಭಜನಾ ಸಂಘದಿಂದ ಭಜನೆ, 11 ರಿಂದ ಶ್ರಾವಣಕೆರೆ ಶ್ರೀ ದುಗರ್ಾಪರಮೇಶ್ವರೀ ಮಹಿಳಾ ಭಜನಾ ಸಂಘದಿಂದ ಭಜನೆ, ಮಧ್ಯಾಹ್ನ 12.30 ರಿಂದ  ಅಂಕುರ ಪೂಜೆ, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ, ನಾಗಸುಧಾ ಮಧೂರು ಅವರಿಂದ ಭಜನಾಮೃತಂ, 2.30 ರಿಂದ ಶ್ರೀ ಬೊಡ್ಡಜ್ಜ ಯಕ್ಷಭಾರತಿ ಮಧೂರು ಇವರಿಂದ ಯಕ್ಷಗಾನ ಕೂಟ, ಸಂಜೆ 5 ರಿಂದ ಪುಳ್ಕೂರು ಶ್ರೀ ಮಹಾದೇವ ಭಜನಾ ಸಂಘ ಶಿರಿಬಾಗಿಲು ಅವರಿಂದ ಭಜನೆ, 6 ರಿಂದ ಮಲಯಾಳ ನಾಟಕ, ರಾತ್ರಿ 9 ರಿಂದ ಆದರ್ಶ ಯುವಕ ಸಂಘ ಉಳಿಯತ್ತಡ್ಕ ಅವರಿಂದ ನೃತ್ಯ ವೈಭವ, ರಾತ್ರಿ 8 ಕ್ಕೆ ಅಂಕುರ ಪೂಜೆ, ರಾತ್ರಿ ಪೂಜೆ ಜರಗಲಿದೆ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries