HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಮಹಿಳೆಯರ ಸ್ವಾವಲಂಬನೆಗೆ ಆಥರ್ಿಕ ನೆರವು
    ಕಾಸರಗೋಡು: ಸಮಾಜದಲ್ಲಿ  ಆಥರ್ಿಕವಾಗಿ ಹಿಂದುಳಿದ ಮಹಿಳೆಯರ ಸಬಲೀಕರಣದ ಉದ್ದೇಶದೊಂದಿಗೆ ಮಹಿಳೆಯರು ಆರಂಭಿಸುವ ಸ್ವಯಂ ಉದ್ಯೋಗ ಘಟಕಗಳನ್ನು  ಪ್ರೋತ್ಸಾಹಿಸಲು, ಪರಿಪಾಲಿಸಲು ಸರಳವಾದ ವ್ಯವಸ್ಥೆಗಳೊಂದಿಗೆ ಮಹಿಳಾ ಕಾಪರ್ೋರೇಶನ್ ಹಾಗೂ ಕೇರಳ ಸರಕಾರದ ಆಥರ್ಿಕ ಸಹಾಯದೊಂದಿಗೆ ಕಾಪರ್ೋರೇಶನ್ ಸ್ವಯಂ ಉದ್ಯೋಗ ಸಾಲ, ಮೈಕ್ರೋ ಫೈನಾನ್ಸ್  ಸಾಲ, ಶಿಕ್ಷಣ ಸಾಲ ಮೊದಲಾದವುಗಳನ್ನು  ಮಂಜೂರು ಮಾಡುತ್ತಿದೆ.
   ರಾಜ್ಯದ ಇಡೀ ಸ್ತ್ರೀ ಸಮಾಜಕ್ಕೆ ಈ ಯೋಜನೆಗಳ ಕುರಿತು ತಿಳುವಳಿಕೆ ಮೂಡಿಸಲು ತೀರಾ ಸರಳವಾದ ರೀತಿಯಲ್ಲಿ  ಸಾಲ ಧನಸಹಾಯ ಮಂಜೂರುಗೊಳಿಸಲು ಕೇರಳದ ಎಲ್ಲಾ  ಜಿಲ್ಲೆಗಳಲ್ಲಿ  ಕಾಪರ್ೋರೇಶನ್ ಸಾಲ ಮೇಳಗಳನ್ನು  ಏರ್ಪಡಿಸುವುದರ ಅಂಗವಾಗಿ ರಾಜ್ಯ ಮಹಿಳಾ ಕಲ್ಯಾಣ ನಿಗಮವು ಆಯೋಜಿಸಿದ ಸ್ವಯಂ ಉದ್ಯೋಗ ಸಾಲ ಮೇಳದ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆಯನ್ನು  ಮಹಿಳಾ ಕಲ್ಯಾಣ ನಿಗಮದ ಅಧ್ಯಕ್ಷೆ  ಕೆ.ಎಸ್.ಸಲೀಖಾ ನೆರವೇರಿಸಿದರು.
   ಈ ಸಂದರ್ಭ ಮಹಿಳೆಯರಿಗೆ ನಾನಾ ವಲಯಗಳಲ್ಲಿ  ಸ್ವಯಂ ಉದ್ಯೋಗ ಘಟಕಗಳನ್ನು  ಆರಂಭಿಸಲು 50 ಲಕ್ಷ ರೂಪಾಯಿಗೂ ಹೆಚ್ಚು  ಹಣ ವಿತರಿಸಲಾಯಿತು. ವಿವಿಧ ರಾಷ್ಟ್ರೀಯ ಹಣಕಾಸು ಕಾಪರ್ೋರೇಶನ್ಗಳ ಹಾಗೂ ರಾಜ್ಯ ಸರಕಾರದ ಅನುದಾನ ಉಪಯೋಗಿಸಿ ರಾಜ್ಯದಲ್ಲಿ  ಆಥರ್ಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ, ಹಿಂದುಳಿದ, ಪರಿಶಿಷ್ಟ  ಜಾತಿ, ಜನರಲ್ ವಿಭಾಗಕ್ಕೊಳಪಟ್ಟ  ಮಹಿಳೆಯರಿಗೆ ಕನಿಷ್ಠ  ಬಡ್ಡಿದರದಲ್ಲಿ  ಕುಟುಂಬಶ್ರೀ ಮೂಲಕ ಸ್ವಯಂ ಉದ್ಯೋಗ ಸಾಲ ನೀಡಲಾಗುತ್ತಿದೆ. ಇದೇ ವೇಳೆ ನಾನಾ ಯೋಜನೆಗಳಲ್ಲಿ  500ರಷ್ಟು  ಅಜರ್ಿಗಳನ್ನು  ಸಾಲ ಮೇಳದಲ್ಲಿ  ವಿತರಿಸಲಾಯಿತು.
  ಪಿಲಿಕ್ಕೋಡಿನಲ್ಲಿ  ಜರಗಿದ ಈ ಸಮಾರಂ`ದಲ್ಲಿ  ನೀಲೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ  ವಿ.ಪಿ.ಜಾನಕಿ ಅಧ್ಯಕ್ಷತೆ ವಹಿಸಿದ್ದರು. ವಲಿಯಪರಂಬ ಗ್ರಾಮ ಪಂಚಾಯತ್ ಅಧ್ಯಕ್ಷ  ಅಬ್ದುಲ್ ಜಬ್ಬಾರ್, ಜಿಲ್ಲಾ  ಪಂಚಾಯತ್ ಸದಸ್ಯೆ ಪಿ.ಸಿ.ಸುಬೈದಾ, ನೀಲೇಶ್ವರ ಬ್ಲಾಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಕುಂಞಿರಾಮನ್, ಬಿಂದು ಕೆ.ವಿ., ಚೆರುವತ್ತೂರು ಗ್ರಾಮ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ  ಕುಂಞಿರಾಮನ್, ನೀಲೇಶ್ವರ ಬ್ಲಾಕ್ ಪಂ. ಸದಸ್ಯೆಯರಾದ ಸಾಹಿದಾ ಸಫರುಲ್ಲ, ಸುಮಿತ್ರಾ ಯು., ಮುನೀರಾ, ಪಿಲಿಕ್ಕೋಡ್ ಗ್ರಾಮ ಪಂ. ಸದಸ್ಯ ಟಿ.ಪಿ.ರಾಘವನ್, ಹೇಮಪಾಲನ್, ಪದ್ಮನಾಭನ್ ಮೊದಲಾದವರು ಉಪಸ್ಥಿತರಿದ್ದರು.
   ಮಹಿಳಾ ಕಲ್ಯಾಣ ಕಾಪರ್ೋರೇಶನ್ ವಲಯ ಪ್ರಬಂಧಕ ಫೈಝಲ್ ಮುನೀರ್ ಸ್ವಾಗತಿಸಿ, ಮಹಿಳಾ ಕಲ್ಯಾಣ ನಿಗಮದ ಆಡಳಿತ ನಿದರ್ೇಶಕಿ ವಿ.ಸಿ.ಬಿಂದು ವಂದಿಸಿದರು. 750ಕ್ಕೂ ಹೆಚ್ಚು  ಮಂದಿ ಕಾರ್ಯಕ್ರಮದಲ್ಲಿ  ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries