HEALTH TIPS

No title

                   ಯೋಗಿಗಳು ಪರಿಧೀಭೂತರಾದಾಗ ಸಾಮಾಜಿಕ ಶ್ರೇಯ ಲಭ್ಯವಾಗುತ್ತದೆ-ವಿ.ಗಣೇಶ್ ವಾಸುದೇವ ಜೋಗಳೇಕರ್
                             ಕೊಂಡೆವೂರಿನಲ್ಲಿ ನಕ್ಷತ್ರೇಷ್ಟಿ ಪೂಣರ್ಾಹುತಿ-
   ಉಪ್ಪಳ: ಯಾರಿಗೆ ಎಷ್ಟು ಆವಶ್ಯವೋ ಅಷ್ಟು ಆಹಾರ ಬಳಕೆಯಾಗಬೇಕು. ಮಿತಿಗಿಂತ ಅಧಿಕ ಆಹಾರ ಬಳಕೆ ಅಸಮತೋಲನಕ್ಕೆ ಕಾರಣವಾಗುತ್ತದೆ. ಸಂಪತ್ತು ಕೂಡಾ ಮಿತಿಯಷ್ಟೆ ಬಳಕೆಯಾಗಬೇಕೆಂಬುದು ಭಾರತೀಯ ಪ್ರಾಚೀನ ಪರಂಪರೆ ಸಾರಿದೆ. ಯಜ್ಞ-ಯಾಗಗಳ ಮೂಲ ತತ್ವ ಇದು ಎಂದು ಹಿರಿಯ ಅಗ್ನಿಹೋತ್ರಿ ವಿದ್ವಾನ್ ಗಣೇಶ್ ವಾಸುದೇವ ಜೋಗಳೇಕರ್ ಗೋಕರ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
  ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ 2019ರಲ್ಲಿ ನಡೆಯಲಿರುವ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ಫೆ.1ರಿಂದ ನಡೆದುಬಂದ ನಕ್ಷತ್ರೇಷ್ಟಿ ಯಾಗದ ಭಾನುವಾರ ನಡೆದ ಪೂಣರ್ಾಹುತಿಯ ಬಳಿಕ ನಡೆದ ಧಾಮರ್ಿಕ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
  ಸಂಪತ್ತು ಸತ್ಕಾರ್ಯಗಳಿಗೆ ಬಳಕೆಯಾಗಬೇಕು.ಇದರಿಂದ ಲೋಕಹಿತ ಏರ್ಪಟ್ಟು ನೆಮ್ಮದಿ ಲಭಿಸುತ್ತದೆ. ಸನ್ಯಾಸಿಯಾಗಿ ಸಮಾಜೋದ್ದಾರದ ಪರಿಕಲ್ಪನೆಗೆ ಹೊಸ ರೂಪು ನೀಡಿದ ಕೊಂಡೆವೂರು ಶ್ರೀಗಳು ಮಾದರಿ ವ್ಯಕ್ತಿತ್ವದವರು ಎಂದು ಅವರು ತಿಳಿಸಿದರು. ಸಾಧುಗಳು ಕೇಂದ್ರೀಭೂತರಾದಾಗ ಲೀಲೆಗಳು ನಡೆಯುತ್ತವೆ. ಪರಿಧೀಭೂತರಾದಾಗ ಸಮಾಜೋದ್ದಾರ, ಆಧ್ಯಾತ್ಮಿಕ ಸಾಧನೆ ಸರ್ವರ ಒಳಗೊಳ್ಳುವಿಕೆಯೊಂದಿಗೆ ನೆರವೇರಲ್ಪಡುತ್ತದೆ ಎಂದು ತಿಳಿಸಿದರು.
   ಉದ್ಯಮಿ ಕುಸುಮೋದರ ಡಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಕಟೀಲು ಶ್ರೀಕ್ಷೇತ್ರದ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣ ಉಪಸ್ಥಿತರಿದ್ದು ಮಾತನಾಡಿದರು.
   ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಗೋವಾದ ಮುಖ್ಯ ಚುನಾವಣಾ ಆಯುಕ್ತ ನಾರಾಯಣ ಶ್ರೀಕೃಷ್ಣ ನಾವಟಿ ಅವರು ಮಾತನಾಡಿ, ಆಧ್ಯಾತ್ಮಕತೆ ಈ ರಾಷ್ಟ್ರದ ಪರಂಪರೆಯ ಮೂಲ ಸೆಲೆಯಾಗಿದ್ದು, ಅದನ್ನು ಮರೆಯುವುದರಿಂದ ವಿನಾಶಕ್ಕೆ ಕಾರಣವಾಗುತ್ತದೆ. ಪ್ರಕೃತಿಯೊಂದಿಗೆ ಒಂದಾಗಿ ಬದುಕುವ ವೇದ ಪರಂಪರೆಯ ಜೀವನ ದೃಷ್ಟಿಯನ್ನು ಮತ್ತೆ ಸಮಾಜಕ್ಕೆ ಪರಿಚಯಿಸುವ ಕೊಂಡೆವೂರು ಆಶ್ರಮದಂತಹ ಯತ್ನಗಳು ನಮ್ಮನ್ನು ಸನ್ಮಾರ್ಗದ ಕಡೆಗೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.
  ಅಧಾನಿ ಗ್ರೂಫ್ ನ ಯುಪಿಸಿಎಲ್ನ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಆಳ್ವ, ಕಾಸರಗೋಡು ಜಿಲ್ಲಾ ಸಹಾಯಕ ಜಿಲ್ಲಾಧಿಕಾರಿ ಜಯಲಕ್ಷ್ಮೀ ಕೆ, ಬೆಂಗಳೂರಿನ ಉದ್ಯಮಿ ನಾರಾಯಣ್, ಗೋವಾದ ಉದ್ಯಮಿ ಚಂದ್ರಕಾಂತ್ ಜಾಧವ್, ಆನಂದ ಪಾಲೇಕರ್, ನಕ್ಷತ್ರೇಷ್ಟಿ ಯಾಗದ ಅಧ್ಯಕ್ಷ ಡಾ. ಶ್ರೀಧರ ಭಟ್ ಉಪ್ಪಳ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
  ಸಮಾರಂಭದಲ್ಲಿ ಉಪಸ್ಥಿತರಿದ್ದ ಕೇರಳದ ಪ್ರಸಿದ್ದ ಅಗ್ನಿಹೋತ್ರಿ ಚೆರುಮುಕ್ ವೈದಿಕನ್ ವಲ್ಲಭನ್ ಅಕ್ಕಿತ್ತಿರಿಪಾಡ್ ರವರನ್ನು ಗೌರವಿಸಲಾಯಿತು. ನ್ಯಾಯವಾದಿ ಮೋನಪ್ಪ ಭಂಡಾರಿ ಸ್ವಾಗತಿಸಿ, ಪುಷ್ಪರಾಜ್ ಐಲ್ ವಂದಿಸಿದರು. ದಿನಕರ ಹೊಸಂಗಡಿ ಹಾಗೂ ಭಾಸ್ಕರ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು.
  ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಪುಣ್ಯಾಹ, ಚಂಡಿಕಾಹೋಮ, ಗಣಯಾಗ, ನವಗ್ರಹ ಪೂಜೆ, ಅಗ್ನಿಹೋತ್ರ ಹೋಮ ನಡೆದು ನಕ್ಷತ್ರಾಧಿದೇವತೆಗಳಿಗೆ ಇಷ್ಟಿ ಪೂಣರ್ಾಹುತಿ ಸಹಸ್ರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಿತು.
  ಸಂಜೆ 15ನೇ ವರ್ಷದ ಅಖಂಡ ಭಜನಾ ಸಪ್ತಾಹಕ್ಕೆ ಶ್ರೀಕೊಂಡೆವೂರು ಶ್ರೀಗಳು ಚಾಲನೆ ನೀಡಿದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries