HEALTH TIPS

No title

                       ಇಂದು ಪರಕ್ಕಿಲ ದೇಗುಲದಲ್ಲಿ ಅಷ್ಟಬಂಧ ಬ್ರಹ್ಮಕಲಶ 
    ಮಧೂರು: ಹಸಿರು ಸಿರಿಯ ಮಧ್ಯೆ ನಯನ ಮನೋಹರವಾದ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದಲ್ಲಿ ಫೆ.19 ರಂದು ವಿಧಿವಿಧಾನಗಳೊಂದಿಗೆ ಅಷ್ಟಬಂಧ ಬ್ರಹ್ಮಕಲಶ ಸಂಭ್ರಮ ಸಡಗರದಿಂದ ನಡೆಯಲಿದೆ. ಊರ ಪರವೂರ ಆಸ್ತಿಕ ಶ್ರದ್ಧಾಳುಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಸಕ್ರಿಯವಾಗಿ ತೊಡಗಿಸಿಕೊಂಡು ಈ ಮಹತ್ಕಾರ್ಯವನ್ನು ಯಶಸ್ವಿಗೊಳಿಸಿದ್ದು ಆಸ್ತಿಕ ಶ್ರದ್ಧಾಳುಗಳಲ್ಲಿ ಭಕ್ತಿಭಾವ ಉದ್ದೀಪನಗೊಳಿಸುತ್ತಿದೆ. ಕಳೆದ ಫೆ.14 ರಿಂದ ಆರಂಭಗೊಂಡ ವಿವಿಧ ತಾಂತ್ರಿಕ, ವೈದಿಕ, ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಕೃತಾರ್ಥರಾಗಿದ್ದಾರೆ. 
   ಪರಕ್ಕಿಲದಲ್ಲಿ ಶಿವನಿಗೂ ಶಾಸ್ತಾವಿಗೂ ಸಮಾನವಾದ ಸ್ಥಾನ ಕಲ್ಪಿಸಲಾಗಿದೆ. ಶಿವ, ಶಾಸ್ತಾವು, ಗಣಪತಿ ಜೊತೆಯಾಗಿ ಇರುವ ಕಾರಣ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನವೆಂದೇ ಪ್ರಸಿದ್ಧಿಗೆ ಪಾತ್ರವಾಗಿದೆ. ಆಡಳಿತ ಮೊಕ್ತೇಸರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ರಕ್ಷಾಧಿಕಾರಿಯಾಗಿರುವ ಬ್ರಹ್ಮಕಲಶೋತ್ಸವ ಸಮಿತಿ ನೇತೃತ್ವದಲ್ಲಿ ಆಯೋಜಿಸಿದ ಉತ್ಸವದ ಅಂಗವಾಗಿ ಕೆಲವು ತಿಂಗಳ ಹಿಂದಿನಿಂದಲೇ ನಿರಂತರವಾಗಿ ಯುವಜನರು ಶ್ರಮದಾನದ ಮೂಲಕ ದೇವಸ್ಥಾನಕ್ಕೆ ವಿಶೇಷವಾದ ಶೋಭಯನ್ನು ನೀಡಿದ್ದಾರೆ. ಪ್ರಧಾನ ಸಮಿತಿಗೆ ಬೆಂಬಲವಾಗಿ ಮಹಿಳಾ ಮತ್ತು ಉಪಸಮಿತಿಗಳು ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಹಗಲಿರುಳು ದುಡಿದಿವೆ. ಅಷ್ಟಬಂಧ ಬ್ರಹ್ಮಕಲಶೋತ್ಸವದಿಂದ ನಾಡಿಗೆ ಸಡಗರ ಸಂಭ್ರವನ್ನು ತಂದಿದೆ.
   ಫೆ.18 ರಂದು ಬೆಳಗ್ಗೆ ಗಣಪತಿ ಹವನ, ಕುಂಭೇಶ ಪೂಜೆ, ಕೂಡ್ಲು ಪಾರೆಕಟ್ಟೆಯ ಸಪ್ತಗಿರಿ ಭಜನಾ ಮಂಡಳಿಯಿಂದ ಭಜನೆ, ನಾಯ್ಕಾಪು ಶ್ರೀ ಶಾಸ್ತಾ ಭಜನಾ ಸಂಘದಿಂದ ಭಜನಾ ಸಂಕೀರ್ತನೆ, ಪುಳ್ಕೂರಿನ ಭಜನ್ ಸಾಮ್ರಾಟ್ನಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಅಂಕುರಪೂಜೆ, ಬ್ರಹ್ಮಕಲಶ ಪೂಜೆ,  ಮಹಾಪೂಜೆ, ಅನ್ನಸಂತರ್ಪಣೆ, ಯಕ್ಷ-ಗಾನ-ವೈಭವ, ಮಂಗಲ್ಪಾಡಿ ಕೂಟ ಮಹಾಜಗತ್ತು ಯಕ್ಷಕೂಟ ಮಹಿಳಾ ವೇದಿಕೆಯಿಂದ ಯಕ್ಷಗಾನ ಕೂಟ, ರಾತ್ರಿ ವಿದುಷಿ ವಿದ್ಯಾಲಕ್ಷ್ಮಿ, ನಾಟ್ಯ ವಿದ್ಯಾನಿಲಯ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯವೈವಿಧ್ಯ, ನಾಟ್ಯ ನಿಲಯ ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ನೃತ್ಯೋಪಾಸನ, ರಾತ್ರಿ ಕಲಶಾಧಿವಾಸ, ಅಧಿವಾಸ ಹೋಮ, ರಾತ್ರಿ ಪೂಜೆ ನಡೆಯಿತು.
    ಫೆ.19 ರಂದು ಬೆಳಗ್ಗೆ 7 ಕ್ಕೆ ಗಣಪತಿ ಹವನ, 8.37 ಕ್ಕೆ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮೀನ ಲಗ್ನ ಶುಭಮುಹೂರ್ತದಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ದಿವ್ಯಹಸ್ತದಿಂದ ಶ್ರೀ ಮಹಾದೇವರಿಗೆ ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ ಹಾಗೂ ಉಪದೇವರಿಗೆ ಕಲಶಾಭಿಷೇಕ, ರಕ್ತೇಶ್ವರಿ, ವಿಷ್ಣುಮೂತರ್ಿ ದೈವಗಳಿಗೆ ಕಲಶಾಭಿಷೇಕ, ತಂಬಿಲ, 11 ರಿಂದ ಬಳ್ಳಪದವು ಯೋಗೀಶ್ ಶಮರ್ಾ ಅವರಿಂದ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 1 ರಿಂದ ಸಾಯಿ ಮನೋಹರ್ ಮತ್ತು ಬಳಗದಿಂದ ಭಕ್ತಿಭಾವ ರಾಗ ಸಂಗಮ ನಡೆಯಲಿದೆ.
   ಸಂಜೆ 4 ಕ್ಕೆ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಅವರಿಗೆ ಪೂರ್ಣಕುಂಭ ಸ್ವಾಗತ, 4.30 ರಿಂದ ಧಾಮರ್ಿಕ ಸಭೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಆಶೀರ್ವಚನ ನೀಡುವರು. ಆಡಳಿತ ಮೊಕ್ತೇಸರ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಗೌರವ ಉಪಸ್ಥಿತರಿರುವರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಉಪಸ್ಥಿತರಿರುವರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಸಂಸ್ಕಾರ ಭಾರತಿ ಪ್ರಾಂತ್ಯ ಅಧ್ಯಕ್ಷ ಚಕ್ರವತರ್ಿ ಸೂಲಿಬೆಲೆ ಧಾಮರ್ಿಕ ಭಾಷಣ ಮಾಡುವರು. ಮಧೂರು ಶ್ರೀ ಕ್ಷೇತ್ರ ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ, ಜ್ಯೋತಿಷಿ ಸಿ.ವಿ.ಪೊದುವಾಳ್, ಮಹಾಲಕ್ಷ್ಮೀಪುರಂ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಗೋಪಿನಾಥ್ ನಾಯರ್ ಅತಿಥಿಗಳಾಗಿ ಉಪಸ್ಥಿತರಿರುವರು. ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಎ.ವಾಸುದೇವ ಹೊಳ್ಳ ಮಧೂರು ಉಪಸ್ಥಿತರಿರುವರು. ಸಂಜೆ 6 ಕ್ಕೆ ಶ್ರೀ ಭೂತಬಲಿ, ಉತ್ಸವ, ಬೆಡಿಕಟ್ಟೆಯಲ್ಲಿ ಪೂಜೆ, ಸಿಡಿಮದ್ದು ಪ್ರದರ್ಶನ, ಶ್ರೀ ಸನ್ನಿಧಿಯಲ್ಲಿ ರಾಜಾಂಗಣ ಪ್ರಸಾದ, ಮಹಾಮಂತ್ರಾಕ್ಷತೆ, ರಾತ್ರಿ 9.30 ರಿಂದ ಕಟೀಲು ಶ್ರೀ ದುಗರ್ಾಪರಮೇಶ್ವರೀ ಪ್ರಸಾದಿತ ದಶವತಾರ ಯಕ್ಷಗಾನ ಮಂಡಳಿಯಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಲಿದೆ.
  ಚಿತ್ರ : ಸ್ಟಾರ್ ಫೋಟೋ ಉಳಿಯತ್ತಡ್ಕ
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries