HEALTH TIPS

No title

                  ಸಂಸ್ಕೃತ ಭಾಷೆ ಬೆಳೆಯುತ್ತಿದೆ-ಬಿಬೇಕ್ ಡೇಬ್ರಾಯ್
       ಬಳ್ಳಪದವು ಮಾಧವ ಉಪಾಧ್ಯಾಯರಿಗೆ ತಂತ್ರ ಪೂಜಾ ಕೈಂಕರ್ಯಕ್ಕೆ ಮಹಾಮಹೋಪಾಧ್ಯಾಯ ಬಿರುದು
   ಬದಿಯಡ್ಕ: : ಸಂಸ್ಕೃತ ಭಾಷಿಗರು ಕಲ್ಪನೆಗಿಂತ ಹೆಚ್ಚಾಗಿದ್ದಾರೆ. ಹಿಂದಿನ ಭಾಷಾ ಜನಗಣತಿ ಆಧಾರದಲ್ಲಿ ನೋಡಿದರೆ ಸಂಸ್ಕೃತ ಭಾಷಿಗರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಆಥರ್ಿಕ ಸಲಹಾ ಸಮಿತಿ ಅಧ್ಯಕ್ಷ ಬಿಬೇಕ್ ಡೇಬ್ರಾಯ್ ಅಭಿಪ್ರಾಯಪಟ್ಟರು.
    ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ಸೋಮವಾರ ನಡೆದ ಘಟಿಕೋತ್ಸವವನ್ನು ಉದ್ದೇಶಿಸಿ ಅವರು ಮಾತನಾಡಿದರು.
    2011 ರ ಜನಗಣತಿಯಲ್ಲಿ ಭಾಷಾ ವೈವಿಧ್ಯತೆಯನ್ನು ಪರಿಗಣಿಸಲಾಗಿಲ್ಲ. ಹಿಂದಿನ ನಡೆದ ಭಾಷಾ ಜನಗಣತಿ ಆಧಾರದಲ್ಲಿ ಸಂಸ್ಕೃತ ಭಾಷಿಗರ ಒಟ್ಟಾರೆ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ ಎಂದು ಅವರು ಅಭಿಪ್ರಾಯಪಟ್ಟರು. 1971 ರಲ್ಲಿ ಸಂಸ್ಕೃತ ಮಾತೃ ಭಾಷಿಗರ ಸಂಖ್ಯೆ 2,212, 1981ರಲ್ಲಿ 6,106, 1991 ರಲ್ಲಿ ಸಂಸ್ಕೃತ ಮಾತೃ ಭಾಷಿಗರ ಸಂಖ್ಯೆ 49,736 ರಷ್ಟಿದ್ದು, 2001 ರಲ್ಲಿ 14,135 ಎಂದಿದೆ. ಭಾರತದೇಶದಲ್ಲಿ ಸಂಸ್ಕೃತ ಮಾತೃ ಭಾಷಿಗರ ಒಟ್ಟಾರೆ ಜನಸಂಖ್ಯೆ ಮತ್ತೂ ಹೆಚ್ಚಾಗಿದೆ.ಆದರೆ ಜನಗಣತಿಯು ಸಂಸ್ಕೃತ ಭಾಷಿಗರನ್ನು ತಿಳಿಸಲ್ಪಡುವ ಪೂರ್ಣ ಪ್ರಮಾಣದ ಮಾಪಕವಾಗಿಲ್ಲ ಎಂದರು.
  ದೇಶದಲ್ಲಿ ಬಹುಭಾಷೆಗಳಿದ್ದು, ಭಾರತೀಯನು ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಮಾತನಾಡಬಲ್ಲರು ಎಂದ ಅವರು, ಸಂಸ್ಕೃತ ಭಾಷೆ ಪ್ರಥಮ ಬಾಷೆಯಾಗಿ, ಮಾತೃ ಭಾಷೆಯಾಗಿರುವುದು ಅತ್ಯಪೂರ್ವ. ಆದರೆ ತೃತೀಯ ಮತ್ತು ಚತುರ್ಥ ಭಾಷೆಯಾಗಿ ಚಾಲ್ತಿಯಲ್ಲಿದೆ ಎಂದು ಅವರು ಹೇಳಿದರು.ಸಂಸ್ಕೃತವು ಅಳಿವಿನಂಚಿನಲ್ಲಿರುವ ಭಾಷೆ ಎಂಬುದು ತಪ್ಪುಕಲ್ಪನೆಯಾಗಿದೆ. ಕೆಲವರು ಸಂಸ್ಕೃತವನ್ನು ಸತ್ತ ಭಾಷೆ ಎಂದು ಪರಿಗಣಿಸುತ್ತಾರೆ ಆದರೆ ಯಥಾರ್ಥವಾಗಿ ಸತ್ತ ಭಾಷೆ ಎಂಬ ಪದಕ್ಕೆ ಸರಿಯಾದ ವ್ಯಾಖ್ಯಾನವಿಲ್ಲ ಎಂದು ರಾಯ್ ಹೇಳಿದರು. ಗಣತಿ ಆಧಾರದಲ್ಲಿ ಸಂಸ್ಕೃತ ಭಾಷಿಗರನ್ನು ಗುರುತಿಸುವ ಮಾದರಿ ಸರಿಯಾಗಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
  ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಕುಲಪತಿ, ಭಾರತದ ಮಾಜಿ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಮಾತನಾಡಿ ದೇಶದ 17 ಮುಖ್ಯ ಸಂಸ್ಕೃತ ಸಂಸ್ಥೆಗಳು ಸ್ವ-ಸಹಾಯದೊಂದಿಗೆ ಮುಂದೆ ಬರಬೇಕಿದೆ. ತದನಂತರ ಸರಕಾರದ ಸಲಹೆ ಹಾಗೂ ಅನುದಾನವನ್ನು ಪಡೆಯಬೇಕಿದೆ ಎಂದು ತಿಳಿಸಿದರು. ಸಂಸ್ಕೃತ ಪಂಡಿತರು ಒಟ್ಟು ಸೇರದ ಹೊರತು ಭಾಷಾ ಅಂಕಿ ತಂತ್ರಜ್ಞಾನದ ಪರಿಣಾಮಕಾರಿ ಉಪಯೋಗ ಹಾಗೂ ಸದ್ಬಳಕೆ ಸಾಧ್ಯವಾಗದು ಎಂದು ತಿಳಿಸಿದರು. ಪಂಡಿತರು ಪ್ರಾಚೀನ ಸಂಸ್ಕೃತ ಗ್ರಂಥಗಳನ್ನು ಪ್ರಸ್ತುತ ಕಾಲಘಟ್ಟದಲ್ಲಿ ಜೌಚಿತ್ಯಪೂರ್ಣವನ್ನಾಗಿಸಿ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕಿದೆ ಎಂದರು.
   ಈ ಸಂದರ್ಭ ಕಾಸರಗೋಡು ಬದಿಯಡ್ಕದ ಬಳ್ಳಪದವು ಮಾಧವ ಉಪಾಧ್ಯಾಯರ ತಂತ್ರ ಪೂಜಾ ಕೈಂಕರ್ಯಕ್ಕೆ ಮಹಾಮಹೋಪಾಧ್ಯಾಯ ಬಿರುದನ್ನು ನೀಡಿ ಗೌರವಿಸಲಾಯಿತು. ಆಧ್ಯಾತ್ಮ ಲೇಖಕ  ಭಾಷ್ಯಂ, ವಾಗ್ಮಿ ಸಲಕಾ ರಘುನಾಥ ಶರ್ಮ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಭಾಜನರಾದರು.ದಕ್ಷ ಪೋಲಿಸ್ ಅಧಿಕಾರಿಯಾಗಿ ನಿವೃತ್ತಿ ಹೊಂದಿ ಸಂಸ್ಕೃತ ಲೇಖಕರಾದ ಕೆ.ಅರವಿಂದರಾವ್, ವೇದ ಪಂಡಿತ ಮರಿ ಕೃಷ್ಣ ರೆಡ್ಡಿಯವರಿಗೆ ವಾಚಸ್ಪತಿ ಬಿರುದು ನೀಡಿ ಗೌರವಿಸಲಾಯಿತು. ಉಪಕುಲಪತಿ ವಿ.ಮರಳೀಧರ ಶರ್ಮ ವಾಷರ್ಿಕ ವರದಿ ವಾಚಿಸಿದರು.ಕುಲಸಚಿವ ಪಿ.ಸತ್ಯನಾರಾಯಣರವರು 46 ಮಂದಿ ಪಿ.ಎಚ್ಡಿ ಪದವಿಧರರಿಗೆ, 69 ಮಂದಿ ಎಂ.ಫಿಲ್ ಸಂಸ್ಕೃತ ವಿದ್ಯಾಥರ್ಿಗಳಿಗೆ ಪದವಿ ಪ್ರದಾನ ಮಾಡಿದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries