HEALTH TIPS

No title

                 ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆದ್ದು ಇತಿಹಾಸ ನಿಮರ್ಿಸಿದ ಟೀಂ ಇಂಡಿಯಾ
    ಪೋಟರ್್ ಎಲಿಜಬೆತ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಗೆದ್ದು ಟೀಂ ಇಂಡಿಯಾ ಇತಿಹಾಸ ನಿಮರ್ಿಸಿದೆ.
ದಕ್ಷಿಣ ಆಫ್ರಿಕಾದ ಪೋಟರ್್ ಎಲಿಜಬೆತ್ ನಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ನಡುವಿನ 5ನೇ ಏಕದಿನ ಪಂದ್ಯದಲ್ಲಿ ಭಾರತ 73 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ.
   ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದರಿಂದಾಗಿ ಮೊದಲು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ 274 ರನ್ ಗಳನ್ನು ಪೇರಿಸಿದ್ದು ಆಫ್ರಿಕಾಗೆ ಗೆಲ್ಲಲು 275 ರನ್ ಗುರಿ ನೀಡಿತ್ತು. 275 ರನ್ ಗಳ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡ 201 ರನ್ ಗಳಿಗೆ ಸರ್ವಪತನ ಕಂಡು ಭಾರತಕ್ಕೆ ಶರಣಾಯಿತು.
ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 4-1 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ.
  ರೋಹಿತ್ ಶಮರ್ಾ ಭರ್ಜರಿ ಶತಕ ಸಿಡಿಸಿ ಸ್ಪಧರ್ಾತ್ಮಕ ರನ್ ಪೇರಿಸಲು ನೆರವಾದರು. ಭಾರತ ಪರ ಶಿಖರ್ ಧವನ್ 34, ವಿರಾಟ್ ಕೊಹ್ಲಿ 36, ಶ್ರೇಯರ್ ಅಯ್ಯರ್ 30, ಭುವನೇಶ್ವರ್ ಕುಮಾರ್ 19 ರನ್ ಗಳಿಸಿ ಔಟಾದರು. ದಕ್ಷಿಣ ಆಫ್ರಿಕಾ ಪರ ನೆಗಿಡಿ 4 ವಿಕೆಟ್ ಪಡೆದಿದ್ದಾರೆ.
ಆಫ್ರಿಕಾ ಪರ ಹಾಶೀಂ ಆಮ್ಲಾ 71, ಮಾಕ್ರರ್ಾಮ್ 32, ಡೇವಿಡ್ ಮಿಲ್ಲರ್ 36, ಕ್ಲಾಸೇನ್ 39 ರನ್ ಸಿಡಿಸಿದ್ದಾರೆ. ಭಾರತ ಪರ ಬೌಲಿಂಗ್ ನಲ್ಲಿ ಕುಲದೀಪ್ ಯಾದವ್ 4 ವಿಕೆಟ್, ಹಾದರ್ಿಕ್ ಪಾಂಡ್ಯ ಮತ್ತು ಯಜುವೇಂದ್ರ ಚಹಾಲ್ ತಲಾ 2 ವಿಕೆಟ್ ಪಡೆದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries