ಬಯಲುಗದ್ದೆ ಸಮಿತಿಗಳಿಗೆ ಪವರ್ ಟಿಲ್ಲರ್ ವಿತರಣೆ
ದಾಖಲೆ ಮೆರೆದ ಕುಂಬಳೆ ಗ್ರಾ.ಪಂ.
ಕುಂಬಳೆ: ಕಾಸರಗೋಡು ಬ್ಲಾಕ್ ಪಂಚಾಯತು ನೇತೃತ್ವದಲ್ಲಿ 2017-18ನೇ ಆಥರ್ಿಕ ವರ್ಷದಲ್ಲಿ ಜನಪರ ಯೋಜನೆಯ ಅಂಗವಾಗಿ ಒಂಭತ್ತು ಬಯಲುಗದ್ದೆ ಸಮಿತಿಗಳಿಗೆ ಬ್ಲಾಕ್ ಪಂಚಾಯತು ಕಚೇರಿ ಪರಿಸರದಲ್ಲಿ ಪವರ್ ಟಿಲ್ಲರ್ ಯಂತ್ರಗಳನ್ನು ವಿತರಿಸಲಾಯಿತು.
ಕುಂಬಳೆ, ಮೊಗ್ರಾಲ್ ಪುತ್ತೂರು, ಚೆಂಗಳ, ಚೆಮ್ನಾಡು ಗ್ರಾಮ ಪಂಚಾಯತುಗಳ ಬಯಲುಗದ್ದೆ ಸಮಿತಿಗಳಿಗೆ ಪವರ್ ಟಿಲ್ಲರ್ ಕೊಡಲಾಯಿತು. ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅವರು ಪವರ್ ಟಿಲ್ಲರ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಯೋಜನೆ ಮೂಲಕ ಭತ್ತದ ಕೃಷಿಗೆ ಹೆಚ್ಚು ಪ್ರಯೋಜನ ದೊರಕಲಿದೆ ಎಂದು ಅವರು ಹೇಳಿದರು.
ಕಾಸರಗೋಡು ಬ್ಲಾಕ್ ಪಂಚಾಯತು ಅಧ್ಯಕ್ಷ ಸಿ.ಎಚ್.ಮುಹಮ್ಮದ್ ಕುಂಞಿ ಚಾಯಿಂಡಡಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲಾಕ್ ಪಂ. ಅಭಿವೃದ್ಧಿ ಸ್ಥಾಯೀ ಸಮಿತಿಯ ಅಧ್ಯಕ್ಷ ಟಿ.ಡಿ.ಕಬೀರ್, ಕುಂಬಳೆ ಗಾಮ ಪಂಚಾಯತು ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ , ಕಾಸರಗೋಡು ಬ್ಲಾಕ್ ಪಂ. ಸದಸ್ಯರಾದ ಎಚ್.ಸತ್ಯಶಂಕರ ಭಟ್, ಎ.ಪ್ರಭಾಶಂಕರ ಮಾಸ್ತರ್, ಬ್ಲಾಕ್ ಪಂಚಾಯತು ಕಾರ್ಯದಶರ್ಿ ಸಾಬು ಕೆ. ಮಾಕರ್ೋಸ್ ಮಾತನಾಡಿದರು. ಕಾಸರಗೋಡು ಕೃಷಿ ಸಹಾಯಕ ನಿದರ್ೇಶಕ ಎಂ.ವಿ.ಕೃಷ್ಣ ಸ್ವಾಮಿ ಸ್ವಾಗತಿಸಿ, ಮೊಗ್ರಾಲ್ ಪುತ್ತೂರು ಕೃಷಿ ಭವನ ಕೃಷಿ ಅಧಿಕಾರಿ ಚವನ ನರಸಿಂಹಲು ವಂದಿಸಿದರು.
ಅತಿಹೆಚ್ಚು ಕುಂಬಳೆಗೆ:
ಬ್ಲಾಕ್ ಪಂಚಾಯತು ಪ್ರಸ್ತುತ ವರ್ಷ ಒಟ್ಟು 9 ಪವರ್ ಟಿಲ್ಲರ್ ಗಳನ್ನು ಯೋಜನೆಯ ನಿಧಿ ಬಳಸಿ ವಿವಿಧ ಗ್ರಾ.ಪಂ. ಗಳಿಗೆ ವಿತರಿಸಿದ್ದು, ಈ ಪೈಕಿ ಐದು ಪವರ್ ಟಿಲ್ಲರ್ ಗಳನ್ನು ಕುಂಬಳೆ ಗ್ರಾ.ಪಂ. ಗೆ ವಿತರಿಸಲಾಗಿದೆ. ಕುಂಬಳೆ ಗ್ರಾ.ಪಂ. ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಇದೀಗಲೂ ಬತ್ತದ ನಾಟಿ ನಡೆಸಲಾಗುತ್ತಿದ್ದು, ಈ ಕಾರಣದಿಂದ ಗ್ರಾ.ಪಂ. ಅಧ್ಯಕ್ಷರು, ಬ್ಲಾ.ಪಂ. ಸದಸ್ಯರ ಮನವಿಯಂತೆ ಐದು ಟಿಲ್ಲರ್ ಗಳನ್ನು ವಿತರಿಸಲಾಯಿತು. ಈ ಮೂಲಕ ಕುಂಬಳೆ ವ್ಯಾಪ್ತಿಯ ಗದ್ದೆ ಬಯಲು ಸಮಿತಿಯನ್ನು ಇನ್ನಷ್ಟು ಬಲಗೊಳಿಸಿ ಬೃಹತ್ ಪ್ರಮಾಣದಲ್ಲಿ ಭತ್ತದ ಕೃಷಿಗೆ ಆದ್ಯತೆ ನೀಡಲು ಪ್ರಯತ್ನಿಸಲಾಗುವುದೆಂದು ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ತಿಳಿಸಿದ್ದಾರೆ.