HEALTH TIPS

No title

         ಅನಿಧರ್ಿಷ್ಟಾವಧಿ ಖಾಸಗಿ ಬಸ್ ಮುಷ್ಕರ : ಪ್ರಯಾಣಿಕರಿಗೆ ಸಮಸ್ಯೆ
     ಕುಂಬಳೆ: ಕೇರಳ ಸರಕಾರ ನಿಗದಿಪಡಿಸಿದ ಬಸ್ ಪ್ರಯಾಣ ದರ ಸ್ವೀಕಾರಾರ್ಹವಲ್ಲ, ಪ್ರಯಾಣ ದರ ಹೆಚ್ಚಳವನ್ನು ಆಗ್ರಹಿಸಿ ಖಾಸಗಿ ಬಸ್ ಮಾಲಕರ ಸಂಘಟನೆಗಳು ಕರೆ ನೀಡಿದಂತೆ ಅನಿದರ್ಿಷ್ಟಾವಧಿ ಮುಷ್ಕರ ಶುಕ್ರವಾರ ಆರಂಭಗೊಂಡಿತು.
    ಕನಿಷ್ಠ ಪ್ರಯಾಣ ದರವನ್ನು 10 ರೂ.ಗೇರಿಸಬೇಕೆಂದು ಬೇಡಿಕೆ ಮುಂದಿಟ್ಟರೂ ಸರಕಾರ ಕನಿಷ್ಠ ಪ್ರಯಾಣ ದರವನ್ನು ಕೇವಲ 7 ರಿಂದ 8 ರೂ. ಗೇರಿಸಿದೆ.  ವಿದ್ಯಾಥರ್ಿಗಳ ಕನಿಷ್ಠ ರಿಯಾಯಿತಿ ಪ್ರಯಾಣ ದರವನ್ನು ಶೇ. 50 ಆಗಿ ನಿಗದಿಪಡಿಸಬೇಕೆಂಬ ಬೇಡಿಕೆಯನ್ನು ಮುಂದಿರಿಸಿತ್ತು. ಮಾತ್ರವಲ್ಲದೆ ಇತರ ಹಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿತ್ತು. ಆದರೆ ಸರಕಾರ ಕನಿಷ್ಠ ಪ್ರಯಾಣ ದರವನ್ನು 7 ರಿಂದ 8 ರೂ.ಗೇರಿಸಿ, ಕಿಲೋ ಮೀಟರ್ ದರದಲ್ಲಿ ಅಲ್ಪ ಹೆಚ್ಚಳ ತರಲು ಮುಂದಾಗಿದೆ. ಆದರೆ ತಮ್ಮ ಯಾವುದೇ ಬೇಡಿಕೆಗಳನ್ನು ಸರಕಾರ ಅಂಗೀಕರಿಸಿಲ್ಲ. ಕನಿಷ್ಠ ಪ್ರಯಾಣ ದರವನ್ನು 10 ರೂ. ಗೇರಿಸುವ ಮತ್ತು ವಿದ್ಯಾಥರ್ಿಗಳ ರಿಯಾಯಿತಿ ಪ್ರಯಾಣ ದರದ ಬಗ್ಗೆ ಸರಕಾರ ತೀಮರ್ಾನ ತೆಗದುಕೊಳ್ಳುವ ತನಕ ಖಾಸಗಿ ಬಸ್ ಮುಷ್ಕರ ಮುಂದುವರಿಯಲಿದೆ ಎಂದು ಬಸ್ ಮಾಲಕರ ಸಂಘಟನೆ ಹೇಳಿದೆ.
    ರಾಜ್ಯದಲ್ಲಿ ಒಟ್ಟು 12 ಬಸ್ ಮಾಲಕರ ಸಂಘಟನೆಗಳಿವೆ. ಅವುಗಳೆಲ್ಲವೂ ಶುಕ್ರವಾರದಿಂದ ಅನಿದರ್ಿಷ್ಟಾವಧಿ ಮ್ಕುರದಲ್ಲಿ ನಿರತವಾಗಿದೆ. ಇದರಿಂದ ರಾಜ್ಯದಲ್ಲಿ 14500 ಖಾಸಗಿ ಬಸ್ಗಳು ರಸ್ತೆಗಿಳಿಯಲಿಲ್ಲ. ಉತ್ತರ ಕೇರಳದಲ್ಲಿ ಖಾಸಗಿ ಬಸ್ಗಳೇ ಪ್ರಯಾಣಿಕರಿಗೆ ಆಶ್ರಯವಾಗಿದೆ. ಈ ಪ್ರದೇಶದಲ್ಲಿ ಬಹುತೇಕ ಖಾಸಗಿ ಬಸ್ ಸೇವೆ ಅಧಿಕವಾಗಿದೆ. ಮುಷ್ಕರದಿಂದ ಕಾಸರಗೋಡು ಸಹಿತ ಉತ್ತರ ಕೇರಳ ಜಿಲ್ಲೆಗಳ ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬಸ್ ಮುಷ್ಕರದಿಂದ ಗ್ರಾಮೀಣ ಪ್ರದೇಶದ ಪ್ರಯಾಣಿಕರು ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ. ಬಸ್ ಮುಷ್ಕರದಿಂದ ಶಿಕ್ಷಣ ಸಂಸ್ಥೆ, ಸರಕಾರಿ, ಖಾಸಗಿ ಕಚೇರಿಗಳ ಕಾರ್ಯನಿರ್ವಹಣೆಗೂ ತೀವ್ರ ಪರಿಣಾಮ ಉಂಟಾಗಿದೆ. ಇದೇ ವೇಳೆ ಸರಕಾರಿ ಬಸ್ ಮತ್ತು ಸಹಕಾರಿ ಬಸ್ಗಳು ಎಂದಿನಂತೆ ಸಂಚರಿಸುತ್ತಿವೆ. ಇದರಿಂದ ಸ್ವಲ್ಪ ನಗರ ಪ್ರದೇಶಗಳಲ್ಲಿ ನಿಟ್ಟುಸಿರು ಬಿಡುವಂತಾಗಿದೆ. ಖಾಸಗಿ ಬಸ್ ಮುಷ್ಕರದಿಂದ ಇಂತಹ ಬಸ್ಗಳ ಆದಾಯ ಹೆಚ್ಚಳಕ್ಕೆ ಕಾರಣವಾಗಲಿದೆ.
   ತಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಸೆಕ್ರೆಟರಿಯೇಟ್ ಮುಂದೆ ಅನಿದರ್ಿಷ್ಟಾವಧಿ ನಿರಾಹಾರ ಸತ್ಯಾಗ್ರಹ ನಡೆಸುವುದಾಗಿ ಸಂಯುಕ್ತ ಮುಷ್ಕರ ಸಮಿತಿ ರಾಜ್ಯಾಧ್ಯಕ್ಷ ಲೋರೆನ್ಸ್ ಬಾಬು ಮುನ್ನೆಚ್ಚರಿಕೆ ನೀಡಿದ್ದಾರೆ.
   ವಿದ್ಯಾಥರ್ಿಗಳಿಗೆ ಸಮಸ್ಯೆ:
   ಸೋಮವಾರದಿಂದ ಹತ್ತನೇ ತರಗತಿಯ ಮಾದರಿ ಪರೀಕ್ಷೆಗಳು ಆರಂಭಗೊಂಡಿದ್ದು, ಅನಿಧರ್ಿಷ್ಟಾವಧಿ ಮುಷ್ಕರದಿಂದ ವಿದ್ಯಾಥರ್ಿಗಳು ತೊಂದರೆಗೊಳಗಾದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳ ವಿದ್ಯಾಥರ್ಿಗಳು ಮುಂಜಾನೆಯೇ ಮನೆಯಿಂದ ಹೊರಟು ಖಾಸಗೀ, ಟ್ಯಾಕ್ಸಿ ವಾಹನಗಳನ್ನು ಆಶ್ರಯಿಸಬೇಕಾಯಿತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries