HEALTH TIPS

No title

             ವಿದ್ಯಾಲಯಗಳಿಂದ ದೊರಕುವ ಶಿಕ್ಷಣ, ಸಂಸ್ಕಾರ,ಮೌಲ್ಯಗಳು ಅಮೂಲ್ಯವಾದುದು.
   ಕುಂಬಳೆ: ವಿದ್ಯಾಲಯಗಳಿಂದ ದೊರಕುವ ಶಿಕ್ಷಣ ಸಂಸ್ಕಾರ ಮತ್ತು ಮೌಲ್ಯಗಳು ಅಮೂಲ್ಯವಾದುದು.ಶಾಲಾ ಶಿಕ್ಷಕರು ಶಿಕ್ಷಣದೊಂದಿಗೆ ವಿದ್ಯಾಥರ್ಿಗಳ ಸುಂದರ ಬದುಕನ್ನು ರೂಪಿಸುವರು.ಗುರುಹಿರಿಯರಿಗೆ ನಾವು ನೀಡುವ ಗೌರವ ನಮಗೆ ಜೀವದಲ್ಲಿ ಮರಳಿ ದೊರೆಯುವುದು ಎಂದು  ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಹಷರ್ಾದ್ ಹೇಳಿದರು.
  ಚೇವಾರು ಶ್ರೀಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ  ವಾಷರ್ಿಕೋತ್ಸವವವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಗ್ರಾಮೀಣ ಪ್ರದೇಶಗಳ ಶಾಲೆಗಳಿಂದಲಾಗಿ ಕಾಸರಗೋಡಿನಲ್ಲಿ ಕನ್ನಡ ಉಳಿದಿದೆ. ಭಾಷೆ ಉಳಿದರೆ ಸಮಾಜ ಮತ್ತು ನಾಗರಿಕತೆ ಉಳಿಯುವುದು.ಮಕ್ಕಳನ್ನು ಮೊಬೈಲ್ನೊಂದಿಗೆ ಬೆಳೆಸದೆ ಪ್ರಕೃತಿಯೊಂದಿಗೆ ಬೆಳೆಯಲು ಬಿಡಬೇಕು.ವಿದ್ಯಾಥರ್ಿಗಳಿಂದ ಕೇವಲ ಅಂಕ ಪದವಿಗಳನ್ನು ಮಾತ್ರ ಬಯಸದೆ ತಾಯಂದಿರು ಮಕ್ಕಳಿಗೆ ಎಳವೆಯಲ್ಲಿ ಸಂಸ್ಕಾರದೊಂದಿಗೆ ಸೃಜನಶೀಲತೆಯನ್ನು ಕಲಿಸಬೇಕಾಗಿದೆ.ಮಾತಾಪಿತರನ್ನು ವೃದ್ಧ ಮಂದಿರಕ್ಕೆ ತಳ್ಳುವವರು ಉನ್ನತ ಶಿಕ್ಷಣ ಪಡೆದವರಾಗಿದ್ದು ಇವರು ಸಂಸ್ಕಾರ ಶೂನ್ಯರೆಂದರು.
   ಪೈವಳಿಕೆ ಗ್ರಾಮ ಪಂಚಾಯತು ಸದಸ್ಯ ಹರೀಶ್ ಬೊಟ್ಟಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದರು.ಪೆಮರ್ುದೆ ಚಚರ್ಿನ ಧರ್ಮಗುರು ವಂದನೀಯ ಮೆಲ್ವಿನ್ ಫೆನರ್ಾಂಡೀಸ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಡೀ ಪ್ರಪಂವವೇ ಒಂದು ಕುಟುಂಬವಾಗಿದೆ.ನಾವು ವಿಶ್ವಮಾನವರೆಂಬ ವಿಶ್ವಾಸವನ್ನು ಮಕ್ಕಳಲ್ಲಿ ಬೆಳೆಸಬೇಕು.ಮಕ್ಕಳ ರಕ್ಷಕರು ತಮ್ಮ ಜವಾಬ್ದಾರಿಯನ್ನು ಮರೆಯದೆ ಮಕ್ಕಳೊಂದಿಗೆ ಬೆರೆಯಬೇಕು.ಮಕ್ಕಳಿಗೆ ಹೆತ್ತವರು ಬಾಲ್ಯದಲ್ಲಿ ಸಮಯಕೊಟ್ಟಲ್ಲಿ ಮುಂದೆ ಅದನ್ನು ನಮಗೆ ಮರಳಿ ನೀಡುವರೆಂದರು.
  ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ವಿ.ದಿನೇಶ್, ಪೆಮರ್ುದೆ ಶಾಲಾ ಮುಖ್ಯಶಿಕ್ಷಕಿ ಶಾರದಾ ಎ.ಮಾತನಾಡಿದರು.
    ಮಂಜೇಶ್ವರ ಬಿ.ಆರ್.ಸಿ.ಯ ಸಮನ್ವಯಾಧಿಕಾರಿ ವಿಜಯಕುಮಾರ್,ಪೈವಳಿಕೆ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಅಚ್ಯುತ ಚೇವಾರ್,ಗಣ್ಯರಾದ ಹನೀಫ್ ಚೇವಾರು,ಅಜೀಜ್ ಚೇವಾರು,ಶಾಲಾ ವ್ಯವಸ್ಥಾಪಕ ಪ್ರತಿನಿಧಿ ಬಿ.ಶಂಕರನಾರಾಯಣ ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ನೂರುದ್ದೀನ್, ಮಾತೃಸಂಘದ ಅಧ್ಯಕ್ಷೆ ಕವಿತಾ ಆಚಾರ್ಯ ಪಟ್ಲ ಉಪಸ್ಥಿತರಿದ್ದರು.
  ಸಮಾರಂಭದಲ್ಲಿ ಸಾಯಿ ಮಿತ್ರಮಂಡಳಿಯ ಅಧ್ಯಕ್ಷ ನಾರಾಯಣ ಸಾಲ್ಯಾನ್ ನೀಡಿದ ಬೆಂಚುಗಳನ್ನು ಮತ್ತು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಾಲೆಗೆ ಕೊಡಮಾಡಿದ ಸ್ಟೀಲ್ ಪಾತ್ರೆಯನ್ನು ಸ್ವೀಕರಿಸಲಾಯಿತು. ಅಲ್ಲದೆ ಶಾಲೆಯ ಜೀವಕಾರುಣ್ಯ ಯೋಜನೆಯಲ್ಲಿ ಅರ್ಹ ಬಡಮಕ್ಕಳಿಗೆ ಕಿಟ್ ವಿತರಿಸಲಾಯಿತು,ಜಲ್ಲಾ ಮಟ್ಟದ ಸಂಸ್ಕೃತ ನಾಟಕೋತ್ಸವದಲ್ಲಿ ಪ್ರಥಮ ಸ್ಥಾನಪಡೆದ ವಿದ್ಯಾಥರ್ಿಗಳನ್ನು ಗೌರವಿಸಲಾಯಿತು.ಪ್ರತಿಭಾನ್ವಿತ ವಿದ್ಯಾಥರ್ಿಗಳನ್ನು ಪುರಸ್ಕರಿಸಲಾಯಿತು.ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಯು.ಶ್ಯಾಮ ಭಟ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.ಶಿಕ್ಷಕರಾದ ಪ್ರಸಾದ್,ರವಿ,ಪ್ರಮೀಳಾ,ಸರಸ್ವತಿ,ಪುಷ್ಪಲತಾ,ರಾಜೇಶ್ವರಿ ಸಹಕರಿಸಿದರು.ಅಧ್ಯಾಪಕ ಹಾರಿಸ್ ವಂದಿಸಿದರು.ಚೇವಾರು ವಿನೋದ ನಿರೂಪಿಸಿದರು.ಸಮಾರಂಧದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries