HEALTH TIPS

No title

               ಬೆಂಗಲಮ್ ಬಳಿ ಪ್ರಾಚೀನಕಾಲದ ನೆಲಮಾಳಿಗೆ ಪತ್ತೆ
      ಕುಂಬಳೆ: ಜಿಲ್ಲೆಯ ಪ್ರಾಚೀನ ಇತಿಹಾಸವನ್ನು ಮತ್ತೆಮತ್ತೆ ಪ್ರಪಂಚಮುಖಕ್ಕೆ ತೆರೆದಿಡುವಂತೆ ಆಗೀಗ ಪಳೆಯುಳಿಕೆಗಳು ಲಭ್ಯವಾಗುತ್ತದೆ. ಆದರೆ ಗಡಿನಾಡು ಎಂಬ ಕಾರಣಗಳಿಂದಲೋ ಏನೋ ಬಳಿಕದ ಸಂಶೋಧನೆಗಳು ಏನೇನೂ ನಡೆಯದೆ ಬಹುದೊಡ್ಡ ನಷ್ಟ ನಮ್ಮನಾಡಿಗಾಗುತ್ತಿರುವುದು ನಿಜ. ಈ ಹಿನ್ನೆಲೆಯಲ್ಲಿ ಹೊಸ ತಲೆಮಾರು ಏನದರೊಂದು ಮಾಡಲೇಬೇಕೆಂಬ ನಿರ್ಣಯದಂತೆ ಇದೀಗ ಮತ್ತೊಂದು ಕುರುಹು ಕಂಡುಬಂದಿದೆ.
   ನೀಲೇಶ್ವರದ ಬೆಂಗಲಮ್ ಬಳಿ ಪ್ರಾಚೀನಕಾಲದ ನೆಲಮಾಳಿಗೆ ಪತ್ತೆಯಾಗಿದೆ. ಸಮೀಪದ ರಕ್ತೇಶ್ವರಿ ದೈವಸ್ಥಾನದ ಜೀಣರ್ೋದ್ಧಾರದ ನಿಮಿತ್ತ ಸ್ಥಳವನ್ನು ಸ್ವಚ್ಛತೆ ಮಾಡುತ್ತಿದ್ದ ಸಂದರ್ಭ ಐತಿಹಾಸಿಕ ಕೌತುಕವನ್ನು ಗ್ರಾಮಸ್ಥರು ಪತ್ತೆ ಹಚ್ಚಿದ್ದಾರೆ. ಗುಹೆಯಂತಿರುವ ಚಾರಿತ್ರಿಕ ಪತ್ತೆಯು ಕೆಂಪು ಕಲ್ಲಿನ ಮೂಲಕ ಕಟ್ಟಲ್ಪಟ್ಟಿದೆ, ಒಳಗೆ ಹೆಚ್ಚಿನ ಸ್ಥಳಾವಕಾಶವಿದ್ದು, ಸುಮಾರು ಹತ್ತು ಮಂದಿ ಒಳಗೆ ನಿಲ್ಲಬಹುದಾಗಿದೆ ಎಂದು ದೈವಸ್ಥಾನದ ಸಮಿತಿ ಅಧ್ಯಕ್ಷ ಇ.ವಿ ಅಂಬು ಹೇಳುತ್ತಾರೆ. ಸಹಸ್ರ ವರ್ಷಗಳ ಹಿಂದೆ ಜೈನ ಅಥವಾ ಬೌದ್ದ ಮುನಿಗಳು ನಿವರ್ಾಣ ಮೋಕ್ಷಕ್ಕಾಗಿ ಉಪಯೋಗಿಸುತ್ತಿದ್ದ ನೆಲಮಾಳಿಗೆ ಇದರಾಗಿರಬಹುದೆಂದು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಗುಹೆಯಂತಿರುವ ನೆಲಮಾಳಿಗೆಯು ದೈವಸ್ಥಾನದ ನೈರುತ್ಯ ಭಾಗದಲ್ಲಿದ್ದು, ಅಭಿವೃದ್ಧಿ ಕಾರ್ಯದ ಸಂದರ್ಭ ಇದನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ತಿಳಿಸಿದ್ದಾರೆ.ಐತಿಹಾಸಿಕ ಶೋಧೆಯ ನಂತರ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದು ಕೌತುಕವನ್ನು ವೀಕ್ಷಿಸುತ್ತಿದ್ದಾರೆ ಎಂದು ಅಂಬು ಹೇಳುತ್ತಾರೆ. ಪ್ರವೇಶದ್ವಾರದ ಕಲ್ಲಿನ ಮೇಲೆ ಸಣ್ಣ ಕೆತ್ತನೆಗಳಿವೆ, ನೆಲಮಾಳಿಗೆಯ ಒಳಗಿನ ನುಣ್ಣಗಿನಕಲ್ಲಿನ ಕಂಬದಲ್ಲೂ ಹಲವು ಕೆತ್ತನೆಗಳಿವೆ ಎಂದು ಅವರು ತಿಳಿಸಿದ್ದಾರೆ.ನೆಲಮಾಳಿಗೆಯ ಸುತ್ತಲು ಹಲವು ಮಣ್ಣಿನ ಮಡಕೆಗಳು ಕಂಡು ಬಂದಿದ್ದು, ಆದಿಮ ಧಾಮರ್ಿಕ ಸಂಸ್ಕಾರಗಳಿಗೆ ಸಾಕ್ಷಿಯಾಗಿವೆ ಎಂದು ದೈವಸ್ಥಾನದ ಅಧಿಕೃತರು ತಿಳಿಸಿದ್ದಾರೆ.ದೈವಸ್ಥಾನ ಪ್ರದೇಶದಲ್ಲಿ ಇಂತಹ ಹಲವು ನೆಲಮಾಳಿಗೆಗಳು ಇರಬಹುದು ಎಂದು ಅಂಬು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
  ಕೇರಳದ ಮಲಾಬಾರು ಪ್ರದೇಶದಲ್ಲಿ ಇಂತಹ ಹಲವು ನೆಲಮಾಳಿಗೆಗಳು ಈ ಹಿಂದೆ ಪತ್ತೆಯಾಗಿದ್ದವು.ಜಿಲ್ಲೆಯಕರಿಂದಲಂ ಪ್ರದೇಶದಲ್ಲೂ ಐತಿಹಾಸಿಕ ಶಿಲಾಯುಗ ಸ್ಮಾರಕಗಳು ಪತ್ತೆಯಾಗಿದ್ದವು. ಕೆಲ ಖಾಸಗಿ ಸ್ಥಳಗಳಲ್ಲೂ ಉಬ್ಬು ದಿಣ್ಣೆಗಳು ಪತ್ತೆಯಾಗಿದ್ದು, ಇವುಗಳ ರಕ್ಷಣೆಜೊತೆಯಲ್ಲಿ ಸಂಶೋಧನೆಗೆ ಭಾರತೀಯ ಪುರಾತತ್ವ ಇಲಾಖೆ ಇವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿಲ್ಲಎನ್ನಲಾಗುತ್ತಿದೆ.ಇಂತಹಗುಹಾಂತರ ನೆಲಮಾಳಿಗೆಗಳನ್ನು ಶ್ರಮಣ ಪರಂಪರೆಯ ಬೌದ್ಧ ಮತ್ತುಜೈನ ಮುನಿಗಳು ನಿವರ್ಾಣ ಹಾಗೂ ಕೈವಲ್ಯ ಮಾರ್ಗಕ್ಕಾಗಿ ಉಪಯೋಗಿಸುತ್ತಿದ್ದಿರಬಹುದು ಎಂದು ಇತಿಹಾಸಕಾರರ ಅಭಿಪ್ರಾಯವಾಗಿದೆ. 
  ವರ್ಷದ ಹಿಂದೆ ಬೆಂಗಲಮ್ ಪ್ರದೇಶದಲ್ಲಿ ಶಿಲಾಯುಗ ಕಾಲದ ಪ್ರಾಣಿ ಬೇಟೆಯ ಕಲ್ಲಿನ ಕೆತ್ತನೆಯನ್ನು ಪತ್ತೆ ಮಾಡಲಾಗಿತ್ತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries